ಭಾರತದಲ್ಲಿ ಮೊದಲ ಬಾರಿಗೆ ಹೊಸ ಮಾದರಿಯ ಶೋರೂಂ ಆರಂಭಿಸಿದ ಬಿಎಂಡಬ್ಲ್ಯು

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾದ ಬಿಎಂಡಬ್ಲ್ಯು ಮೋಟಾರ್ಸ್ ಭಾರತದಲ್ಲಿ ಹೊಸ ಮಾದರಿಯ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ್ದು, ದೇಶದಲ್ಲಿ ಮೊದಲನೇ ಬಾರಿಗೆ ಅರ್ಬನ್ ರೀಟೆಲ್ ಸ್ಟೋರ್ ಆರಂಭಿಸಿದೆ.

ಭಾರತದಲ್ಲಿ ಮೊದಲ ಬಾರಿಗೆ ಹೊಸ ಮಾದರಿಯ ಶೋರೂಂ ಆರಂಭಿಸಿದ ಬಿಎಂಡಬ್ಲ್ಯು

ಕೆಯುಎನ್ ಎಕ್ಸ್‌ಕ್ಲೂಸಿವ್ ಕಂಪನಿಯೊಂದಿಗೆ ಅರ್ಬನ್ ರೀಟೆಲ್ ಸ್ಟೋರ್ ಆರಂಭಿಸಿರುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಹೊಸ ತಲೆಮಾರಿನ ಗ್ರಾಹಕರನ್ನು ಸೆಳೆಯುವ ಪ್ರಮುಖ ಯೋಜನೆ ರೂಪಿಸಿದ್ದು, ಒಂದೇ ಸೂರಿನಡಿ ವಾಹನ ಖರೀದಿಯೊಂದಿಗೆ ಆಕ್ಸೆಸರಿಸ್ ಮತ್ತು ಲೈಫ್‌ಸ್ಟೈಲ್ ಆಕ್ಸೆಸರಿಸ್‌ಗಳನ್ನು ಖರೀದಿ ಮಾಡಬಹುದಾದ ಸೌಲಭ್ಯ ಈ ವಾಹನ ಮಾರಾಟ ಮಳಿಗೆಯಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಮೊದಲ ಬಾರಿಗೆ ಹೊಸ ಮಾದರಿಯ ಶೋರೂಂ ಆರಂಭಿಸಿದ ಬಿಎಂಡಬ್ಲ್ಯು

ಹೈದ್ರಾಬಾದ್‌ನಲ್ಲಿ ಆರಂಭವಾಗಿರುವ ಬಿಎಂಡಬ್ಲ್ಯು ಮೊದಲ ಅರ್ಬನ್ ರೀಟೆಲ್ ಸ್ಟೋರ್‌ನಲ್ಲಿ ಗ್ರಾಹಕರಿಗೆ ಬ್ರಾಂಡ್ ತಿಳುವಳಿಕೆ, ಉತ್ಪನ್ನಗಳ ಪ್ರದರ್ಶನಗೊಳಿಸುವುದರ ಜೊತೆಗೆ ಸಬ್ ಬ್ರಾಂಡ್ ಮಾದರಿಯಾದ ಮಿನಿ ಕಂಪನಿಯ ಲೈಫ್‌ಸ್ಟೈಲ್ ಆಕ್ಸೆಸರಿಸ್‌ಗಳನ್ನು ಸಹ ಒಂದೇ ಸೂರಿನಡಿ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಮೊದಲ ಬಾರಿಗೆ ಹೊಸ ಮಾದರಿಯ ಶೋರೂಂ ಆರಂಭಿಸಿದ ಬಿಎಂಡಬ್ಲ್ಯು

ಇನ್ನು ಹೊಸ ವಾಹನ ಖರೀದಿಯನ್ನು ಮತ್ತಷ್ಟು ಸುಲಭವಾಗಿಸಲು ಹೊಸ ಯೋಜನೆ ರೂಪಿಸಿರುವ ಬಿಎಂಡಬ್ಲ್ಯು ಕಂಪನಿಯು ಒಂದೇ ಸೂರಿನಡಿ ಕಾರು ಮತ್ತು ಬೈಕ್ ಮಾರಾಟ ಮಾಡುವ ಹೊಸ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಭಾರತದಲ್ಲಿ ಮೊದಲ ಬಾರಿಗೆ ಹೊಸ ಮಾದರಿಯ ಶೋರೂಂ ಆರಂಭಿಸಿದ ಬಿಎಂಡಬ್ಲ್ಯು

ಹೊಸ ಯೋಜನೆ ಅಡಿ ತೆರೆಯಲಾಗುತ್ತಿರುವ ಹೊಸ ಶೋರೂಂಗಳಲ್ಲಿ ಕಾರು ಮತ್ತು ಬೈಕ್ ಎರಡು ಮಾದರಿಯ ವಾಹನ ಮಾರಾಟಕ್ಕೆ ಸಹಕಾರಿಯಾಗುವಂತೆ ಹೊಸ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಭಾರತದಲ್ಲಿ ಮೊದಲ ಬಾರಿಗೆ ಹೊಸ ಮಾದರಿಯ ಶೋರೂಂ ಆರಂಭಿಸಿದ ಬಿಎಂಡಬ್ಲ್ಯು

ಇದರ ಭಾಗವಾಗಿ ಇದೀಗ ಅರ್ಬನ್ ರೀಟೆಲ್ ಮಳಿಗೆಯನ್ನು ಆರಂಭಿಸಲಾಗಿದ್ದು, ಇನ್ಮುಂದೆ ಹೊಸ ಬೈಕ್ ಖರೀದಿಗೆ ಅಥವಾ ಕಾರು ಖರೀದಿಗೆ ಬರುವ ಗ್ರಾಹಕರಿಗೆ ಒಂದೇ ಸೂರಿನಡಿ ವಿಶ್ವದರ್ಜೆ ಸೌಲಭ್ಯದಡಿ ಮಾರಾಟ ಮತ್ತು ಸೇವೆಗಳನ್ನು ನೀಡಲು ನಿರ್ಧರಿಸಲಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಹೊಸ ಮಾದರಿಯ ಶೋರೂಂ ಆರಂಭಿಸಿದ ಬಿಎಂಡಬ್ಲ್ಯು

ಸದ್ಯಕ್ಕೆ ಕಾರ್ಯನಿರ್ವಹಣೆಯಲ್ಲಿರುವ ಶೋರೂಂಗಳು ಕೇವಲ ಬೈಕ್ ಮತ್ತು ಕಾರು ಮಾರಾಟಕ್ಕೆ ಮಾತ್ರ ಸೌಲಭ್ಯವನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಹೊಸ ಶೋರೂಂಗಳಲ್ಲಿ ಹೊಸ ಮಾದರಿಯ ವಾಹನ ಮಾರಾಟಕ್ಕೆ ಪ್ರಾಯೋಗಿಕವಾಗಿ ಬಿಎಂಡಬ್ಲ್ಯು ಕಂಪನಿಯು ಚಾಲನೆ ನೀಡಲಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಭಾರತದಲ್ಲಿ ಮೊದಲ ಬಾರಿಗೆ ಹೊಸ ಮಾದರಿಯ ಶೋರೂಂ ಆರಂಭಿಸಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಫೆಸೆಲಿಟಿಸ್ ನೆಕ್ಸ್ಟ್ ಶೋರೂಂ ದೇಶದ ಪ್ರಮುಖ ನಗರಗಳಲ್ಲೂ ಶೀಘ್ರದಲ್ಲೇ ಆರಂಭಗೊಳ್ಳಲಿದ್ದು, ಗ್ರಾಹಕರಿಗೆ ಹೊಸ ಮಾದರಿಯ ವಾಹನ ಖರೀದಿ ಅನುಭವ ಒದಗಿಸುವ ಸಂಬಂಧ ಹಲವಾರು ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದೆ.


Article Published On: Saturday, August 22, 2020, 22:11 [IST]
English summary
BMW Launches First Urban Retail Store In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+