ಹೊಸ ಟರ್ಬೋ ಎಂಜಿನ್‌ನೊಂದಿಗೆ ಅನಾವರಣವಾಯ್ತು 2020ರ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್
ಫ್ರೆಂಚ್ ವಾಹನ ತಯಾರಕ ಕಂಪನಿಯಾದ ರೆನಾಲ್ಟ್ ತನ್ನ 2020ರ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರನ್ನು ರಷ್ಯಾದಲ್ಲಿ ಅನಾವರಣಗೊಳಿಸಿದೆ. ಹೂಸ ವಿನ್ಯಾಸ ಮತ್ತು ಹೊಸ ಟರ್ಬೋ ಎಂಜಿನ್‌ನೊಂದಿಗೆ 2020ರ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರನ್ನು ಅನಾವರಣಗೊಳಿಸಲಾಗಿದೆ.

ಈ ಹೊಸ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರಿನ ಸ್ಟೈಲಿಂಗ್‌ನಲ್ಲಿ ಸಾಕಷ್ಟು ಬದಲಾವಣೆಗಳೊಂದಿಗೆ ಅನಾವರಣಗೊಳಿಸಲಾಗಿದೆ, ರೆನಾಲ್ಟ್ ಕಂಪನಿಯು ಈ ಕಾರನ್ನು ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ರಾಸ್‌ಒವರ್ ಅನ್ನು ಮಾರಾಟ ಮಾಡುತ್ತಾರೆ. ಯುರೋಪಿಯನ್ ಮಾರುಕಟ್ಟೆಗಳು ಇದನ್ನು ರೆನಾಲ್ಟ್ ಕ್ಲಿಯೊಗೆ ಆಧಾರವಾಗಿರುವ ಸಿಎಮ್ಎಫ್-ಬಿ ಪ್ಲಾಟ್‌ಫಾರ್ಮ್‌ನಿಂದ ಮಾರಾಟ ಮಾಡಲಾಗುತ್ತದೆ. ಇನ್ನು ರಷ್ಯಾ, ಭಾರತ ಮತ್ತು ಬ್ರೆಜಿಲ್ ‘ಎಂ 0' ಪ್ಲಾಟ್‌ಫಾರ್ಮ್ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ‘ಎಂ 0' ಪ್ಲಾಟ್‌ಫಾರ್ಮ್ ಅಡಿಯಲ್ಲಿ ಮುಂದಿನ ವರ್ಷ ಭಾರತದಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸಲಾಗುತ್ತದೆ. ಇನ್ನು ಭಾರತದಲ್ಲಿಯು ಕೂಡ ಹೊಸ ವಿನ್ಯಾಸದಲ್ಲಿ ಬಿಡುಗಡೆಗೊಳಿಸಬಹುದು.
MOST READ: ತಡವಾಗಲಿದೆ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿ ಬಿಡುಗಡೆ

2020ರ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್ ಹೊಸ ಗ್ರಿಲ್ ಪ್ಯಾಟರ್ನ್, ಹೊಸ ಬಣ್ಣದ ಆಯ್ಕೆಗಳು ಮತ್ತು ಐದು-ಸ್ಪೋಕ್ 16-ಇಂಚಿನ ಅಲಾಯ್ ವೀಲ್‌ಗಳಿಂದ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ.

ಇದರೊಂದಿಗೆ ಹೊಸ ಮೂರು-ಸ್ಪೀಕ್ ಸ್ಟೀಟಿಯರಿಂಗ್ ವ್ಹೀಲ್, ಹೆಚ್ಚುವರಿ ಡ್ಯಾಶ್‌ಬೋರ್ಡ್ ಪ್ಯಾನೆಲಿಂಗ್ ಹೊಂದಾಣಿಕೆಯ ಎಕ್ಸ್ ಟಿರಿಯರ್ ಶೇಡ್, 8.0-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ(+1.0 ಇಂಚು) ಮತ್ತು ಗೇರ್ ಲಿವರ್‌ನ ಮುಂದೆ ಕೆಲವು ಹೆಚ್ಚುವರಿ ಬಟನ್ ಗಳನ್ನು ಪಡೆಯುತ್ತದೆ
MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಮಾರುತಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿ

ರಷ್ಯಾದಲ್ಲಿ, 2020 ಮೈ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್ ಹಿಟಡ್ ಸ್ಟೀಟಿಯರಿಂಗ್ ವ್ಹೀಲ್, ಹಿಟಡ್ ಸೀಟುಗಳು, ಪ್ರೀಮಿಯಂ ಬೋಸ್ ಸರೌಂಡ್ ಸೌಂಡ್ ಸಿಸ್ಟಮ್, ಎಂಟು ಬಣ್ಣಗಳ ಎಂಬಿಯಟ್ ಲೈಟ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಸರೌಂಡ್-ವ್ಯೂ ಕ್ಯಾಮೆರಾ, ರಿಮೋಟ್ ಎಂಜಿನ್ ಸ್ಟಾರ್ಟ್ ಮತ್ತು ಇತರ ಫೀಚರ್ ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರು ನಾಲ್ಕು ಸಿಲಿಂಡರ್ ಪೆಟ್ರೋಲ್ ಹೆಚ್4ಕೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಬಿಎಸ್- 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಇನ್ನು ಇದರೊಂದಿಗೆ ಹೆಚ್‍ಆರ್13 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 154 ಬಿಹೆಚ್‍ಪಿ ಪವರ್ ಮತ್ತು 254 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 8-ಹಂತದ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿರಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಹೊಸ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲಿದೆ. ಈ ಕಾರಿನಲ್ಲಿ ಹೊಸ ಟರ್ಬೂ ಎಂಜಿನ್ ಅನ್ನು ಹೊಂದಿರಲಿದೆ. ಇದರ ಬೆಲೆಯು ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.


Click it and Unblock the Notifications