ವಿತರಣೆಯಾಯ್ತು ದುಬಾರಿ ಬೆಲೆಯ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು
ಭಾರತದ ಮೊದಲ 2020 ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಅನ್ನು ಗುಜರಾತ್ ಮೂಲದ ಉದ್ಯಮಿ ದೀಪಕ್ ಮೆವಾಡಾ ಅವರಿಗೆ ವಿತರಿಸಲಾಗಿದೆ. ಲಭ್ಯವಿರುವ ಎಲ್ಲಾ ಆಡ್ ಆನ್‌ಗಳನ್ನು ಒಳಗೊಂಡಿರುವ ಈ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರಿನ ಆನ್ ರೋಡ್ ಬೆಲೆ ರೂ.5.6 ಕೋಟಿಗಳಾಗಿದೆ.

2020ರ ಹೊಸ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರ್ ಅನ್ನು ಹಳೆಯ ಕಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಪ್ ಡೇಟ್ ಮಾಡಲಾಗಿದೆ. ಹಳೆಯ ಹೆಸರನ್ನು ಹೊಂದಿದ್ದರೂ, ಕಾರು ಪೂರ್ತಿಯಾಗಿ ಹೊಸದಾಗಿದೆ ಎಂದು ಕಂಪನಿ ಹೇಳಿದೆ. ಈ ಐಷಾರಾಮಿ ಕಾರು ಹೊಸ ಚಾಸಿಸ್ ವಿನ್ಯಾಸ ಹಾಗೂ ಅಲ್ಯೂಮಿನಿಯಂನಿಂದ ತಯಾರಿಸಿದ ಬಾಡಿ ಪ್ಯಾನಲ್‌ಗಳನ್ನು ಹೊಂದಿದ್ದು ಕಾರಿನ ಅಂದವನ್ನು ಹೆಚ್ಚಿಸುತ್ತದೆ.

ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರಿನ ಒಳಗೆ ಹಲವಾರು ಫೀಚರ್ ಗಳು ಹಾಗೂ ಐಷಾರಾಮಿ ಅಂಶಗಳಿವೆ. ಈ ಹೊಸ ಕಾರು ವಜ್ರದಂತೆ ಕಾಣುವ ಎಲ್‌ಇಡಿ ಹೆಡ್‌ಲೈಟ್, 22 ಇಂಚಿನ ಅಲಾಯ್ ವ್ಹೀಲ್, ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಲೆದರ್ ಸೀಟುಗಳನ್ನು ಹೊಂದಿದೆ.

ಈ ಕಾರಿನ ಒಳಭಾಗದಲ್ಲಿ, ಎಲೆಕ್ಟ್ರಿಕ್ ಸನ್‌ರೂಫ್, ವೆಂಟಿಲೇಟೆಡ್ ಹಾಗೂ ಮಸಾಜ್ ಫಂಕ್ಷನ್ ಗಳನ್ನು ಹೊಂದಿರುವ ಪವರ್ ಸೀಟುಗಳು, ಹಿಂದಿನ ಸೀಟಿನ ಮನರಂಜನೆಗಾಗಿ ಡಿಟ್ಯಾಚೇಬಲ್ ಟಚ್‌ಸ್ಕ್ರೀನ್ ಡಿಸ್ ಪ್ಲೇ, ಟೆಂಪರೇಚರ್, ಬ್ಲೈಂಡ್ ಹಾಗೂ ಇತರ ಫೀಚರ್ ಗಳನ್ನು ಕಂಟ್ರೋಲ್ ಮಾಡುವ ಫೀಚರ್ ಗಳು, ಹಿಂಭಾಗದ ಸೆಂಟ್ರಲ್ ಕನ್ಸೋಲ್ ನಲ್ಲಿ ಫ್ರಿಜ್ ಗಳಿವೆ.

2020ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರಿನಲ್ಲಿ 6.0 ಲೀಟರಿನ ಟ್ವಿನ್ ಟರ್ಬೊ ಡಬ್ಲ್ಯು 12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 635 ಬಿಹೆಚ್ ಪಿ ಪವರ್ ಹಾಗೂ 900 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಟು ಸ್ಪೀಡಿನ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮೂಲಕ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಕಳುಹಿಸಲಾಗುತ್ತದೆ. ಹಿಂಬದಿ-ವ್ಹೀಲ್ ಸ್ಟೀಯರಿಂಗ್ ನಿಂದಾಗಿ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಹ್ಯಾಂಡ್ ಲಿಂಗ್ ಅನ್ನು ಹೆಚ್ಚಿಸಲಾಗಿದೆ.

ಫ್ಲೈಯಿಂಗ್ ಸ್ಪರ್ ಸುಮಾರು 2.5 ಟನ್ ತೂಕವನ್ನು ಹೊಂದಿದೆ. ಈ ಕಾರು ಕೇವಲ 3.8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 100 ಕಿ.ಮೀ ವೇಗವನ್ನು ಅಕ್ಸಲೆರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 333 ಕಿ.ಮೀಗಳಾಗಿದೆ. ಬೆಂಟ್ಲಿ ಕಂಪನಿಯು ಡಬ್ಲ್ಯು 12 ಎಂಜಿನ್ ನೊಂದಿಗೆ, 4.0-ಲೀಟರ್ ಟ್ವಿನ್-ಟರ್ಬೊ ವಿ 8 ಹಾಗೂ 3.0-ಲೀಟರ್ ಟ್ವಿನ್-ಟರ್ಬೊ ಹೈಬ್ರಿಡ್ ವಿ6 ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ.

ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಐಷಾರಾಮಿ ಸೆಗ್ ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಭಾರತದಲ್ಲಿ ಇನ್ನೂ ನಾಲ್ಕು 2020 ಬೆಂಟ್ಲೆ ಫ್ಲೈಯಿಂಗ್ ಸ್ಪರ್ ಗಳನ್ನು ವಿತರಿಸಲಾಗಿದೆ ಎಂದು ವರದಿಗಳಾಗಿವೆ. ಬೆಂಟ್ಲಿ ಫ್ಲೈಯಿಂಗ್ ಸ್ಪರ್ ದೇಶೀಯ ಮಾರುಕಟ್ಟೆಯಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್ ಹಾಗೂ ಮರ್ಸಿಡಿಸ್ ಮೇಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಬೆಂಟ್ಲಿ ಕಾರುಗಳು ಐಷಾರಾಮಿತನಕ್ಕೆ ಹೆಸರುವಾಸಿಯಾಗಿವೆ. ಎಲ್ಲಾ ಬೆಂಟ್ಲಿ ಕಾರುಗಳು ಐಷಾರಾಮಿಯೊಂದಿಗೆ ಹೆಚ್ಚಿನ ಪರ್ಫಾಮೆನ್ಸ್ ನೀಡುತ್ತವೆ. ಈ ಕಾರಿನ ವಿತರಣೆಯನ್ನು ಪಡೆದ ದೀಪಕ್ ರವರಿಗೆ ಅಭಿನಂದನೆಗಳು.


Click it and Unblock the Notifications








