ಸಿಯಾಜ್ ಕಾರಿನ ಆಕರ್ಷಕ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ಹಲವಾರು ಜನಪ್ರಿಯ ಮಾದರಿಗಳನ್ನು ಮಾರಾಟ ಮಾಡುತ್ತಾರೆ. ಇದರಲ್ಲಿ ಸಿಯಾಜ್ ಕಾರು ಕೂಡ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

ಈ ಜನಪ್ರಿಯ ಮಿಡ್ ಸೆಡಾನ್ ಆದ ಮಾರುತಿ ಸಿಯಾಜ್ ಕಾರು ಸಿ ಸೆಗ್‍ಮೆಂಟ್‍ನಲ್ಲಿ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಸ್ಕೋಡಾ ರ್ಯಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಈ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದ್ದರು. ಇತ್ತೀಚೆಗೆ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದ್ದರು. ಇದೀಗ ಮಾರುತಿ ಸಿಯಾಜ್ ಕಾರಿನ ಆಕರ್ಷಕ ಟಿವಿಸಿ ವೀಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ.

ಹೊಸ ಮಾರುತಿ ಸುಜುಕಿ ಸಿಯಾಜ್ ಆಲ್ಫಾ ರೂಪಾಂತರವನ್ನು ಆಧರಿಸಿದೆ ಮತ್ತು ಬಿಎಸ್-6 ಎಂಜಿನ್ ಅನ್ನು ಹೊಂದಿದೆ. ಹೊಸ ಮಾರುತಿ ಸುಜುಕಿ ಸಿಯಾಜ್ ಎಸ್ ಕಾರು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿದ್ದರು.
MOST READ: ಡೀಲರ್ ಬಳಿ ತಲುಪಿದ ಹೊಸ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಸಿ-ಸೆಗ್‍ಮೆಂಟ್ ಸೆಡಾನ್ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಹೊಸ ಸಿಯಾಜ್ ಎಸ್ ಕಾರು ಮೂರು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಅವುಗಳು ಪ್ರೀಮಿಯಂ ಸಿಲ್ವರ್, ಸ್ನೋ ವೈಟ್ ಮತ್ತು ಸಾಂಗ್ರಿಯಾ ರೆಡ್ ಬಣ್ಣಗಳಾಗಿದೆ.

ಟಾಪ್ ಸ್ಪೆಕ್ ಸಿಯಾಜ್ ಎಸ್ ಕಾರಿನ ಕಾಸ್ಮೆಟಿಕ್‍ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಬ್ಲ್ಯಾಕ್ ಒಆರ್‍ವಿಎಂಗಳು, ಕಪ್ಪು ಬಣ್ಣದ 16 ಇಂಚಿನ ಅಲಾಯ್ ವ್ಹೀಲ್‍ಗಳು, ಬೂಟ್ ಲಿಡ್ ಮತ್ತು ನವೀಕರಿಸಿದ ಫಾಂಗ್ ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಹೊಸ ಸಿಯಾಜ್ ಕಾರಿನ ಇಂಟಿರಿಯರ್‍ನಲ್ಲಿ ಕೂಡ ಹಲವಾರು ಸ್ಪೋರ್ಟಿ ನವೀಕರಣಗಳನ್ನು ಮಾಡಲಾಗಿದೆ. ಇದರಲ್ಲಿ ಡ್ಯಾಶ್‍ಬೋರ್ಡ್‍ನಲ್ಲಿ ಬ್ಲ್ಯಾಕ್ ಮತ್ತು ಸಿಲ್ವರ್ ಆಕ್ಸೆಂಟ್‍ಗಳು, ಡೋರ್ ಟ್ರಿಮ್ಸ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಸೇರಿವೆ.

ಮಾರುತಿ ಸಿಯಾಜ್ ಬಿಎಸ್-6 ಎಂಜಿನ್ ಅನ್ನು ಹೊಂದಿದೆ. ಮಾರುತಿ ಸಿಯಾಜ್ ಎಸ್ ಕಾರಿನಲ್ಲಿ ಬಿಎಸ್-6, 1.5 ಲೀಟರ್ ಕೆ 15 ಸೀರಿಸ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್
ಈ ಎಂಜಿನ್ 104 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಫೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವಟರ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಮಾರುತಿ ಸುಜುಕಿಯ ಎಸ್‍ಹೆಚ್‍ವಿಎಸ್ ಸ್ಮಾರ್ಟ್ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದೆ.

ಮೇಲಿನ ಬದಲಾವಣೆಗಳ ಹೊರತಾಗಿ ಸಿಯಾಜ್ ಎಸ್ ಕಾರಿನಲ್ಲಿ ಇತರೆ ಯಾವುದೇ ಬದಲಾವಣೆಗಳಿಲ್ಲ. ಇನ್ನು ಸಿಯಾಜ್‍ನಲ್ಲಿ ದೊಡ್ಡ ಟಚ್‍ಸ್ಕ್ರೀನ್ ಇನ್ಫೋಟೆನ್‍ಮೆಂಟ್ ಸಿಸ್ಟಂ, ಕೀ ಲೆಸ್ ಎಂಟ್ರಿ, ಮಲ್ಟಿಪಲ್ ಏರ್‍ಬ್ಯಾಗ್, ಇಬಿಡಿಯೊಂದಿಗೆ ಎಬಿಎಸ್, ಆಟೋಮ್ಯಾಟಿಕ್ ಕ್ಲೈಮೆಂಟ್ ಮತ್ತು ಇತರ ಫೀಚರ್ಸ್‍ಗಳನ್ನು ಹೊಂದಿದೆ.


Click it and Unblock the Notifications