ಕೋವಿಡ್ 19: ವೈರಸ್ ಹೊಡೆದೊಡಿಸಲು ವೈದ್ಯಕೀಯ ಉಪಕರಣಗಳ ನೆರವು ನೀಡಿದ ಬ್ರಿಡ್ಜ್‌ಸ್ಟೋನ್
ಮಾಹಾಮಾರಿ ಕರೋನಾ ವೈರಸ್ ಹೊಡೆದೊಡಿಸಲು ಆಟೋ ಉತ್ಪಾದನಾ ಕಂಪನಿಗಳು ಗರಿಷ್ಠ ಪ್ರಮಾಣದ ಸಹಾಯ ಧನ ನೀಡುವುದರ ಜೊತೆಗೆ ವೈದ್ಯಕೀಯ ಉಪಕರಣಗಳ ಸಹಾಯ ಹಸ್ತ ಚಾಚುತ್ತಿದ್ದು, ಇದೀಗ ಜನಪ್ರಿಯ ಟಯರ್ ಉತ್ಪಾದನಾ ಕಂಪನಿ ಬ್ರಿಡ್ಜ್ ಸ್ಟೋನ್ ಕೂಡಾ ಸರ್ಕಾರದ ಕರೆಗೆ ಓಗೊಟ್ಟು ನೆರವು ಸಲ್ಲಿಸಿದೆ.

ವೈರಸ್ ವಿರುದ್ಧ ಹಗಲಿರುಳು ದುಡಿಯುತ್ತಿರುವ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೊಲೀಸರು ಮತ್ತು ಸ್ವಚ್ಚತಾ ಸಿಬ್ಬಂದಿಗೆ ಗರಿಷ್ಠ ಸುರಕ್ಷತೆ ನೀಡುವ ಉದ್ದೇಶದಿಂದ ಬರೋಬ್ಬರಿ 10 ಸಾವಿರ ಪಿಪಿಇ(ಪರ್ಸನಲ್ ಪ್ರೋಟೆಕ್ಟಿವ್ ಇಕ್ವಿಪ್‌ಮೆಂಟ್) ಹಾಗೂ ಗುಣಮಟ್ಟದ ಮಾಸ್ಕ್‌ಗಳನ್ನು ಒದಗಿಸಲಾಗಿದ್ದು, ಇದರ ಜೊತೆಗೆ ಅಗತ್ಯವಿರುವ ಜನರಿಗೆ ದೇಶದ ವಿವಿಧಡೆ ದಿನಂಪ್ರತಿ 2 ಸಾವಿರ ಸಿದ್ದ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡುತ್ತಿದೆ.

ಇನ್ನು ಕರೋನಾ ವಿರುದ್ದ ಹೋರಾಡುತ್ತಿರುವ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೊಲೀಸರು ಮತ್ತು ವಿವಿಧ ಇಲಾಖೆ ಸರ್ಕಾರಿ ಅಧಿಕಾರಿಗಳು ಮತ್ತು ಸ್ವಚ್ಚತಾ ಸಿಬ್ಬಂದಿಯ ಆರೋಗ್ಯ ಸುರಕ್ಷತೆಗೆ ಪಿಪಿಇ ಮತ್ತು ಮಾಸ್ಕ್ ವಿತರಣೆ ಮಾಡಲಿದ್ದು, ಮಾಹಾಮಾರಿ ವೈರಸ್ ವಿರುದ್ಧ ಹೋರಾಟದಲ್ಲಿ ಆಟೋ ಉತ್ಪಾದನಾ ಕಂಪನಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಗರಿಷ್ಠ ಸಹಕಾರ ನೀಡುತ್ತಿವೆ.

ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ವಿವಿಧ ರಾಜ್ಯ ಸರ್ಕಾರಗಳಿಗೆ ವಿತರಣೆ ಮಾಡುತ್ತಿವೆ.
MOST READ: ಕೋವಿಡ್ 19 ಸೋಂಕಿತರನ್ನು ಪತ್ತೆಹಚ್ಚುತ್ತೆ ಈ ವಿಶೇಷ ಇನೋವಾ ಕಾರು..!

ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಉತ್ಪಾದನೆ ಮಾಡುತ್ತಿವೆ.

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆಯು ಸೋಂಕಿತರ ಸಾವಿನ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
MOST READ: ಕರೋನಾ ಸಂಕಷ್ಟ: ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಹಣ

ಈ ಹಿನ್ನಲೆಯಲ್ಲಿ ಸದ್ಯ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಘಟಕಗಳಲ್ಲೇ ಅಗತ್ಯ ವೈದಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಗರಿಷ್ಠ ಸಹಾಯ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಕಾರಣವಾಗಿದೆ.


Click it and Unblock the Notifications