ಬಿಎಸ್-6 ಸೂಪರ್ ಕ್ಯಾರಿ ಮಾದರಿಯ ಬೆಲೆ ಹೆಚ್ಚಿಸಿದ ಮಾರುತಿ ಸುಜುಕಿ
ದೇಶದ ಅತಿ ದೊಡ್ಡ ವಾಹನ ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ ತನ್ನ ಬಿಎಸ್-6 ಸೂಪರ್ ಕ್ಯಾರಿ ಮಾದರಿಯನ್ನು ಈ ವರ್ಷದ ಮೇ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಮಾರುತಿ ಸುಜುಕಿ ಕಂಪನಿಯು ಈ ಬಿಎಸ್-6 ಸೂಪರ್ ಕ್ಯಾರಿ ಮಾದರಿಯ ಬೆಲೆಯನ್ನು ಪರಿಷ್ಕರಿಸಿದೆ.

ಮಾರುತಿ ಸುಜುಕಿ ಕಂಪನಿಯು ತನ್ನ ಸೂಪರ್ ಕ್ಯಾರಿ ಮಾದರಿಯ ಬೆಲೆಯನ್ನು ಸುಮಾರು ರೂ.18,000 ಗಳವರೆಗೆ ಹೆಚ್ಚಿಸಿದೆ. ಇದೀಗ ಈ ಬಿಎಸ್-6 ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಾದರಿಯ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.4.25 ಲಕ್ಷದಿಂದ ರೂ.5.18 ಲಕ್ಷಗಳಾಗಿದೆ. ಮಾರುತಿ ಸೂಪರ್ ಕ್ಯಾರಿ ವಾಹನವು ಬಿಎಸ್-6 ಆಗಿರುವ ಭಾರತದ ಮೊದಲ ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್ಸಿವಿ) ಆಗಿದೆ.

ಈ ಸೂಪರ್ ಕ್ಯಾರಿ ಸಿಎನ್‌ಜಿಯು ಸ್ಮಾರ್ಟ್ ಹೈಬ್ರಿಡ್ ವಾಹನಗಳನ್ನು ಒಳಗೊಂಡಿರುವ ಬ್ರಾಂಡ್‌ನ 'ಮಿಷನ್ ಗ್ರೀನ್ ಮಿಲಿಯನ್'ನ ಭಾಗವಾಗಿದೆ. ಮಾರುತಿ ಸೂಪರ್ ಕ್ಯಾರಿ ವಾಹನವು ಮೂರು ವರ್ಷಗಳ ಅವಧಿಯಲ್ಲಿ 50,000 ಯುನಿಟ್ ಮಾರಾಟದ ಮೂಲಕ ಹೊಸ ಮೈಲಿಗಲ್ಲನ್ನು ದಾಖಲಿಸಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ವಿಶೇಷವಾಗಿ ಮಿನಿ ಲೈಟ್ ಕಮರ್ಷಿಯಲ್ ವೆಹಿಕಲ್ ವಿಭಾಗದ ವಾಹನಗಳ ಬಳೆಕೆದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸೂಪರ್ ಕ್ಯಾರಿಯು ಹೆಚ್ಚು ಪವರ್, ವಿಶಾಲವಾದ ಸ್ಪೇಸ್, ಉತ್ತಮ ಗುಣಮಟ್ಟ ಮತ್ತು ಬಹುಮುಖ ಡೆಕ್ ಅನ್ನು ಹೊಂದಿದೆ.

ಸೂಪರ್ ಕ್ಯಾರಿ ವಾಹನವು ವ್ಯವಹಾರಗಳು ತಮ್ಮ ಲಾಭದಾಯಕತೆಯನ್ನು ಹೆಚ್ಚಿಸಲು ಸಹಾಯ ಮಾಡಿತ್ತದೆ, ಇದು ಪ್ರಾರಂಭವಾದ ಕೇವಲ ಎರಡು ವರ್ಷಗಳಲ್ಲಿ ಈ ಮಾದರಿಯು ಎರಡನೇ ಅತಿ ಹೆಚ್ಚು ಮಾರಾಟವಾದ ವಾಹನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬೈ-ಫ್ಯೂಯಲ್ ಎಸ್-ಸಿಎನ್‌ಜಿ ರೂಪಾಂತರವನ್ನು ಸಣ್ಣ ವಾಣಿಜ್ಯ ಉದ್ಯಮದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈಗಾಗಲೇ ಸೂಪರ್ ಕ್ಯಾರಿ ಮಾರಾಟಕ್ಕೆ ಸುಮಾರು 8% ಕೊಡುಗೆ ನೀಡುತ್ತದೆ.

ಮಾರುತಿ ಸುಜುಕಿ ಸೂಪರ್ ಕ್ಯಾರಿಯು ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6000 ಆರ್‌ಪಿಎಂನಲ್ಲಿ 64 ಬಿಹೆಚ್‍ಪಿ ಪವರ್ ಮತ್ತು 85 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಭೂಪ್ರದೇಶಗಳಲ್ಲಿ ಗರಿಷ್ಠ ಕಾರ್ಯಕ್ಷಮತೆ, ವರ್ಧಿತ ಡ್ರೈವಿಬಿಲಿಟಿ ನೀಡಲು ವಿಶೇಷವಾಗಿ ಟ್ಯೂನ್ ಮಾಡಲಾಗಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಮಾರುತಿ ಸುಜುಕಿ ಸೂಪರ್ ಕ್ಯಾರಿಯು ದೇಶದ ಮೊದಲ 4 ಸಿಲಿಂಡರ್ ಚಾಲಿತ ಮಿನಿ ಟ್ರಕ್ ಕಮರ್ಷಿಯಲ್ ವಾಹನವಾಗಿದೆ. ಈ ವಾಹನವು ಹಲವಾರು ಫೀಚರ್ ಗಳನ್ನು ಹೊಂದಿದೆ. ಇದರಲ್ಲಿ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಸೀಟ್-ಬೆಲ್ಟ್ ರಿಮೈಂಡರ್, ಲಾಕ್ ಮಾಡಬಹುದಾದ ಗ್ಲೋವ್‌ಬಾಕ್ಸ್, ದೊಡ್ಡ ಲೋಡಿಂಗ್ ಡೆಕ್ ಮತ್ತು ಇನ್ನೂ ಹಲವು ಫೀಚರ್ ಗಳನ್ನು ಹೊಂದಿದೆ.

ಹೊಸ ಮಾರುತಿ ಸುಜುಕಿ ಸೂಪರ್ ಕ್ಯಾರಿ ಭಾರತದಲ್ಲಿ ಟಾಟಾ ಏಸ್ ಗೆ ಪೈಪೋಟಿಯನ್ನು ನೀಡುತ್ತದೆ. ಸೂಪರ್ ಕ್ಯಾರಿ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್ಸಿವಿ) ಆಗಿದೆ. ಮಾರುತಿ ಸುಜುಕಿ ಸೂಪರ್ ಕ್ಯಾರಿಯು ದೇಶದ ಮೊದಲ 4 ಸಿಲಿಂಡರ್ ಚಾಲಿತ ಮಿನಿ ಟ್ರಕ್ ಎಂಬ ಹೆಗ್ಗಳಿಕೆಯೊಂದಿಗೆ ಹಲವಾರು ವಿಶೇಷತೆಗಳನ್ನು ಒಳಗೊಂಡಿವೆ.


Click it and Unblock the Notifications








