ಬಿಎಂಡಬ್ಲ್ಯು ಇಂಡಿಯಾ ವಿಭಾಗದ ನೂತನ ಸಾರಥಿಯಾದ ವಿಕ್ರಮ್ ಪವಾಹ್

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ವಿಕ್ರಮ್ ಪವಾಹ್ ಅವರು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಅಗಸ್ಟ್ 1ರಿಂದ ವಿಕ್ರಮ್ ಪವಾಹ್ ಅವರು ಬಿಎಂಡಬ್ಲ್ಯು ಇಂಡಿಯಾ ವಿಭಾಗದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಬಿಎಂಡಬ್ಲ್ಯು ಇಂಡಿಯಾ ವಿಭಾಗದ ನೂತನ ಸಾರಥಿಯಾದ ವಿಕ್ರಮ್ ಪವಾಹ್

ಕಳೆದ ಏಪ್ರಿಲ್‌ನಲ್ಲಿ ಅಧ್ಯಕ್ಷ ಸ್ಥಾನದಲ್ಲಿರುವಾಗಲೇ ರುದ್ರತೇಜ್ ಸಿಂಗ್ ಅಕಾಲಿಕ ಮರಣದಿಂದಾಗಿ ಬಿಎಂಡಬ್ಲ್ಯು ಇಂಡಿಯಾ ವಿಭಾಗದ ಅಧ್ಯಕ್ಷ ಸ್ಥಾನವು ಖಾಲಿ ಉಳಿದಿತ್ತು. ಹೊಸ ಅಧ್ಯಕ್ಷರ ಆಯ್ಕೆ ಮುನ್ನ ಹಂಗಾಮಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಬಿಎಂಡಬ್ಲ್ಯು ಏಷಿಯಾ ಫೆಸಿಪಿಕ್ ಅಧ್ಯಕ್ಷ ಹೆಂಡ್ರಿಕ್ ವಾನ್ ಕುಯನ್‌ಹೀಮ್ ಅವರು ಇದೀಗ ವಿಕ್ರಮ್ ಪವಾಹ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ಬಿಎಂಡಬ್ಲ್ಯು ಇಂಡಿಯಾ ವಿಭಾಗದ ನೂತನ ಸಾರಥಿಯಾದ ವಿಕ್ರಮ್ ಪವಾಹ್

ಸದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿಭಾಗದ ಬಿಎಂಡಬ್ಲ್ಯು ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯನಿರ್ವಹಿಸುತ್ತಿರುವ ವಿಕ್ರಮ್ ಪವಾಹ್ ಅವರು ಅಗಸ್ಟ್ 1ರಿಂದ ಬಿಎಂಡಬ್ಲ್ಯು ಇಂಡಿಯಾ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಬಿಎಂಡಬ್ಲ್ಯು ಇಂಡಿಯಾ ವಿಭಾಗದ ನೂತನ ಸಾರಥಿಯಾದ ವಿಕ್ರಮ್ ಪವಾಹ್

2018ರಿಂದಲೇ ಬಿಎಂಡಬ್ಲ್ಯು ಕಂಪನಿಯ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಣಾ ಅನುಭವ ಹೊಂದಿರುವ ವಿಕ್ರಮ್ ಪವಾಹ್ ಅವರು ಇದೀಗ ಇಂಡಿಯಾ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದು, ಕಾರು ಮಾರಾಟದಲ್ಲಿ ಹೊಸ ಬದಲಾವಣೆಗೆ ನೂತನ ಅಧ್ಯಕ್ಷರ ಆಯ್ಕೆಯು ಬಿಎಂಡಬ್ಲ್ಯು ಇಂಡಿಯಾ ವಿಭಾಗಕ್ಕೆ ಅವಶ್ಯವಾಗಿತ್ತು.

ಬಿಎಂಡಬ್ಲ್ಯು ಇಂಡಿಯಾ ವಿಭಾಗದ ನೂತನ ಸಾರಥಿಯಾದ ವಿಕ್ರಮ್ ಪವಾಹ್

ಆಟೋ ಉದ್ಯಮದಲ್ಲಿ ಸಾಕಷ್ಟು ಅನುಭವ ಹೊಂದಿರುವ ವಿಕ್ರಮ್ ಪವಾಹ್ ಅವರು ಬಿಎಂಡಬ್ಲ್ಯು ಕಂಪನಿಗೆ ಸೇರವುದಕ್ಕೂ ಮುನ್ನ ಅಂತರಾಷ್ಟ್ರೀಯ ಮಟ್ಟದ ಹಲವು ಆಟೋ ಉತ್ಪಾದನಾ ಕಂಪನಿಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಣೆ ಮಾಡಿದ ಅನುಭವ ಹೊಂದಿದ್ದು, ಇವರು ಅಹಮದಾಬಾದ್‌ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌‌ನಲ್ಲಿ ಎಂಎಂಡಿಪಿ ಪದವಿ ಪಡೆದಿದ್ದಾರೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಬಿಎಂಡಬ್ಲ್ಯು ಇಂಡಿಯಾ ವಿಭಾಗದ ನೂತನ ಸಾರಥಿಯಾದ ವಿಕ್ರಮ್ ಪವಾಹ್

ಆರಂಭದ ದಿನಗಳಲ್ಲಿ ಹೋಂಡಾ, ಜನರಲ್ ಮೋಟಾರ್ ಮತ್ತು ಇತ್ತೀಚೆಗೆ ಹಾರ್ಲೆ ಡೇವಿಡ್ಸನ್ ಆಸ್ಟ್ರೇಲಿಯಾ ವಿಭಾಗದಲ್ಲೂ ಪ್ರಮುಖ ಹುದ್ದೆ ನಿರ್ವಹಿಸಿ 2018ರಲ್ಲಿ ಬಿಎಂಡಬ್ಲ್ಯು ವಿಭಾಗಕ್ಕೆ ಸೇರ್ಪಡೆಗೊಂಡಿದ್ದು, ಇದೀಗ ಇಂಡಿಯಾ ವಿಭಾಗದ ಜವಬ್ದಾರಿ ವಹಿಸಿಕೊಂಡಿದ್ದಾರೆ.

ಬಿಎಂಡಬ್ಲ್ಯು ಇಂಡಿಯಾ ವಿಭಾಗದ ನೂತನ ಸಾರಥಿಯಾದ ವಿಕ್ರಮ್ ಪವಾಹ್

ಇನ್ನು ಚೆನ್ನೈ ಹೊರವಲಯದಲ್ಲಿರುವ ಬಿಎಂಡಬ್ಲ್ಯು ಕಾರು ಉತ್ಪಾದನಾ ಘಟಕದಲ್ಲಿ ಲಾಕ್‌ಡೌನ್ ವಿನಾಯ್ತಿ ನಂತರ ಹೊಸ ಕಾರುಗಳ ಉತ್ಪಾದನಾ ಪ್ರಕ್ರಿಯೆಯನ್ನು ಪುನಾರಂಭಿಸಲಾಗಿದ್ದು, ಶೇ.50ಕ್ಕಿಂತಲೂ ಕಡಿಮೆ ಉದ್ಯೋಗಿಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಬಿಎಂಡಬ್ಲ್ಯು ಇಂಡಿಯಾ ವಿಭಾಗದ ನೂತನ ಸಾರಥಿಯಾದ ವಿಕ್ರಮ್ ಪವಾಹ್

ಲಾಕ್‌ಡೌನ್ ಸಡಿಲಿಕೆ ಇದ್ದರೂ ಕರೋನಾ ವೈರಸ್ ಭೀತಿ ಹೆಚ್ಚಳವಾಗುತ್ತಿರುವರಿಂದ ಹಲವಾರು ಸುರಕ್ಷಾ ಕ್ರಮಗಳೊಂದಿಗೆ ಕಾರು ಉತ್ಪಾದನೆ ಮತ್ತು ಮಾರಾಟವನ್ನು ಪುನಾರಂಭಿಸಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಹ್ಯಾಂಡ್ ಗ್ಲೌಸ್ ಮತ್ತು ಫೇಸ್‌ಶೀಲ್ಡ್‌ಗಳನ್ನು ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

Most Read Articles

Kannada
English summary
BMW Group India Appoints Mr Vikram Pawah As New President. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X