ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ನ್ಯೂ ಜನರೇಷನ್ ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಿದೆ. ಇದೀಗ ಮಹೀಂದ್ರಾ ಕಂಪನಿಯು ತನ್ನ ಇನ್ನೊಂದು ಜನಪ್ರಿಯ ಸ್ಕಾರ್ಪಿಯೋ ಎಸ್‍ಯುವಿಯ ನ್ಯೂ ಜನರೇಷನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ ಬಹಳ ದೀರ್ಘಕಾಲದಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಭಾರತೀಯ ಮಾರುಕಟ್ಟೆಯ ಜನಪ್ರಿಯ ಎಸ್‍ಯುವಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕೂಡ ಒಂದಾಗಿದೆ. ಮಹೀಂದ್ರಾ ಕಂಪನಿಯ ಸರಣಿಯ ಕಾರು ಮಾರಾಟದಲ್ಲಿ ಸ್ಕಾರ್ಪಿಯೋ ಎಸ್‍‍ಯುವಿಯ ಕೊಡುಗೆಯು ದೊಡ್ಡದು. 2002ರಲ್ಲಿ ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡುಗಡೆಗೊಳಿಸಿದ ನಂತರ ಹಲವು ನವೀಕರಣಗಳನ್ನು ಪಡೆದುಕೊಂಡಿದೆ.

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ಕಂಪನಿಯು ಸ್ಕಾರ್ಪಿಯೋ ಎಸ್‍‍ಯುವಿಯನ್ನು 2006ರಲ್ಲಿ ಮತ್ತು 2014ರಲ್ಲಿ ನವೀಕರಣಗೊಳಿಸಿತ್ತು. ಇನ್ನು ಹೊಸ ತಲೆಮಾರಿನ ಸ್ಕಾರ್ಪಿಯೋ ಎಸ್‍ಯುವಿ 2021ರ ಏಪ್ರಿಲ್ - ಜೂನ್ ತಿಂಗಳ ನಡುವೆ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಕೆಲವು ವರದಿಗಳ ಪ್ರಕಾರ, ಮಹೀಂದ್ರಾಕಂಪನಿಯು ‘ಸ್ಕಾರ್ಪಿಯೋ ಸ್ಟಿಂಗ್' ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದ್ದಾರೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ಇದರಿಂದ ಬಹುಶಃ ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‍ಯುವಿಗೆ ‘ಸ್ಕಾರ್ಪಿಯೋ ಸ್ಟಿಂಗ್ ಎಂಬ ಹೆಸರನ್ನು ಇಡಬಹುದು. ಸ್ಕಾರ್ಪಿಯೋ ಸ್ಟಿಂಗ್ ಎಂಬ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ, ಇನ್ನು ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‍ಯುವಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ನ್ಯೂ ಜನರೇಷನ್ ಸ್ಕಾರ್ಪಿಯೋ ಭಾರತದಲ್ಲಿ ಈಗಾಗಲೇ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಇದೀಗ ಮತ್ತೊಮ್ಮೆ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ ಸ್ಪಾಟ್ ಟೆಸ್ಟ್ ನಡೆಸಿದೆ. ಈ ಎಸ್‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿರುವುದು ಲೋ ಸ್ಪೇಕ್ ನ್ಯೂ ಜನರೇಷನ್ ಸ್ಕಾರ್ಪಿಯೋ ಎಸ್‍ಯುವಿಯಾಗಿದೆ. ಇದರಲ್ಲಿ ಮೌಂಟಡ್ ಕಂಟ್ರೋಲ್ ಸ್ಟೀಯರಿಂಗ್ ಮತ್ತು ಡ್ಯುಯಲ್-ಪಾಡ್ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ಹೊಸ ಸ್ಕಾರ್ಪಿಯೋ ಎಸ್‍ಯುವಿಗೆ ಇನ್ನಷ್ಟು ಶಕ್ತಿ ತುಂಬಲು ಮಹೀಂದ್ರಾ ಹೊಚ್ಚ ಹೊಸ 2.0-ಲೀಟರ್ ಟರ್ಬೊ-ಡೀಸೆಲ್ ಎಂಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳು ಪ್ರಕಟವಾಗಿದೆ. ಈ ಎಂಜಿನ್ 155 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ಹೊಸ ಸ್ಕಾರ್ಪಿಯೋದಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ. ಇದರೊಂದಿಗೆ 4ಡಬ್ಲ್ಯೂಡಿ ಸಿಸ್ಟಂ ಅನ್ನು ಹೊಂದಿರಲಿದೆ. ಈ ಹೂಸ ಸ್ಕಾರ್ಪಿಯೋ ಎಸ್‍ಯುವಿಯು ಹೆಚ್ಚು ನವೀಕರಿಸಿದ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ.

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ಈ ಎಸ್‍ಯುವಿಯು ಕಟ್ಟುನಿಟ್ಟಾದ ಪಾದಚಾರಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಪೂರೈಸಲು ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದ್ದಾರೆ. ಹೊಸ ಸ್ಕಾರ್ಪಿಯೋ ಎಸ್‍ಯುವಿಯ ಮುಂಭಾಗದಲ್ಲಿ ಹೆಡ್ ಲ್ಯಾಂಪ್ ಪಕ್ಕ ಸುತ್ತುವರೆದಿರುವ ಸ್ಲೇಟೆಡ್ ಪ್ರಮುಖ ಗ್ರಿಲ್ ಅಂಶಗಳನ್ನು ಒಳಗೊಂಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ಆದರೆ ಇದು ಕೇವಲ ಸ್ಪಾಟ್ ಟೆಸ್ಟ್ ನಲ್ಲಿ ಅಳವಡಿಸಿರಬಹುದು. ಉತ್ಪಾದನೆಯ ಹಂತದಲ್ಲಿ ಈ ಅಂಶಗಳನ್ನು ಒಳಗೊಂಡಿರುವುದರಿಲ್ಲ ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಎಸ್‍ಯುವಿಯ ಹಿಂಭಾದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಮತ್ತು ಸೈಡ್ ಹಿಂಗ್ಡ್ ಬೂಟ್ ಓಪನರ್ ಅನ್ನು ಹೊಂದಿರುವಂತೆ ನಮಗೆ ಸ್ಪಾಟ್ ಟೆಸ್ಟ್ ಚಿತ್ರದಲ್ಲಿ ಕಾಣುತ್ತದೆ.

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ಇನ್ನು ಈ ಎಸ್‍ಯುವಿಯ ಒಳಭಾಗದ ಕ್ಯಾಬಿನ್ ನಲ್ಲಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ನವೀಕರಿಸಿದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಹೆಚ್ಚು ದುಬಾರಿ ಸೆಂಟರ್ ಕನ್ಸೋಲ್, ಮತ್ತು ಮರಾಜೋ ಎಸ್‍ಯುವಿಯಲ್ಲಿರುವಂತೆ ಹೊಸ ಕಂಟ್ರೋಲ್ ಗಳು ಮತ್ತು ಡಯಲ್‌ಗಳನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್ ನಡೆಸಿದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ

ನ್ಯೂ ಜನರೇಷನ್ ಸ್ಕಾರ್ಪಿಯೋ ಹೊಸ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಇನ್ನು ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿಯ ಮೂಲ ಮಾದರಿಯಲ್ಲಿ ಸನ್‌ರೂಫ್ ಅನ್ನು ಕೂಡ ನೀಡಬಹುದು ಎಂದು ಕೆಲವು ವರದಿಗಳು ಸೂಚಿಸುತ್ತದೆ. ಇದೇ ರ್ರೀತಿ ಹಲವು ಹೊಸ ಅಪ್ಡೇಟ್ ಗಳೊಂದಿಗೆ ನ್ಯೂ ಜನರೇಷನ್ ಸ್ಕಾರ್ಪಿಯೋ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

More from DriveSpark

Article Published On: Monday, December 21, 2020, 12:14 [IST]
English summary
2021 Mahindra Scorpio Low-Spec Variant Spied Revealing Details. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+