ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಬಿಡುಗಡೆಯ ಮಾಹಿತಿ ಬಹಿರಂಗ

ಬಿಎಂಡಬ್ಲ್ಯು ನಿರ್ಮಾಣದ ಜನಪ್ರಿಯ ಎಸ್‌ಯುವಿ ಆವೃತ್ತಿಯಾದ ಎಕ್ಸ್1 ಮಾದರಿಯು ಶೀಘ್ರದಲ್ಲೇ ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರು ಮುಂದಿನ ತಿಂಗಳು ಮಾರ್ಚ್ 5ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಬಿಡುಗಡೆಯ ಮಾಹಿತಿ ಬಹಿರಂಗ

ಎಕ್ಸ್1 ಎಸ್‌ಯುವಿ ಕಾರು ಮಾದರಿಯು ಬಿಎಂಡಬ್ಲ್ಯು ಕಾರು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 2016ರಲ್ಲಿ ಮೊದಲ ಬಾರಿಗೆ ಬಿಡುಗಡಗೊಂಡ ನಂತರ ಇದುವರೆಗೆ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಇದೀಗ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮದಂತೆ ಉನ್ನತೀಕರಣಗೊಂಡಿರುವ ಎಕ್ಸ್1 ಫೇಸ್‌ಲಿಫ್ಟ್ ಆವೃತ್ತಿಯು ಹೊಸ ಎಂಜಿನ್ ಆಯ್ಕೆಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಬಿಡುಗಡೆಯ ಮಾಹಿತಿ ಬಹಿರಂಗ

ಎಕ್ಸ್1 ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಖರೀದಿಗೆ ಲಭ್ಯವಿದ್ದು, ಇದೀಗ ಹೊಸ ಎಂಜಿನ್ ಆಯ್ಕೆಯಿಂದಾಗಿ ಪರ್ಫಾಮೆನ್ಸ್‌ನಲ್ಲಿ ಮತ್ತಷ್ಟು ಸುಧಾರಣೆಗೊಂಡಿದೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಬಿಡುಗಡೆಯ ಮಾಹಿತಿ ಬಹಿರಂಗ

ಹಾಗೆಯೇ ಹೊಸ ಕಾರಿನ ಮುಂಭಾಗ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ವಿಸ್ತರಿತ ಗ್ರಿಲ್ ವಿನ್ಯಾಸದೊಂಗಿದೆ ಬಿಎಂಡಬ್ಲ್ಯು ಲೊಗೊ ಗಾತ್ರವನ್ನು ಹೆಚ್ಚಿಸಿರುವುದು ಕಾರಿನ ಬಲಿಷ್ಠ ಮತ್ತಷ್ಟು ಮೆರಗು ತಂದಿದೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಬಿಡುಗಡೆಯ ಮಾಹಿತಿ ಬಹಿರಂಗ

ಜೊತೆಗೆ 2020ರ ಆವೃತ್ತಿಯ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಕ್ಸ್1 ಆವೃತ್ತಿಗಿಂತಲೂ ತುಸು ದೊಡ್ದದಾಗಿದ್ದು, ಮರು ವಿನ್ಯಾಸಗೊಳಿಸಲಾದ ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ನವೀಕರಿಸಲಾದ ಫ್ರಂಟ್ ಬಂಪರ್, ಹೊಸ ಎಲ್ಇಡಿ ಫಾಗ್ ಲ್ಯಾಂಪ್ಸ್ ನೀಡಲಾಗಿದೆ. ಕಾರಿನ ಬಲಿಷ್ಠತೆ ಹೆಚ್ಚಿಸಲು ಈ ಬಾರಿ ಅಲ್ಲಲ್ಲಿ ಶಾರ್ಪ್ ಲೈನ್ ಕ್ರೋಮ್ ನೀಡಿರುವುದು ಮತ್ತಷ್ಟು ಆಕರ್ಷಣಿಯವಾಗಿದ್ದು, ಮತ್ತಷ್ಟು ಐಷಾರಾಮಿ ಎಸ್‌ಯುವಿ ಖರೀದಿದಾರರನ್ನು ಸೆಳೆಯಲಿದೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಬಿಡುಗಡೆಯ ಮಾಹಿತಿ ಬಹಿರಂಗ

ಇನ್ನು ಹೊಸ ಕಾರಿನ ಹೊರಭಾಗದಲ್ಲಿ ಮರುವಿನ್ಯಾಸಗೊಳಿಸಿದಂತೆ ಕಾರಿನ ಒಳಭಾಗದಲ್ಲೂ ಹಲವಾರು ಬದಲಾವಣೆಗಳಾಗಿದ್ದು, ಹೊಸ ಮಾದರಿಯ 8.8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಯುನಿಟ್ ಜೊತೆಗೆ6.5-ಇಂಚಿನ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ ಸೌಲಭ್ಯದೊಂದಿಗೆ ಒಳಾಂಗಣ ವಿನ್ಯಾಸಕ್ಕೆ ಹೊಸ ಮೆರಗು ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಬಿಡುಗಡೆಯ ಮಾಹಿತಿ ಬಹಿರಂಗ

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್1 ಆವೃತ್ತಿಯು 2.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 2.0-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಹೊಂದಿದ್ದು, ಬಿಎಸ್-6 ಮಾದರಿಯಲ್ಲೂ ಪ್ರಸ್ತುತ ಮಾರುಕಟ್ಟೆಯಲ್ಲಿರುವಂತೆ ಎಂಜಿನ್ ಆಯ್ಕೆಯೊಂದಿಗೆ ಉನ್ನತೀಕರಿಸಲಾಗಿದೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಬಿಡುಗಡೆಯ ಮಾಹಿತಿ ಬಹಿರಂಗ

ಪೆಟ್ರೋಲ್ ಮಾದರಿಯು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 192-ಬಿಎಚ್‌ಪಿ, 280-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 188-ಬಿಎಚ್‌ಪಿ, 400-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಬಿಎಂಡಬ್ಲ್ಯು ಎಕ್ಸ್1 ಫೇಸ್‌ಲಿಫ್ಟ್ ಬಿಡುಗಡೆಯ ಮಾಹಿತಿ ಬಹಿರಂಗ

ಎಕ್ಸ್1 ಬಿಎಸ್-6 ಆವೃತ್ತಿಯ ಬೆಲೆ(ಅಂದಾಜು)

ಸದ್ಯ ಮಾರುಕಟ್ಟೆಯಲ್ಲಿ ಬಿಎಸ್-4 ಆವೃತ್ತಿಯು ಆರಂಭಿಕವಾಗಿ ರೂ.35.20 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.45.70 ಲಕ್ಷ ಬೆಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಲಿರುವ ಹೊಸ ಆವೃತ್ತಿಯು ಹೆಚ್ಚುವರಿಯಾಗಿ ಪೆಟ್ರೋಲ್ ಮಾದರಿಯು ರೂ.90 ಸಾವಿರ ಮತ್ತು ಡೀಸೆಲ್ ಆವೃತ್ತಿಯು ರೂ.1.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
BMW X1 Facelift To Be Launched On 05 March. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X