ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆಗಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಭಾರತದಲ್ಲಿ ಬಿಎಂಡಬ್ಲ್ಯು ಮತ್ತು ಮಿನಿ ಬ್ರ್ಯಾಂಡ್ ಗಳ ಅಡಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆಯು ಶೇ.2 ರಷ್ಟು ಹೆಚ್ಚಳವಾಗಲಿದೆ.

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಬಿಎಂಡಬ್ಲ್ಯು ಕಂಪನಿಯು ಮುಂದಿನ ಜನವರಿ ತಿಂಗಳ 4 ರಿಂದ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಲಾಗುತ್ತದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಸರಿದೂಗಿಸುವುದೇ ಬೆಲೆ ಏರಿಕೆಗೆ ಕಾರಣ ಎಂದು ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಹೇಳಿದೆ. ಬಿಎಂಡಬ್ಲ್ಯು ಪೋರ್ಟ್ಫೋಲಿಯೊದಲ್ಲಿ ಬೆಲೆ ಹೆಚ್ಚಳವು ಪ್ರತಿ ಮಾದರಿ ಮತ್ತು ಆಯ್ಕೆಮಾಡಿದ ರೂಪಾಂತರದ ನಡುವೆ ಬದಲಾಗುತ್ತದೆ. ಬೆಲೆ ಏರಿಕೆಯು ಬಿಎಂಡಬ್ಲ್ಯು ಸುಸ್ಥಿರ ಬೆಳವಣಿಗೆ, ಗ್ರಾಹಕರ ತೃಪ್ತಿ ಮತ್ತು ವ್ಯಾಪಾರಿ ಲಾಭದಾಯಕತೆಯನ್ನು ಒದಗಿಸುತ್ತದೆ ಎಂದು ಖಚಿತಪಡಿಸುತ್ತದೆ.

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಬಿಎಂಡಬ್ಲ್ಯು ಕಂಪನಿಯು ಭಾರತೀಯ ಮಾರುಕಟ್ಟೆ ಹಲವು ಜನಪ್ರಿಯ ಕಾರುಗಳು ಮಾರಾಟ ಮಾಡಲಾಗುತ್ತಿದೆ. ಬಿಎಂಡಬ್ಲ್ಯು ಸಿಬಿಯು ಯುನಿಟ್ ಗಳಾಗಿ ಅಮದು ಮಾಡಿಕೊಂಡು ಕೂಡ ಮಾರಾಟ ಮಾಡುತ್ತಾರೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಬಿಎಂಡಬ್ಲ್ಯು ಸರಣಿಯಲ್ಲಿ 2 ಸೀರಿಸ್ ಜಿಟಿ, 3 ಸೀರಿಸ್ ಜಿಟಿ, 5 ಸೀರಿಸ್, 6 ಸೀರಿಸ್ ಜಿಟಿ, 7 ಸೀರಿಸ್, ಎಕ್ಸ್ 1, ಎಕ್ಸ್ 3, ಎಕ್ಸ್ 4, ಎಕ್ಸ್ 5, ಎಕ್ಸ್ 7 ಮತ್ತು ಮಿನಿ ಕಂಟ್ರಿಮ್ಯಾನ್ ಕಂಪನಿಯ ಸ್ಥಳೀಯವಾಗಿ ಉತ್ಪಾದಿಸುವ ಮಾದರಿಗಳ ಭಾಗವಾಗಿದೆ.

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಇನ್ನು ಬಿಎಂಡಬ್ಲ್ಯು ಕಂಫನಿಯು 8 ಸೀರಿಸ್ ಜಿಸಿ, ಎಕ್ಸ್ 6, ಎಂ 2 ಕಾಂಪಿಟೀಷನ್, ಎಂ 5 ಸ್ಪರ್ಧೆ, ಎಂ 8 ಕೂಪೆ, ಎಕ್ಸ್ 3 ಎಂ ಮತ್ತು ಎಕ್ಸ್ 5 ಎಂ ಮಾದರಿಗಳನ್ನು ಸಿಬಿಯು (ಕಂಪ್ಲೀಟ್ ಬಿಲ್ಟ್ ಯುನಿಟ್) ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವಾಹ್ ಅವರು ಮತನಾಡಿ, ಬಿಎಂಡಬ್ಲ್ಯು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾದರಿಗಳನ್ನು ಮತ್ತು ಸಾಟಿಯಿಲ್ಲದ ಸರ್ವಿಸ್ ಒದಗಿಸುವತ್ತ ಗಮನ ಹರಿಸಿದೆ. ಮುಂದಿನ ಜನವರಿ ತಿಂಗಳ 4 ರಿಂದ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಕಂಪನಿಯು ಬಿಎಂಡಬ್ಲ್ಯು ಮತ್ತು ಮಿನಿ ಪೋರ್ಟ್ಫೋಲಿಯೊಗೆ ಹೊಸ ಬೆಲೆಗಳನ್ನು ಪರಿಚಯಿಸುತ್ತದೆ,

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ಶೇ.2 ವರೆಗೆ ಹೆಚ್ಚಿಸುತ್ತದೆ. ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಐಷಾರಾಮಿ ವಾಹನ ಉದ್ಯಮದಲ್ಲಿ ರಾಜಿಯಾಗದ ಮಾನದಂಡಗಳನ್ನು ನಿಗದಿಪಡಿಸುವುದು ಮತ್ತು ಗ್ರಾಹಕರ ಸಂತೃಪ್ತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಇತ್ತೀಚೆಗೆ ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.94 ಕೋಟಿಗಳಾಗಿದೆ.

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಪರ್ಫಾಮೆನ್ಸ್-ಆಧಾರಿತ ಎಸ್‍ಯುವಿಯಾಗಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಎಸ್‍ಯುವಿಗಾಗಿ ಯಾವುದೇ ಬಿಎಂಡಬ್ಲ್ಯು ಅಧಿಕೃತ ಡೀಲರ್ ಬಳಿ ಅಥವಾ ಆನ್‌ಲೈನ್ ಮೂಲಕ ಬುಕ್ಕಿಂಗ್ ಅನ್ನು ಮಾಡಬಹುದು.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಸಿಬಿಯು(ಕಂಪ್ಲೀಟ್ ಬಿಲ್ಟ್ ಯುನಿಟ್) ಆಗಿ ಭಾರತೀಯ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುವುದು. ಶೀಘ್ರದಲ್ಲೇ ಬಿಎಂಡಬ್ಲ್ಯು ತನ್ನ ಈ ಹೊಸ ಎಕ್ಸ್5 ಎಂ ಕಾಂಪಿಟೇಷನ್ ಎಸ್‍ಯುವಿಯ ವಿತರಣೆಯನ್ನು ಪ್ರಾರಂಭಿಸಬಹುದು.

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಈ ಹೊಸ ಬಿಎಂಡಬ್ಲ್ಯು ಎಕ್ಸ್5 ಎಂ ಕಾಂಪಿಟೇಷನ್ ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್, ಪೋರ್ಷೆ ಕೇಯೆನ್ ಟರ್ಬೊ ಮತ್ತು ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿವೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು

ಇನ್ನು ಮುಂದಿನ ತಿಂಗಳ 4 ರಂದು ಬಿಎಂಡಬ್ಲ್ಯು ಮತ್ತು ಮಿನಿ ಬ್ರ್ಯಾಂಡ್ ಗಳ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ನಿಖರವಾದ ಬೆಲೆಗಳನ್ನು ಘೋಷಿಸಲಾಗುತ್ತದೆ. ಹೊಸ ವರ್ಷದಿಂದ ಐಷಾರಾಮಿ ಬಿಎಂಡಬ್ಲ್ಯು ಕಾರುಗಳು ಮತ್ತಷ್ಟು ದುಬಾರಿಯಾಗಿರಲಿವೆ.

Most Read Articles

Kannada
English summary
BMW Announces Price Hike Across Entire Model Range. Read In Kannada.
Story first published: Monday, December 21, 2020, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X