ಭಾರೀ ಸಂಖ್ಯೆಯ ಉದ್ಯೋಗ ಕಡಿತಕ್ಕೆ ಮುಂದಾದ ಬಿಎಂಡಬ್ಲ್ಯು
ಜರ್ಮನಿ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 10,000 ಗುತ್ತಿಗೆ ಕಾರ್ಮಿಕರನ್ನು ವಜಾಗೊಳಿಸಲಿದೆ. ವರದಿಗಳ ಪ್ರಕಾರ, ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 10,000 ಉದ್ಯೋಗಿಗಳ ಗುತ್ತಿಗೆ ಅವಧಿಯನ್ನು ನವೀಕರಿಸುತ್ತಿಲ್ಲ. ಇದು ಈ ನೌಕರರ ಕೆಲಸಕ್ಕೆ ಕುತ್ತು ತಂದಿದೆ.

ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಈ ಕ್ರಮವನ್ನು ತೆಗೆದುಕೊಳ್ಳುತ್ತಿರುವುದಾಗಿ ಕಂಪನಿ ತನ್ನ ವರದಿಯಲ್ಲಿ ತಿಳಿಸಿದೆ. ಕರೋನಾ ವೈರಸ್‌ನಿಂದಾಗಿ ಎಲ್ಲಾ ಆಟೋಮೊಬೈಲ್ ಕಂಪನಿಗಳು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿದ್ದ ಕಾರಣಕ್ಕೆ ಭಾರಿ ನಷ್ಟವನ್ನು ಅನುಭವಿಸಿವೆ.

ಬಿಎಂಡಬ್ಲ್ಯು ಕಂಪನಿಯು ಮಾತ್ರವಲ್ಲದೇ ದೊಡ್ಡ ದೊಡ್ಡ ಕಾರು ತಯಾರಕ ಕಂಪನಿಗಳು ತಮ್ಮ ಸಿಬ್ಬಂದಿಗಳನ್ನು ವಜಾಗೊಳಿಸಲು ಮುಂದಾಗಿವೆ. ಫ್ರಾನ್ಸ್ ಮೂಲದ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಸಹ ಮೇ ತಿಂಗಳಿನಲ್ಲಿ ತನ್ನ ನೌಕರರನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ರೆನಾಲ್ಟ್ ಜಾಗತಿಕವಾಗಿ 15,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ರೆನಾಲ್ಟ್ ಕಂಪನಿಯು ಫ್ರಾನ್ಸ್‌ನಲ್ಲಿ 48,500 ಉದ್ಯೋಗಿಗಳನ್ನು ಹೊಂದಿದ್ದು, 4,500 ಜನರನ್ನು ವಜಾಗೊಳಿಸಿದೆ. ಬಿಎಂಡಬ್ಲ್ಯು ಕಂಪನಿಯು ತನ್ನ 2021ರ 5-ಸೀರೀಸ್ ಅಲ್ಟಿಮೇಟ್ ಪರ್ಫಾರ್ಮೆನ್ಸ್ ಕಾರ್ ಆದ ಎಫ್ 90 ಎಂ 5 ಎಲ್‌ಸಿಐಯನ್ನು ಅನಾವರಣಗೊಳಿಸಿದೆ.

2021ರ ಈ ಹೊಸ ಬಿಎಂಡಬ್ಲ್ಯು ಎಂ 5 ಕಾರಿನಲ್ಲಿ ಕಂಪನಿಯು ಪರ್ಫಾಮೆನ್ಸ್‌ಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ಮಾಡಿದೆ. ಕಂಪನಿಯು ಈ ಕಾರನ್ನು ಡೈನಾಮಿಕ್ ಆಗಿಸಲು ಪ್ರಯತ್ನಿಸಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಪರ್ಫಾರ್ಮೆನ್ಸ್ ಸೆಡಾನ್ ಅಂದರೆ ಸೂಪರ್ ಸಲೂನ್ ಕಾರ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಕಾಂಪಿಟಿಷನ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.04 ಕೋಟಿಗಳಾಗಲಿದೆ. ಇನ್ನು ಬಿಎಂಡಬ್ಲ್ಯು ಎಕ್ಸ್ 6 ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.95 ಲಕ್ಷಗಳಾಗಿದೆ.

ಈ ಕಾರ್ ಅನ್ನು ಹಲವು ದಿನಗಳ ಹಿಂದೆ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಈಗ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ ಬಿಎಂಡಬ್ಲ್ಯು ಎಕ್ಸ್ 6 ಕಾರ್ ಅನ್ನು ಎಕ್ಸ್‌ಲೈನ್ ಹಾಗೂ ಎಂ ಸ್ಪೋರ್ಟ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಎರಡೂ ಮಾದರಿಗಳ ಬೆಲೆ ಒಂದೇ ಆಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಬಿಎಂಡಬ್ಲ್ಯು ಇಂಡಿಯಾ ಗ್ರೂಪ್ ಅಧ್ಯಕ್ಷರನ್ನಾಗಿ ವಿಕ್ರಮ್ ಪವಾಹ್ ಅವರನ್ನು ನೇಮಿಸಲಾಗಿದೆ. ವಿಕ್ರಮ್ ಪವಾಹ್ ಅವರು ಆಗಸ್ಟ್ 1ರಂದು ಬಿಎಂಡಬ್ಲ್ಯು ಇಂಡಿಯಾ ಗ್ರೂಪ್ ಅಧ್ಯಕ್ಷ ಸ್ಥಾನವನ್ನು ವಹಿಸಲಿದ್ದಾರೆ. ಇದರ ಜೊತೆಗೆ ಅವರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.


Click it and Unblock the Notifications