ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಬಿಎಂಡಬ್ಲ್ಯು ವಿಶ್ವದ ಪ್ರಮುಖ ಐಷಾರಾಮಿ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಭಾರತದಲ್ಲಿಯೂ ಬಿಎಂಡಬ್ಲ್ಯು ಕಂಪನಿಯು ತನ್ನ ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತದೆ. ಕಂಪನಿಯು ಕಾರುಗಳನ್ನು ಮಾತ್ರವಲ್ಲದೇ ಬಟ್ಟೆ ಹಾಗೂ ವಾಚ್ ಗಳನ್ನು ಸಹ ಮಾರಾಟ ಮಾಡುತ್ತದೆ.

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಈಗ ಲೈಫ್‌ಸ್ಟೈಲ್ ಕಲೆಕ್ಷನ್ ಅನ್ನು ಆರಂಭಿಸಿದೆ. ಇವುಗಳಲ್ಲಿ ವಾಹನ ಸವಾರರ ಬಳಕೆಗೆ ಅನುಕೂಲವಾಗುವ ಜಾಕೆಟ್, ಸನ್ ಗ್ಲಾಸ್ ಹಾಗೂ ಜಿಪ್ಪರ್ ಬಾಟಲ್ ಗಳು ಸೇರಿವೆ. ಇವುಗಳನ್ನು 2020 ಬಿಎಂಡಬ್ಲ್ಯು ಲೈಫ್‌ಸ್ಟೈಲ್ ಕಲೆಕ್ಷನ್ ಹೆಸರಿನಲ್ಲಿ ಮಾರಾಟ ಮಾಡಲಾಗುವುದು. ಬಿಎಂಡಬ್ಲ್ಯು ಕಂಪನಿಯ ಅಧಿಕೃತ ಕಾರು ಮಾರಾಟಗಾರರು ಹಾಗೂ ಶೋರೂಂಗಳಲ್ಲಿ ಇವುಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಇವುಗಳನ್ನು ದೇಶಾದ್ಯಂತ ಮಾರಾಟಕ್ಕೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಿದೆ. ಇದರ ಜೊತೆಗೆ ಕಂಪನಿಯು ಹುಡುಗರು ಹಾಗೂ ಹುಡುಗಿಯರಿಗಾಗಿ ಬಟ್ಟೆ ಹಾಗೂ ಆಕ್ಸೆಸರಿಸ್ ಗಳನ್ನು ಸಹ ಬಿಡುಗಡೆಗೊಳಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಇವುಗಳನ್ನು ಆಧುನಿಕ ಶೈಲಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಟೀ ಶರ್ಟ್‌ಗಳು ಅತಿದೊಡ್ಡ ಗಾತ್ರದ ಬಿಎಂಡಬ್ಲ್ಯು ಲೋಗೊ ಹೊಂದಿವೆ.

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಬಿಎಂಡಬ್ಲ್ಯು ಕಂಪನಿಯು ಯಾವ ಉತ್ಪನ್ನಗಳನ್ನು ಮಾರಾಟ ಮಾಡಲಿದೆ?

ಬಿಎಂಡಬ್ಲ್ಯು ಕಂಪನಿಯು ಆಕ್ಟಿವ್ ಯೋಗ ಮ್ಯಾಟ್, ಕೂಲ್ ಬ್ಯಾಗ್, ಆಕ್ಟಿವ್ ಸ್ಪೋರ್ಟ್ ಬಾಟಲ್, ಥರ್ಮೋ ಕಪ್ ಗಳನ್ನು ಮಾರಾಟ ಮಾಡಲಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಇದರ ಜೊತೆಗೆ ಮಹಿಳೆಯರಿಗಾಗಿ ಎಂ ಜಾಕೆಟ್, ಪುರುಷರಿಗಾಗಿ ಸ್ವೆಟರ್ ಜಾಕೆಟ್, ಬಿಎಂಡಬ್ಲ್ಯು ಹ್ಯಾಟ್, ಟಿ-ಶರ್ಟ್ ಹಾಗೂ ಬಿಎಂಡಬ್ಲ್ಯು ಎಂ ಪೋರ್ಟ್ ಗಳನ್ನು ಸಹ ಮಾರಾಟ ಮಾಡಲಿದೆ. ಇದಲ್ಲದೆ ಕಂಪನಿಯು ದಿನ ಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಸಹ ಮಾರಾಟ ಮಾಡಲಿದೆ.

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಬಿಎಂಡಬ್ಲ್ಯು ಕಂಪನಿಯು ಮೋಟಾರ್ ರ್ಸ್ಪೋರ್ಟ್ ಗುಣಮಟ್ಟದ ಛತ್ರಿ, ಜಿಮ್ ಗಾಗಿ ವಿಶೇಷ ಪ್ಯಾಂಟ್ ಗಳನ್ನು ಬಿಡುಗಡೆಗೊಳಿಸಿದೆ. ಸಿಲಿಕಾನ್ ಸ್ಟ್ರಾಪ್ ಹೊಂದಿರುವ ವಾಚ್ ಹಾಗೂ ಮೋಟರ್ ಸೈಕ್ಲಿಸ್ಟ್‌ಗಳಿಗಾಗಿ ಕೆಲವು ವಿಶಿಷ್ಟ ಆಕ್ಸೆಸರಿಸ್ ಗಳನ್ನು ಸಹ ಹೊರತಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಭಾರತೀಯ ಅಭಿಮಾನಿಗಳಿಗಾಗಿ ಲೈಫ್‌ಸ್ಟೈಲ್ ಕಲೆಕ್ಷನ್‌ಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಬಿಎಂಡಬ್ಲ್ಯು 2 ಸೀರೀಸ್ ಗ್ರ್ಯಾನ್ ಕೂಪೆ ಕಾರನ್ನು ಬಿಡುಗಡೆಗೊಳಿಸಿದೆ.

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಬಿಎಂಡಬ್ಲ್ಯು 2 ಸೀರೀಸ್ ಗ್ರ್ಯಾನ್ ಕೂಪೆ ಎಂಟ್ರಿ ಲೆವೆಲ್ 220 ಡಿ ಸ್ಪೋರ್ಟ್‌ಲೈನ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.39.3 ಲಕ್ಷಗಳಾಗಿದೆ. ಹೈ-ಎಂಡ್ ಎಂ ಸ್ಪೋರ್ಟ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.41.4 ಲಕ್ಷಗಳಾಗಿದೆ. ರೂ.50,000 ಪಾವತಿಸಿ ಈ ಕಾರನ್ನು ಪ್ರೀ ಬುಕ್ಕಿಂಗ್ ಮಾಡಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ಕಾರು ಭಾರತದಲ್ಲಿ ಮಾರಾಟವಾಗುತ್ತಿರುವ ಬಿಎಂಡಬ್ಲ್ಯು ಕಂಪನಿಯ ಅತಿ ಕಡಿಮೆ ಬೆಲೆಯ ಕಾರ್ ಆಗಿದೆ. ಈ ಕಾರು ಭಾರತದಲ್ಲಿ 4 ಡೋರುಗಳೊಂದಿಗೆ ಮಾರಾಟವಾಗುತ್ತಿರುವ ಮೊದಲ ಕೂಪೆ ಕಾರಾಗಿದೆ. ಹೊಸ ಬಿಎಂಡಬ್ಲ್ಯು 2 ಸೀರೀಸ್ ಗ್ರ್ಯಾನ್ ಕೂಪೆ ಕಾರು 2.0 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ.

ಲೈಫ್‌ಸ್ಟೈಲ್ ಕಲೆಕ್ಷನ್ ಆರಂಭಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ಎಂಜಿನ್ 187 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಬಿಎಂಡಬ್ಲ್ಯು ಕಂಪನಿಯು ಶೀಘ್ರದಲ್ಲೇ ಈ ಕಾರಿನ ಪೆಟ್ರೋಲ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ.

More from DriveSpark

Article Published On: Friday, October 30, 2020, 9:54 [IST]
English summary
BMW India launched lifestyle collection for Indian market. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+