ವಿವಿಧ ವೆರಿಯೆಂಟ್‌ಗಳೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಮಹೀಂದ್ರಾ ನ್ಯೂ ಜನರೇಷನ್ ಥಾರ್

ಇದೇ ತಿಂಗಳು 15ರಂದು ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿರುವ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೊಳ್ಳುತ್ತಿದ್ದು, ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಮುಂದುವರಿಸಲಾಗಿದೆ.

ವಿವಿಧ ವೆರಿಯೆಂಟ್‌ಗಳೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಹೊಸ ಥಾರ್

ಹೊಸ ಥಾರ್ ಮೂಲಕ ಆಫ್-ರೋಡ್ ಕಾರು ಮಾರಾಟದಲ್ಲಿ ಮತ್ತೊಮ್ಮೆ ಸದ್ದು ಮಾಡುವ ನೀರಿಕ್ಷೆಯಲ್ಲಿರುವ ಮಹೀಂದ್ರಾ ಕಂಪನಿಯು ಈ ಬಾರಿ ಹೊಸ ಕಾರಿನಲ್ಲಿ ಭಾರೀ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನಲ್ಲಿ ಈ ಬಾರಿ ಡೀಸೆಲ್ ಮಾದರಿ ಮಾತ್ರವಲ್ಲದೆ ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ವಿವಿಧ ವೆರಿಯೆಂಟ್‌ಗಳೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಹೊಸ ಥಾರ್

ಡೀಸೆಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಗಳಲ್ಲೂ ಖರೀದಿಗೆ ಲಭ್ಯವಿಲಿರುವ ಹೊಸ ಥಾರ್ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದ್ದು, ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ವಿವಿಧ ವೆರಿಯೆಂಟ್‌ಗಳೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಹೊಸ ಥಾರ್

ಹೊಸ ಥಾರ್ ನಲ್ಲಿ ಈ ಬಾರಿ ನವೀಕರಿಸಿದ 2.0-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಜೊತೆಗೆ ಹೊಸದಾಗಿ 2.0-ಲೀಟರ್ ಟರ್ಬೋ ಪೆಟ್ರೋಲ್ ಎಂ-ಸ್ಟಾಲಿನ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿರಲಿದೆ.

ವಿವಿಧ ವೆರಿಯೆಂಟ್‌ಗಳೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಹೊಸ ಥಾರ್

ಡೀಸೆಲ್ ಮಾದರಿಯು 140-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದಲ್ಲಿ ಪೆಟ್ರೋಲ್ ಮಾದರಿಯು 180-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಎರಡು ಎಂಜಿನ್ ಮಾದರಿಯಲ್ಲೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿರಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ವಿವಿಧ ವೆರಿಯೆಂಟ್‌ಗಳೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಹೊಸ ಥಾರ್

ಜೊತೆಗೆ ಬಿಎಸ್-6 ವೈಶಿಷ್ಟ್ಯತೆಗಳಿಂದಾಗಿ ಮಹೀಂದ್ರಾ ಹೊಸ ಕಾರುಗಳಲ್ಲಿ ಈ ಬಾರಿ ಹಲವಾರು ಬದಲಾವಣೆಗಳಾಗಿದ್ದು, ಹೊಸ ಕಾರಿನಲ್ಲಿ ಡ್ಯುಯಲ್ ಗೇರ್ ನಾಬ್ ಜೊತೆಗೆ 18-ಇಂಚಿನ ಆಲ್ ಟೆರೆನ್ ವೀಲ್ಹ್, ದೊಡ್ಡ ಗಾತ್ರದ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.

ವಿವಿಧ ವೆರಿಯೆಂಟ್‌ಗಳೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಹೊಸ ಥಾರ್

4x4 ಕಾರುಗಳ ಅತ್ಯಾವಶ್ಯಕವಾಗಿ ಬೇಕಿರುವ ಡ್ಯುಯಲ್ ಗೇರ್ ನಾಬ್ ಸೌಲಭ್ಯವು ಆಫ್-ರೋಡ್ ಕೌಶಲ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಣಾ ವೈಶಿಷ್ಟ್ಯತೆ ಹೊಂದಿದ್ದು, ಪ್ರತ್ಯೇಕವಾಗಿ ಚಕ್ರಗಳ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ಈ ಸೌಲಭ್ಯವು ಹೆಚ್ಚು ಜನಪ್ರಿಯವಾಗುತ್ತಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ವಿವಿಧ ವೆರಿಯೆಂಟ್‌ಗಳೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಹೊಸ ಥಾರ್

ಇನ್ನು ಹೊಸ ಥಾರ್ ಕಾರಿನಲ್ಲಿ ಬ್ಯಾಕ್ಔಟ್ ಅಯಾಲ್ ವೀಲ್ಹ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರಲಿದ್ದು, ಬೆಲೆಯು ಕೂಡಾ ತುಸು ದುಬಾರಿಯಾಗಿರಲಿದೆ.

Article Published On: Wednesday, August 12, 2020, 11:23 [IST]
English summary
2020 Mahindra Thar Spotted Testing Ahead Of Unveil. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+