ಹೊಸ ಮಹೀಂದ್ರಾ ಥಾರ್ ಖರೀದಿಗೆ ಬುಕ್ಕಿಂಗ್ ಆರಂಭ

ಬಹುನಿರೀಕ್ಷಿತ ಐಕಾನಿಕ್ ಆಫ್-ರೋಡರ್ 2020ರ ಥಾರ್ ಅನ್ನು ಬಿಡುಗಡೆಗೊಳಿಸುವುದಕ್ಕೆ ಮಹೀಂದ್ರಾ ಕಂಪನಿಯು ಸಜ್ಜಾಗಿದೆ. ಇದೀಗ ಈ ಬಹುನಿರೀಕ್ಷಿತ ಮಹೀಂದ್ರಾ ಥಾರ್ ಎಸ್‍ಯುವಿಗೆ ಅನಧಿಕೃತವಾಗಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಹೊಸ ಮಹೀಂದ್ರಾ ಥಾರ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಮಹೀಂದ್ರಾ ಥಾರ್ ಎಸ್‍ಯುವಿಗಾಗಿ ಅನಧಿಕೃತವಾಗಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ ಎಂದು ವರದಿಗಳು ಪ್ರಕಟವಾಗಿದೆ. ಆದರೆ ಬುಕ್ಕಿಂಗ್ ಮಾಡಲು ಟೋಕನ್ ಮೊತ್ತ ಮತ್ತು ಇತರ ಮಾಹಿತಿಗಳು ಇನ್ನು ಕೂಡ ಲಭ್ಯವಾಗಿಲ್ಲ. ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿರುವುದರಿಂದ ಶೀಘ್ರದಲ್ಲೇ ಈ ಹೊಸ ಮಹೀಂದ್ರಾ ಥಾರ್ ಅನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಮಹೀಂದ್ರಾ ಥಾರ್ ಖರೀದಿಗೆ ಬುಕ್ಕಿಂಗ್ ಆರಂಭ

ಮಹೀಂದ್ರಾ ಕಂಪನಿಯು ಈ ಥಾರ್ ಎಸ್‍ಯುವಿಯನ್ನು ಭಾರತೀಯ ಆಟೋಮೊಬೈಲ್ ಕ್ಷೇತ್ರದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸ್ಪಾಟ್ ಟೆಸ್ಟ್ ನಡೆಸಿದ ಎಸ್‍ಯುವಿ ಎಂದು ಹೇಳಬಹುದು. ನಿಮಗೆ ಅಚ್ಚರಿಯಾಗಬಹುದು ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯ ಸ್ಪಾಟ್ ಟೆಸ್ಟ್ ಸುಮಾರು ಮೂರು ವರ್ಷಗಳಿಂದ ಪ್ರಾರಂಭಿಸಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಮಹೀಂದ್ರಾ ಥಾರ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಥಾರ್ ನಲ್ಲಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗುತ್ತಿದೆ. ಹೊಸ ಥಾರ್‍‍ನಲ್ಲಿ ಫ್ಲೋಟಿಂಗ್ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದು ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ವನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಮಹೀಂದ್ರಾ ಥಾರ್ ಖರೀದಿಗೆ ಬುಕ್ಕಿಂಗ್ ಆರಂಭ

2020ರ ಥಾರ್‍‍‍ನಲ್ಲಿರುವ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ತನ್ನ ಬ್ರ್ಯಾಂಡ್‍ನ ಸರಣಿಯಲ್ಲಿರುವ ಟಿ‍ಯುವಿ 300 ಎಸ್‍‍ಯುವಿಯಲ್ಲಿರುವ ಕ್ಲಸ್ಟರ್‍ ಅನ್ನು ಹೋಲುವಂತಿದೆ. ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಡಿಜಿಟಲ್ ಡಿಸ್‍‍ಪ್ಲೇ ಯುನಿ‍‍ಟ್‍ನೊಂದಿಗೆ ಎರಡು ಅನಲಾಗ್ ಡಯಲ್‍ಗಳನ್ನು ಒಳಗೊಂಡಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಮಹೀಂದ್ರಾ ಥಾರ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಮಹೀಂದ್ರಾ ಥಾರ್‍‍ನ 4×4 ಲಿವರ್ ವಿಭಿನ್ನವಾಗಿದೆ. ಇದರಲ್ಲಿ 2ಡಬ್ಲ್ಯುಡಿ(ಆರ್‍‍ಡಬ್ಲ್ಯುಡಿ) ಹೈ, 4ಡಬ್ಲ್ಯುಡಿ ಹೈ ಮತ್ತು 4 ಡಬ್ಲ್ಯು ಡಿ ಲೋ ಎಂಬ ಮೂರು ಮೋಡ್‍‍ಗಳಿವೆ. 2020ರ ಮಹೀಂದ್ರಾ ಥಾರ್ ಎಸ್‍‍ಯುವಿಯನ್ನು ಸಾಫ್ಟ್ ಟಾಪ್ ಹಾಗೂ ಹಾರ್ಡ್ ಟಾಪ್ - ಎಂಬ ಎರಡು ಡೋರ್ ಬಾಡಿ ಸ್ಟೈಲ್‌ಗಳಲ್ಲಿ ನೀಡಲಾಗುವುದು.

ಹೊಸ ಮಹೀಂದ್ರಾ ಥಾರ್ ಖರೀದಿಗೆ ಬುಕ್ಕಿಂಗ್ ಆರಂಭ

ಎಸ್‍‍ಯುವಿಯ ಹೊರಭಾಗವು ಜೀಪ್ ಶೈಲಿಯ ವಿನ್ಯಾಸವನ್ನು ಹೊಂದಿದ್ದರೆ, ಇಂಟಿರಿಯರ್ ಅನ್ನು ಹೆಚ್ಚು ಅಪ್‍‍ಡೇಟ್ ಮಾಡಲಾಗಿದೆ. ಮಾರುಕಟ್ಟೆಯಲ್ಲಿರುವ ಥಾರ್ 2.5 ಲೀಟರ್ ಡೀಸೆಲ್ ಬಿಎಸ್ 4 ಎಂಜಿನ್‌ ಹೊಂದಿದೆ. ಈ ಎಂಜಿನ್ 105 ಬಿ‍‍ಹೆಚ್‌ಪಿ ಪವರ್ ಹಾಗೂ 247 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಹೊಸ ಮಹೀಂದ್ರಾ ಥಾರ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಥಾರ್ 120 ಬಿ‍‍ಹೆಚ್‌ಪಿ ಪವರ್ ಉತ್ಪಾದಿಸುವ 2.0 ಲೀಟರ್ ಡೀಸೆಲ್ ಬಿಎಸ್ 6 ಎಂಜಿನ್ ಹೊಂದಿರಲಿದೆ. ಹೊಸ ಫೀಚರ್, ದೊಡ್ಡ ಗಾತ್ರದ ಬಾಡಿ, ಬಲಶಾಲಿಯಾದ ಬಿಎಸ್ 6 ಡೀಸೆಲ್ ಎಂಜಿನ್ ಹೊಂದಲಿರುವ ಹೊಸ ಥಾರ್‌ನ ಬೆಲೆಯು ಮಾರುಕಟ್ಟೆಯಲ್ಲಿರುವ ಥಾರ್‌ಗಿಂತ ಹೆಚ್ಚಾಗುವ ಸಾಧ್ಯತೆಗಳಿವೆ.

ಹೊಸ ಮಹೀಂದ್ರಾ ಥಾರ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ 2020ರ ಥಾರ್ 2 ಡೋರಿನ ರೂಪಾಂತರವಾಗಿದೆ. ಹೊಸ ಥಾರ್‍‍ನಲ್ಲಿ 5 ಸ್ಪೋಕ್ ವಿನ್ಯಾಸದ ದೊಡ್ಡ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಅಲಾಯ್ ವ್ಹೀಲ್‍‍ಗಳಲ್ಲಿ 235 ಅಥವಾ 245 ಸೆಕ್ಷನ್ ಟಯರ್‍‍ಗಳನ್ನು ನೀಡಲಾಗುತ್ತದೆ.

Article Published On: Friday, June 5, 2020, 17:05 [IST]
English summary
2020 Mahindra Thar pre-bookings begin unofficially. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+