ಇನ್ಮುಂದೆ ಬಿಎಂಡಬ್ಲ್ಯು ಹೊಸ ಶೋರೂಂಗಳಲ್ಲಿ ಬೈಕ್ ಮತ್ತು ಕಾರು ಎರಡೂ ಖರೀದಿಗೆ ಲಭ್ಯ

ಬಿಎಂಡಬ್ಲ್ಯು ಕಂಪನಿಯು ಒಂದೇ ಸೂರಿನಡಿ ಕಾರು ಮತ್ತು ಬೈಕ್ ಮಾರಾಟ ಮಾಡುವ ಹೊಸ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಇನ್ಮುಂದೆ ಆರಂಭಗೊಳ್ಳುವ ಹೊಸ ಶೋರೂಂಗಳಲ್ಲಿ ಎರಡು ಮಾದರಿಯ ವಾಹನ ಮಾರಾಟಕ್ಕೆ ಸಹಕಾರಿಯಾಗುವಂತೆ ಹೊಸ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಿದೆ.

ಬಿಎಂಡಬ್ಲ್ಯು ಹೊಸ ಶೋರೂಂನಲ್ಲಿ ಬೈಕ್, ಕಾರು ಎರಡೂ ಖರೀದಿಗೆ ಲಭ್ಯ

ಬಿಎಂಡಬ್ಲ್ಯು ವಾಹನ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟಗೊಳಿಸುವ ಸಂಬಂಧ ಹೊಸ ಯೋಜನೆ ರೂಪಿಸಲಾಗಿದ್ದು, ಇನ್ಮುಂದೆ ಹೊಸ ಬೈಕ್ ಖರೀದಿಗೆ ಅಥವಾ ಕಾರು ಖರೀದಿಗೆ ಬರುವ ಗ್ರಾಹಕರಿಗೆ ಒಂದೇ ಸೂರಿನಡಿ ವಿಶ್ವದರ್ಜೆ ಸೌಲಭ್ಯಗಡಿ ಮಾರಾಟ ಮತ್ತು ಸೇವೆಗಳನ್ನು ನೀಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಕಾರ್ಯನಿರ್ವಹಣೆಯಲ್ಲಿರುವ ಶೋರೂಂಗಳು ಕೇವಲ ಬೈಕ್ ಮತ್ತು ಕಾರು ಮಾರಾಟಕ್ಕೆ ಮಾತ್ರ ಸೌಲಭ್ಯವನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಹೊಸ ಶೋರೂಂಗಳಲ್ಲಿ ಹೊಸ ಮಾದರಿಯ ವಾಹನ ಮಾರಾಟಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಿದೆ.

ಬಿಎಂಡಬ್ಲ್ಯು ಹೊಸ ಶೋರೂಂನಲ್ಲಿ ಬೈಕ್, ಕಾರು ಎರಡೂ ಖರೀದಿಗೆ ಲಭ್ಯ

ಪ್ರಾಯೋಗಿಕ ವಾಹನ ಮಾರಾಟ ಮಳಿಗೆಗಳನ್ನು ಮೊದಲ ಹಂತವಾಗಿ ಉತ್ತರಪ್ರದೇಶದ ಭಂಪುರ್ ಮತ್ತು ಓರಿಸ್ಸಾದ ಕಟಕ್‌ನಲ್ಲಿ ಹೊಸ ಮಾದರಿಯ ಬಿಎಂಡಬ್ಲ್ಯು ಫೆಸೆಲಿಟಿಸ್ ನೆಕ್ಸ್ಟ್ ಶೋರೂಂ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲೂ ಹೊಸ ಮಾದರಿ ಶೋರೂಂಗಳು ಆರಂಭಗೊಳ್ಳಲಿವೆ.

ಬಿಎಂಡಬ್ಲ್ಯು ಹೊಸ ಶೋರೂಂನಲ್ಲಿ ಬೈಕ್, ಕಾರು ಎರಡೂ ಖರೀದಿಗೆ ಲಭ್ಯ

ಹಾಗೆಯೇ ಸದ್ಯ ಕಾರ್ಯನಿರ್ವಹಣೆಯಲ್ಲಿರುವ ಕೆಲವು ಕೆಲವು ಕಾರು ಮಾರಾಟ ಮಳಿಗೆಗಳಲ್ಲಿ ಬೈಕ್ ಮಾರಾಟವನ್ನು ಸೇರ್ಪಡೆಗೊಳಿಸಬಹುದಾದ ಸಾಧ್ಯತೆಗಳಿದ್ದು, ಶೀಘ್ರದಲ್ಲೇ ಹೊಸ ಮಾದರಿಯ ವಾಹನ ಮಾರಾಟ ಮಳಿಗೆಗಳು ಕಾರ್ಯಾಚರಣೆಯನ್ನು ಆರಂಭಿಸಲಿವೆ.

ಬಿಎಂಡಬ್ಲ್ಯು ಹೊಸ ಶೋರೂಂನಲ್ಲಿ ಬೈಕ್, ಕಾರು ಎರಡೂ ಖರೀದಿಗೆ ಲಭ್ಯ

ಇನ್ನು ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ವಿಕ್ರಮ್ ಪವಾಹ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಅಗಸ್ಟ್ 1ರಿಂದ ವಿಕ್ರಮ್ ಪವಾಹ್ ಅವರು ಬಿಎಂಡಬ್ಲ್ಯು ಇಂಡಿಯಾ ವಿಭಾಗದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಬಿಎಂಡಬ್ಲ್ಯು ಹೊಸ ಶೋರೂಂನಲ್ಲಿ ಬೈಕ್, ಕಾರು ಎರಡೂ ಖರೀದಿಗೆ ಲಭ್ಯ

ಕಳೆದ ಏಪ್ರಿಲ್‌ನಲ್ಲಿ ಅಧ್ಯಕ್ಷ ಸ್ಥಾನದಲ್ಲಿರುವಾಗಲೇ ರುದ್ರತೇಜ್ ಸಿಂಗ್ ಅಕಾಲಿಕ ಮರಣದಿಂದಾಗಿ ಬಿಎಂಡಬ್ಲ್ಯು ಇಂಡಿಯಾ ವಿಭಾಗದ ಅಧ್ಯಕ್ಷ ಸ್ಥಾನವು ಖಾಲಿ ಉಳಿದಿತ್ತು. ಹೊಸ ಅಧ್ಯಕ್ಷರ ಆಯ್ಕೆ ಮುನ್ನ ಹಂಗಾಮಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಬಿಎಂಡಬ್ಲ್ಯು ಏಷಿಯಾ ಫೆಸಿಪಿಕ್ ಅಧ್ಯಕ್ಷ ಹೆಂಡ್ರಿಕ್ ವಾನ್ ಕುಯನ್‌ಹೀಮ್ ಅವರು ಇದೀಗ ವಿಕ್ರಮ್ ಪವಾಹ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ಬಿಎಂಡಬ್ಲ್ಯು ಹೊಸ ಶೋರೂಂನಲ್ಲಿ ಬೈಕ್, ಕಾರು ಎರಡೂ ಖರೀದಿಗೆ ಲಭ್ಯ

ಸದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿಭಾಗದ ಬಿಎಂಡಬ್ಲ್ಯು ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯನಿರ್ವಹಿಸುತ್ತಿರುವ ವಿಕ್ರಮ್ ಪವಾಹ್ ಅವರು ಅಗಸ್ಟ್ 1ರಿಂದ ಬಿಎಂಡಬ್ಲ್ಯು ಇಂಡಿಯಾ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಿಎಂಡಬ್ಲ್ಯು ಹೊಸ ಶೋರೂಂನಲ್ಲಿ ಬೈಕ್, ಕಾರು ಎರಡೂ ಖರೀದಿಗೆ ಲಭ್ಯ

2018ರಿಂದಲೇ ಬಿಎಂಡಬ್ಲ್ಯು ಕಂಪನಿಯ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಣಾ ಅನುಭವ ಹೊಂದಿರುವ ವಿಕ್ರಮ್ ಪವಾಹ್ ಅವರು ಇದೀಗ ಇಂಡಿಯಾ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದು, ಕಾರು ಮಾರಾಟದಲ್ಲಿ ಹೊಸ ಬದಲಾವಣೆಗೆ ನೂತನ ಅಧ್ಯಕ್ಷರ ಆಯ್ಕೆಯು ಬಿಎಂಡಬ್ಲ್ಯು ಇಂಡಿಯಾ ವಿಭಾಗಕ್ಕೆ ಅವಶ್ಯವಾಗಿತ್ತು.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಎಂಡಬ್ಲ್ಯು ಹೊಸ ಶೋರೂಂನಲ್ಲಿ ಬೈಕ್, ಕಾರು ಎರಡೂ ಖರೀದಿಗೆ ಲಭ್ಯ

ಆಟೋ ಉದ್ಯಮದಲ್ಲಿ ಸಾಕಷ್ಟು ಅನುಭವ ಹೊಂದಿರುವ ವಿಕ್ರಮ್ ಪವಾಹ್ ಅವರು ಬಿಎಂಡಬ್ಲ್ಯು ಕಂಪನಿಗೆ ಸೇರವುದಕ್ಕೂ ಮುನ್ನ ಅಂತರಾಷ್ಟ್ರೀಯ ಮಟ್ಟದ ಹಲವು ಆಟೋ ಉತ್ಪಾದನಾ ಕಂಪನಿಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಣೆ ಮಾಡಿದ ಅನುಭವ ಹೊಂದಿದ್ದು, ಇವರು ಅಹಮದಾಬಾದ್‌ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌‌ನಲ್ಲಿ ಎಂಎಂಡಿಪಿ ಪದವಿ ಪಡೆದಿದ್ದಾರೆ.

Most Read Articles

Kannada
English summary
BMW Inaugurates New Facility Next With Cars & Bikes Displayed Under One Roof. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X