ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಿದ ಬಿಎಂಡಬ್ಲ್ಯು ಮತ್ತು ಮಿನಿ

ಬಿಎಂಡಬ್ಲ್ಯು ಗ್ರೂಪ್ ಕಂಪನಿಯು ಭಾರತದಲ್ಲಿ ಬಿಎಂಡಬ್ಲ್ಯು ಮತ್ತು ಅಂಗ ಸಂಸ್ಥೆಯಾದ ಮಿನಿ ನಿರ್ಮಾಣದ ಕಾರುಗಳ ಬೆಲೆ ಹೆಚ್ಚಳ ನಿರ್ಧಾರವನ್ನು ಪ್ರಕಟಿಸಿದ್ದು, ಪ್ರತಿ ಕಾರುಗಳ ಬೆಲೆಯು ಗರಿಷ್ಠ ಶೇ.3 ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.

ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಿದ ಬಿಎಂಡಬ್ಲ್ಯು

ಕಾರುಗಳ ಬೆಲೆಯಲ್ಲಿ ನಿರ್ದಿಷ್ಟವಾಗಿ ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗುವ ಬಗ್ಗೆ ಮಾಹಿತಿ ನೀಡದಿದ್ದರೂ ಶೇ. 3ರ ತನಕ ಹೆಚ್ಚಳವಾಗುವ ಸುಳಿವು ನೀಡಿದ್ದು, ಹೊಸ ಬೆಲೆಗಳು ನವೆಂಬರ್ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಕರೋನಾ ವೈರಸ್ ಪರಿಣಾಮ ವಾಹನಗಳ ಬಿಡಿಭಾಗಗಳ ಲಭ್ಯತೆಯಲ್ಲಿ ಏರಿಳಿತವಾಗಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಬಿಎಂಡಬ್ಲ್ಯು ಸೇರಿದಂತೆ ಹಲವಾರು ಕಾರು ಕಂಪನಿಗಳು ಬೆಲೆ ಹೆಚ್ಚಳ ನಿರ್ಧಾರ ಪ್ರಕಟಿಸಿವೆ.

ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಿದ ಬಿಎಂಡಬ್ಲ್ಯು

ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ಕಳೆದ ಎರಡು ತಿಂಗಳಿನಲ್ಲಿ ಹಲವಾರು ಕಾರು ಕಂಪನಿಗಳು ಬೆಲೆ ಹೆಚ್ಚಳ ನಿರ್ಧಾರ ಪ್ರಕಟಿಸಿದ್ದು, ಬಿಎಂಡಬ್ಲ್ಯು ಕಂಪನಿಯು ವಾಹನ ಮಾರಾಟ ಪ್ರಮಾಣವು ಇಳಿಕೆಯಲ್ಲಿದ್ದ ಪರಿಣಾಮ ಇದೀಗ ಬೆಲೆ ಹೆಚ್ಚಳಕ್ಕೆ ಸಿದ್ದವಾಗಿದೆ.

ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಿದ ಬಿಎಂಡಬ್ಲ್ಯು

ಕರೋನಾ ವೈರಸ್ ಪರಿಣಾಮ ಕಳೆದ ನಾಲ್ಕು ತಿಂಗಳಿನಿಂದ ಸತತ ನಷ್ಟ ಅನುಭವಿಸಿದ್ದ ಕಾರು ಕಂಪನಿಗಳು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟದಲ್ಲಿ ಚೇತರಿಕೆ ಕಾಣುತ್ತಿದ್ದು, ವೈರಸ್ ಭೀತಿ ನಡುವೆಯೂ ಹೊಸ ವಾಹನ ಮಾರಾಟವನ್ನು ಸುರಕ್ಷಿತವಾಗಿ ಕೈಗೊಳ್ಳುತ್ತಿವೆ.

ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಕಂಪನಿಯು ಸದ್ಯ ಭಾರತದಲ್ಲಿ 3 ಸೀರಿಸ್, 3 ಸೀರಿಸ್ ಗ್ರ್ಯಾನ್ ಟೂರಿಸ್ಮೊ, 5 ಸೀರಿಸ್, 6 ಸೀರಿಸ್ ಗ್ರ್ಯಾನ್ ಟೂರಿಸ್ಮೊ, 7 ಸೀರಿಸ್, ಎಕ್ಸ್1, ಎಕ್ಸ್3, ಎಕ್ಸ್4, ಎಕ್ಸ್5, ಎಕ್ಸ್7 ಮತ್ತು ಮಿನಿ ಕಂಟ್ರಿಮ್ಯಾನ್ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 1 ಲಕ್ಷದಿಂದ ರೂ. 3 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಿದ ಬಿಎಂಡಬ್ಲ್ಯು

ಇನ್ನು ಅರ್ಬನ್ ರೀಟೆಲ್ ಸ್ಟೋರ್‌ಗಳನ್ನು ತೆರೆಯುತ್ತಿರುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಹೊಸ ತಲೆಮಾರಿನ ಗ್ರಾಹಕರನ್ನು ಸೆಳೆಯುವ ಪ್ರಮುಖ ಯೋಜನೆ ರೂಪಿಸಿದ್ದು, ಒಂದೇ ಸೂರಿನಡಿ ವಾಹನ ಖರೀದಿಯೊಂದಿಗೆ ಆಕ್ಸೆಸರಿಸ್ ಮತ್ತು ಲೈಫ್‌ಸ್ಟೈಲ್ ಆಕ್ಸೆಸರಿಸ್‌ಗಳನ್ನು ಖರೀದಿ ಮಾಡಬಹುದಾದ ಸೌಲಭ್ಯ ಹೊಸ ವಾಹನ ಮಾರಾಟ ಮಳಿಗೆಯಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಅರ್ಬನ್ ರೀಟೆಲ್ ಸ್ಟೋರ್‌ನಲ್ಲಿ ಗ್ರಾಹಕರಿಗೆ ಬ್ರಾಂಡ್ ತಿಳುವಳಿಕೆ, ಉತ್ಪನ್ನಗಳ ಪ್ರದರ್ಶನಗೊಳಿಸುವುದರ ಜೊತೆಗೆ ಸಬ್ ಬ್ರಾಂಡ್ ಮಾದರಿಯಾದ ಮಿನಿ ಕಂಪನಿಯ ಲೈಫ್‌ಸ್ಟೈಲ್ ಆಕ್ಸೆಸರಿಸ್‌ಗಳನ್ನು ಸಹ ಒಂದೇ ಸೂರಿನಡಿ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಿದ ಬಿಎಂಡಬ್ಲ್ಯು

ಹೊಸ ವಾಹನ ಖರೀದಿಯನ್ನು ಮತ್ತಷ್ಟು ಸುಲಭವಾಗಿಸಲು ಈ ಹೊಸ ಯೋಜನೆ ರೂಪಿಸಿರುವ ಬಿಎಂಡಬ್ಲ್ಯು ಕಂಪನಿಯು ಒಂದೇ ಸೂರಿನಡಿ ಕಾರು ಮತ್ತು ಬೈಕ್ ಮಾರಾಟ ಮಾಡುವ ಹೊಸ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಭಾರತದಲ್ಲಿ ತನ್ನ ಐಷಾರಾಮಿ ಕಾರುಗಳ ಬೆಲೆ ಹೆಚ್ಚಿಸಿದ ಬಿಎಂಡಬ್ಲ್ಯು

ಹೊಸ ಯೋಜನೆ ಅಡಿ ತೆರೆಯಲಾಗುತ್ತಿರುವ ಹೊಸ ಶೋರೂಂಗಳಲ್ಲಿ ಕಾರು ಮತ್ತು ಬೈಕ್ ಎರಡು ಮಾದರಿಯ ವಾಹನ ಮಾರಾಟಕ್ಕೆ ಸಹಕಾರಿಯಾಗುವಂತೆ ಹೊಸ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.

Most Read Articles

Kannada
English summary
BMW & MINI Price Increase Announced In India.
Story first published: Saturday, October 3, 2020, 20:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X