ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯ ಕಾರುಗಳ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಐ20 ಕೂಡ ಒಂದಾಗಿದೆ. ಕೊರಿಯಾದ ಕಾರು ತಯಾರಕ ಕಂಪನಿ ಹ್ಯುಂಡೈ ಈ ವರ್ಷದ ಮಾರ್ಚ್ ತಿಂಗಳಲ್ಲಿ ನಡೆದ ಜಿನೀವಾ ಮೋಟಾರ್ ಶೋನಲ್ಲಿ ಈ ಕಾರನ್ನು ಪರಿಚಯಿಸಿದ್ದರು.

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯ ಟರ್ಕಿ ದೇಶದ ಇಜ್ಮಿಟ್‌ನಲ್ಲಿ ಇತ್ತೀಚೆಗೆ ನವೀಕರಿಸಿದ ಉತ್ಪಾದನಾ ಕೇಂದ್ರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಐ20 ಕಾರಿನ ಉತ್ಪಾದನೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಇದೇ ಉತ್ಪಾದನಾ ಕೇಂದ್ರದಲ್ಲಿ ಸುಮಾರು 85,000 ಯುನಿಟ್‌ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಇದು ಐ20 ಕಾರಿನ ಒಟ್ಟು ಜಾಗತಿಕ ಉತ್ಪಾದನೆಯ ಶೇಕಡಾ 50 ರಷ್ಟಿದೆ.

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಇನ್ನು ಇಜ್ಮಿಟ್‌ನಲ್ಲಿ ತಯಾರಿಸಲಾಗುವ ಹೆಚ್ಚಿನ ಯುನಿಟ್‌ಗಳನ್ನು ಯುರೀಪ್ ಮಾರುಕಟ್ಟೆಗಳಿಗೆ ರಫ್ತು ಮಾಡುವ ನಿರೀಕ್ಷೆಗಳಿದೆ. ಇಜ್ಮಿಟ್ ಉತ್ಪಾದನಾ ಕೆಂದ್ರವನ್ನು ಹ್ಯುಂಡೈ ಮೋಟಾರ್ ಕಂಪನಿ ಮತ್ತು ಟರ್ಕಿಶ್ ಕಿಬರ್ ಗ್ರೂಪ್ ಜಂಟಿಯಾಗಿ ನಡೆಸುತ್ತಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಇನ್ನು ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಹ್ಯುಂಡೈ ಹೊಸ ಐ20 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಹ್ಯುಂಡೈ ಐ20 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ.

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಹೊಸ ಹ್ಯುಂಡೈ ಕಾರಿನ ಮುಂಭಾಗದಲ್ಲಿರು ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿದೆ. ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೆಡ್ ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸಲಾಗಿದೆ ದೊಡ್ಡ ಕ್ರೀಸ್ ಲೈನ್ ಗಳನ್ನು ಒಳಗೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಈ ಹೊಸ ಐ20 ಕಾರು ಸಾಕಷ್ಟು ಸ್ಪೋರ್ಟಿಯರ್ ಮತ್ತು ಸ್ಟೈಲಿಶ್ ಲುಕ್ ಅನ್ನು ಹೊಂದಿದೆ. ಈ ಐ20 ಕಾರಿನ ಹೊಸ ಲುಕ್ ಭಾರತದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ನೆರವಾಗುತ್ತದೆ. ಈ ಹೊಸ ಹ್ಯುಂಡೈ ಐ20 ಕಾರು ಈ ವರ್ಷದ ಹಬ್ಬದ ಸೀಸನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಹೊಸ ಹುಂಡೈ ಐ20 ಕಾರಿನ ಪಿಲ್ಲರ್‍‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಇನ್ನು ಈ ಹೊಸ ಕಾರಿನಲ್ಲಿ ಎರಡು ಟೇಲ್‍ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಟೇಲ್‍‍ಲೈಟ್ ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇದು ಹೊಸ ಹ್ಯುಂಡೈ ಕ್ರೆಟಾ ಕಾರಿನಲ್ಲಿರುವ ಸ್ಟಿಟಿಯರಿಂಗ್ ಮಾದರಿಯಲ್ಲಿದೆ. ಹೊಸ ಹ್ಯುಂಡೈ ಐ20 ಕಾರಿನಲ್ಲಿ ಬೋಸ್ ಸೌಂಡ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಅನ್ನು ಒಳಗೊಂಡಿದೆ. ಜೊತೆಗೆ ಬ್ಲೂ ಲಿಂಕ್ ಟೆಕ್ನಾಲಜಿಯನ್ನು ಕೂಡ ಹೊಂದಿರಲಿದೆ.

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಈ ಹೊಸ ಕಾರಿನಲ್ಲಿ 8.0 ಇಂಚಿನ ಡಿಜಿಟಲ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಮತ್ತು ಇತರ ಹಲವಾರು ಫೀಚರ್‍‍ಗಳನ್ನು ಹೊಂದಿದೆ. ಯುಎಸ್‌ಬಿ ಪೋರ್ಟ್‌ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಸಹ ಹೊಂದಿರಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಗ್ರ್ಯಾಂಡ್ ಐ10 ನಿಯೋಸ್ ಕಾರಿನಲ್ಲಿರುವಂತಹ 1.0 ಲೀಟರ್ ಪೆಟ್ರೋಲ್ ಟರ್ಬೊ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಈ ಎಂಜಿನ್ 100 ಬಿ‍‍ಹೆಚ್‍‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6-ಸ್ಪೀಡ್ ಐಎಂಟಿಯನ್ನು ಜೋಡಿಸುವ ಸಾಧ್ಯತೆಗಳಿದೆ. ಇನ್ನು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ಆಯ್ಕೆಯಾಗಿ ನೀಡಬಹುದು.

ಹೊಸ ಐ20 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹ್ಯುಂಡೈ

ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ ಮಾದರಿಯಂತೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಕಿಯಾ ಸೆಲ್ಟೋಸ್‌ನಿಂದ ಎರವಲು ಪಡೆದ 1.5-ಲೀಟರ್ ಡಿಟೂನ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಒಟ್ಟಾರೆಯಾಗಿ ಮೂರನೇ ತಲೆಮಾರಿನ ಹ್ಯುಂಡೈ ಐ20 ಹಲವಾರು ಹೊಸ ಫೀಚರ್ ಗಳೊಂದಿಗೆ ನಯ ಲುಕ್ ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Article Published On: Thursday, September 24, 2020, 13:52 [IST]
English summary
Next-Gen Hyundai i20 Production Commenced At Turkey Plant. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+