ವಿದೇಶದಲ್ಲಿ ಬಿಡುಗಡೆಯಾಯ್ತು 2020ರ ಮಾರುತಿ ಸಿಯಾಜ್ ಫೇಸ್‍ಲಿಫ್ಟ್ ಕಾರು
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್(ಎಂಎಸ್ಐಎಲ್) ಕಂಪನಿಯು ತನ್ನ ಫೇಸ್‍ಲಿಫ್ಟ್ ಕಾರನ್ನು ಥೈಲ್ಯಾಂಡ್‍ನಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ ಸಿಯಾಜ್ ಫೇಸ್‍ಲಿಫ್ಟ್ ಕಾರು 1.25 ಲೀಟರ್ ಎಂಜಿನ್ ಅನ್ನು ಹೊಂದಿದೆ.

ಥೈಲ್ಯಾಂಡ್‍ನಲ್ಲಿ ಬಿಡುಗಡೆಗೊಳಿಸಲಾದ ಹೊಸ ಸಿಯಾಜ್ ಫೇಸ್‍ಲಿಫ್ಟ್ ಕಾರಿನಲ್ಲಿ 1.25 ಲೀಟರ್ ಎಂಜಿನ್ 91 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.ಹೊಸ ಸಿ-ಸೆಗ್‍ಮೆಂಟ್ ಸೆಡಾನ್ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಹೊಸ ಸಿಯಾಜ್ ಕಾರು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಯಾಗಿದೆ.

ಈ ಹೊಸ ಸಿಯಾಜ್ ಕಾರು ಭಾರತೀಯ ಮಾದರಿಯ ರೀತಿಯ ವಿನ್ಯಾಸವನ್ನು ಹೊಂದಿದೆ. ಈ ಕಾರಿನಲ್ಲಿ ಹೊಸ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಇಂಟಿಗ್ರೇಟೆಡ್ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.

ಹೊಸ ಮಾರುತಿ ಸುಜುಕಿ ಸಿಯಾಜ್ ಎಸ್ ಕಾರಿನ ಕಾಸ್ಮೆಟಿಕ್‍ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹೊಸ ಕಾರಿನಲ್ಲಿ ಬ್ಲ್ಯಾಕ್ ಒಆರ್‍ವಿಎಂಗಳು ಮತ್ತು ಕಪ್ಪು ಬಣ್ಣದ 16 ಇಂಚಿನ ಅಲಾಯ್ ವ್ಹೀಲ್ ಮತ್ತು 565 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಹೊಸ ಸಿಯಾಜ್ ಕಾರಿನ ಇಂಟಿರಿಯರ್‍ನಲ್ಲಿ ಕೂಡ ಹಲವಾರು ಸ್ಪೋರ್ಟಿ ನವೀಕರಣಗಳನ್ನು ಮಾಡಲಾಗಿದೆ. ಇದರಲ್ಲಿ ಡ್ಯಾಶ್‍ಬೋರ್ಡ್‍ನಲ್ಲಿ ಬ್ಲ್ಯಾಕ್ ಮತ್ತು ಸಿಲ್ವರ್ ಆಕ್ಸೆಂಟ್‍ಗಳು, ಡೋರ್ ಟ್ರಿಮ್ಸ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಸೇರಿವೆ.

ಇನ್ನು ಸಿಯಾಜ್‍ನಲ್ಲಿ ಕೀ ಲೆಸ್ ಎಂಟ್ರಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಆಂಟಿ-ಲಾಕ್ ಬ್ರೇಕ್, ಇಬಿಡಿ, ಬ್ರೇಕ್ ಅಸಿಸ್ಟ್, ಆಟೋಮ್ಯಾಟಿಕ್ ಕ್ಲೈಮೆಂಟ್ ಮತ್ತು ಇತರ ಫೀಚರ್ಸ್‍ಗಳನ್ನು ಹೊಂದಿದೆ.

ಹೊಸ ಸಿಯಾಜ್ ಕಾರಿನ ಇಂಟಿರಿಯರ್ ಹೆಚ್ಚು ಪ್ರೀಮಿಯಂ ಆಗಿದೆ. ವಿದೇಶದಲ್ಲಿ ಬಿಡುಗಡೆಯಾದ ಸಿಯಾಜ್ ಕಾರಿನ ಇಂಟಿರಿಯರ್ ಭಾರತೀಯ ಮಾದರಿಯ ರೀತಿಯಲ್ಲೇ ಬೀಜ್ ಬಣ್ಣ ಮತ್ತು ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ.

ಇದರೊಂದಿಗೆ ಆ್ಯಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಮಿರರ್ಲಿಂಕ್, ಬ್ಲೂಟೂತ್ ಮತ್ತು ನ್ಯಾವಿಗೇಷನ್ ಅನ್ನು ಕೂಡ ಹೊಂದಿದೆ. ಇದರೊಂದಿಗೆ ಸಿಕ್ಸ್ ಸ್ಪೀಕರ್ ಆಡಿಯೋ, ಮೌಂಟೆಡ್ ಕಂಟ್ರೋಲ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ

ದೇಶಿಯ ಮಾರುಕಟ್ಟೆಯಲ್ಲಿರುವ ಬಿಎಸ್-6 ಸಿಯಾಜ್ ಕಾರು ಹೋಂಡಾ ಸಿಟಿ, ಸ್ಕೋಡಾ ರ‍್ಯಾಪಿಡ್ ಮತ್ತು ಫೋಕ್ಸ್ ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿನೀಡುತ್ತಿದೆ.


Click it and Unblock the Notifications