ಭಾರತಕ್ಕೂ ಕಾಲಿಡಲಿದೆ ಬಿಎಂಡಬ್ಲ್ಯು 8 ಸೀರಿಸ್ ಗ್ರಾಂಡ್ ಕೂಪೆ ಕಾರು
ಕರೋನಾ ವೈರಸ್ ಜಗತ್ತಿನ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗು ಮಾಡಿದೆ. ಆಟೋಮೊಬೈಲ್ ಉದ್ಯಮವೂ ಇದಕ್ಕೆ ಹೊರತಾಗಿಲ್ಲ. ಬಿಎಂಡಬ್ಲ್ಯು ಕಂಪನಿಯು 8 ಸೀರಿಸ್ ಕಾರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸ ಬೇಕಾಗಿತ್ತು. ಆದರೆ ಕಾರ್ ಅನ್ನು ಬಿಡುಗಡೆಗೊಳಿಸಲಾಗದಿದ್ದರೂ ಕಾರಿನ ಹೆಸರನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆ ಎಂದು ಬಿಎಂಡಬ್ಲ್ಯು ತಿಳಿಸಿದೆ.

ಬಿಎಂಡಬ್ಲ್ಯು ಕಂಪನಿಯು ತನ್ನ ವಾಹನಗಳ ಹೆಸರನ್ನು ಕೆಲವೇ ವರ್ಷಗಳ ಹಿಂದೆ ಮರುನಾಮಕರಣ ಮಾಡಿತ್ತು. ಅದರಂತೆ ಅವುಗಳ ಹೆಸರನ್ನು 6 ಸೀರಿಸ್ ಹಾಗೂ 8 ಸೀರಿಸ್ ಎಂದು ಬದಲಿಸಲಾಯಿತು. 6 ಸೀರಿಸ್ ನ ಎರಡು ಡೋರ್ ಗಳ ಕೂಪೆ ಹಾಗೂ ಗ್ರಾಂಡ್ ಕೂಪೆ ಮಾದರಿಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ. ಕ್ಲಾರ್ಕ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಹೊಸ ಬಿಎಂಡಬ್ಲ್ಯು 8 ಸೀರಿಸ್ ಕಾರ್ ಅನ್ನು 2018ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಇವುಗಳ ಮಾರಾಟವನ್ನು 2019ರಲ್ಲಿ ಆರಂಭಿಸಲಾಯಿತು. 8 ಸೀರಿಸ್ ಐಷಾರಾಮಿ ಕೂಪೆ ಕಾರುಗಳು ಹಲವಾರು ಕಸ್ಟಮ್ ಆಯ್ಕೆಗಳನ್ನು ಹೊಂದಿವೆ.

ಬಿಎಂಡಬ್ಲ್ಯು ವೆಬ್‌ಸೈಟ್ ನಲ್ಲಿರುವಂತೆ ಹೊಸ ಕೂಪೆ ಕಾರ್ ಅನ್ನು 12 ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಇವುಗಳಲ್ಲಿ ಹೊರ ಭಾಗದ ಬಣ್ಣ, 15 ಸಂಯೋಜನೆಗಳ ಡ್ಯುಯಲ್-ಟೋನ್ ಹಾಗೂ 5 ಟ್ರಿಮ್ ಗಳು ಸೇರಿರಲಿವೆ. ಈ ಕಾರ್ ಅನ್ನು 19 ಇಂಚಿನ ಅಲಾಯ್ ವ್ಹೀಲ್ ಹಾಗೂ ಹೆಚ್ಚುವರಿಯಾದ 20 ಇಂಚಿನ ಅಲಾಯ್ ವ್ಹೀಲ್ ಗಳಲ್ಲಿ ಮಾರಾಟ ಮಾಡಲಾಗುವುದು.

ಈ ಕಾರಿನಲ್ಲಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟುಗಳು, ವಿಂಗ್ ಮಿರರ್, ಪನೋರಮಿಕ್ ಸನ್‌ರೂಫ್, ಮೂರು ಹಂತದ ಕ್ಲೈಮೇಟ್ ಕಂಟ್ರೋಲ್, ಒಂದು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಇನ್ಫೋಟೇನ್‌ಮೆಂಟ್ ಸ್ಲೀವ್ ಡ್ಯಾಶ್‌ಬೋರ್ಡ್‌ಗಳನ್ನು ನೀಡಲಾಗಿದೆ.

ಬಿಎಂಡಬ್ಲ್ಯು ಕಂಪನಿಯು 8 ಸೀರಿಸ್ ಕಾರ್ ಅನ್ನು ಸಮರ್ಥವಾದ ಕೂಪೆಯಾಗಿ ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಕಾರಿನ ಆವೃತ್ತಿಯಲ್ಲಿ ಅಳವಡಿಸಲಾಗುವ ಹೊಸ 3.0-ಲೀಟರ್ ಡೈರೆಕ್ಟ್-ಗ್ಯಾಸೋಲಿನ್ ಮತ್ತು ಡೀಸೆಲ್ ಟರ್ಬೋಚಾರ್ಜ್ಡ್ ಎಂಜಿನ್ ಗಳು 300 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತವೆ.

ಬಿಎಂಡಬ್ಲ್ಯು ಕಂಪನಿಯ 8 ಸ್ಪೀಡಿನ ಝಡ್ಎಫ್ಎಫ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಈ ಕೂಪೆ ಕಾರಿನಲ್ಲಿ ಅಳವಡಿಸಲಾಗಿದೆ. ಎಕ್ಸ್ ಟ್ರಿಮ್ ಆಲ್ ವ್ಹೀಲ್ ಡ್ರೈವ್ ಅನ್ನು ಪೆಟ್ರೋಲ್ ಮಾದರಿಯಲ್ಲಿ ಮಾತ್ರ ನೀಡಲಾಗುವುದು.

8 ಸೀರಿಸ್ ಕೂಪೆ ಕಾರಿನ ಮುಂಭಾಗದಲ್ಲಿ ಐ ಶೇಪಿನ ಹೆಡ್‌ಲ್ಯಾಂಪ್‌ಗಳು ಹಾಗೂ ಡಿಆರ್‌ಎಲ್ ಸಿಸ್ಟಂ ಹೊಂದಿರುವ ದೊಡ್ಡ ಗ್ರಿಲ್ ನೀಡಲಾಗಿದೆ. ಇವುಗಳ ಜೊತೆಗೆ ದೊಡ್ಡ ಗಾತ್ರದ ವ್ಹೀಲ್ ಗಳು, ಲಾಂಗ್‌ಬೋರ್ಡ್ ಹಾಗೂ ಸ್ಲೊಪ್ ರೂಫ್‌ಲೈನ್ ಗಳಿದ್ದು, ಹೊಸ ಬಿಎಂಡಬ್ಲ್ಯು ಕಾರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.

ಹಿಂಭಾಗದಲ್ಲಿ ಹಾರಿಜಾಂಟಲ್ ಆಗಿರುವ ಟೇಲ್ ಲ್ಯಾಂಪ್‌ಗಳಿವೆ. ಮರ್ಸಿಡಿಸ್ ಬೆಂಜ್‌ನ ಸಿಎಲ್‌ಎಸ್ ಹಾಗೂ ಆಡಿ 7 ಕಾರುಗಳು 8 ಸೀರೀಸ್ ಗ್ರಾಂಡ್ ಕೂಪೆ ಕಾರಿಗೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತವೆ.

ಭಾರತದಲ್ಲಿ ಬಿಡುಗಡೆಯಾದ ನಂತರ ಈ ಕಾರು ಆಡಿ ಆರ್ ಎಸ್ 7 ಕಾರಿಗೆ ಪೈಪೋಟಿ ನೀಡಲಿದೆ. ಬಿಎಂಡಬ್ಲ್ಯು 8 ಸೀರೀಸ್ ಕಾರನ್ನು ಸಿಬಿಯು ರೂಪದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಹೊಸ ಕೂಪೆ ಕಾರಿನ ಆರಂಭಿಕ ಬೆಲೆ ಸುಮಾರು ರೂ.1 ಕೋಟಿಗಳಾಗುವ ಸಾಧ್ಯತೆಗಳಿವೆ.


Click it and Unblock the Notifications