ರೆನಾಲ್ಟ್ ವೆಬ್‌ಸೈಟ್‌ನಿಂದ ಮರೆಯಾಯ್ತು ಕ್ಯಾಪ್ಚರ್ ಕಾರಿನ ಹೆಸರು

ರೆನಾಲ್ಟ್ ಕಂಪನಿಯು ತನ್ನ ಕ್ಯಾಪ್ಚರ್ ಎಸ್‍ಯುವಿಯ ಹೆಸರನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಬಿಎಸ್-6 ಮಾಲಿನ್ಯ ಗಡುವು ಮುಗಿದರೂ ನಿಯಮ ಅನುಗುಣವಾಗಿ ನವೀಕರಿಸದ ಕಾರಣ ಕ್ಯಾಪ್ಚರ್ ಎಸ್‍ಯುವಿಯ ಹೆಸರನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.

ರೆನಾಲ್ಟ್ ವೆಬ್‌ಸೈಟ್‌ನಿಂದ ಮರೆಯಾಯ್ತು ಕ್ಯಾಪ್ಚರ್ ಕಾರಿನ ಹೆಸರು

ರೆನಾಲ್ಟ್ ಕ್ಯಾಪ್ಚರ್ ಕಾರನ್ನು 2017ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು. ಈ ಕ್ಯಾಪ್ಚರ್ ಎಸ್‍ಯುವಿಯನ್ನು ಎಂ 0 ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿ ಪಡಿಸಿದ್ದರು. ಇದು ನಿಸ್ಸಾನ್ ಮತ್ತು ರೆನಾಲ್ಟ್ ಪಾಲುದಾರಿಕೆಯ ಭಾಗವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿರುವ ಬಿಎಸ್-4 ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ಹೊಂದಿತ್ತು.

ರೆನಾಲ್ಟ್ ವೆಬ್‌ಸೈಟ್‌ನಿಂದ ಮರೆಯಾಯ್ತು ಕ್ಯಾಪ್ಚರ್ ಕಾರಿನ ಹೆಸರು

ಬಿಎಸ್-4 ರೆನಾಲ್ಟ್ ಕ್ಯಾಪ್ಚರ್ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಫೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ರೆನಾಲ್ಟ್ ವೆಬ್‌ಸೈಟ್‌ನಿಂದ ಮರೆಯಾಯ್ತು ಕ್ಯಾಪ್ಚರ್ ಕಾರಿನ ಹೆಸರು

ಇದರೊಂದಿಗೆ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಫೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ರೆನಾಲ್ಟ್ ವೆಬ್‌ಸೈಟ್‌ನಿಂದ ಮರೆಯಾಯ್ತು ಕ್ಯಾಪ್ಚರ್ ಕಾರಿನ ಹೆಸರು

ಕ್ಯಾಪ್ಚರ್ ಕಾರನ್ನು ಸ್ಥಗಿತಗೊಳಿಸುವುದರೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಫ್ರೆಂಚ್ ಕಾರು ತಯಾರಕ ಕಂಪನಿ ರೆನಾಲ್ಟ್ ಸರಣಿಯಲ್ಲಿ ಕ್ವಿಡ್, ಟ್ರೈಬರ್ ಮತ್ತು ಡಸ್ಟರ್ ಮಾದರಿಗಳು ಮಾತ್ರ ಮಾರಾಟವಾಗುತ್ತಿವೆ. ಈ ಮೂರು ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ರೆನಾಲ್ಟ್ ವೆಬ್‌ಸೈಟ್‌ನಿಂದ ಮರೆಯಾಯ್ತು ಕ್ಯಾಪ್ಚರ್ ಕಾರಿನ ಹೆಸರು

ರೆನಾಲ್ಟ್ ಕಂಪನಿಯು ಬಿಎಸ್ 6 ರೆನಾಲ್ಟ್ ಕ್ಯಾಪ್ಚರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ರೆನಾಲ್ಟ್ ಎಸ್‍ಯುವಿಯು ಮುಂದಿನ ಎರಡು ವಾರಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ರೆನಾಲ್ಟ್ ವೆಬ್‌ಸೈಟ್‌ನಿಂದ ಮರೆಯಾಯ್ತು ಕ್ಯಾಪ್ಚರ್ ಕಾರಿನ ಹೆಸರು

ಭಾರತದಲ್ಲಿ ಹೊಸ ರೆನಾಲ್ಟ್ ಕ್ಯಾಪ್ಚರ್ ಫೇಸ್‌ಲಿಫ್ಟ್ ಕಾರು ನಾಲ್ಕು ಸಿಲಿಂಡರ್ ಪೆಟ್ರೋಲ್ ಹೆಚ್4ಕೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಆಡಿ ಆರ್‍ಎಸ್ 7 ಕಾರು

ರೆನಾಲ್ಟ್ ವೆಬ್‌ಸೈಟ್‌ನಿಂದ ಮರೆಯಾಯ್ತು ಕ್ಯಾಪ್ಚರ್ ಕಾರಿನ ಹೆಸರು

ಈ ಎಂಜಿನ್ ಅನ್ನು ಬಿಎಸ್- 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ.

ರೆನಾಲ್ಟ್ ವೆಬ್‌ಸೈಟ್‌ನಿಂದ ಮರೆಯಾಯ್ತು ಕ್ಯಾಪ್ಚರ್ ಕಾರಿನ ಹೆಸರು

ರೆನಾಲ್ಟ್ ಕ್ಯಾಪ್ಚರ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಮಿಡ್ ಎಸ್‍ಯುವಿ ವಿಭಾಗದಲ್ಲಿದೆ. ಆದರೆ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಕ್ಯಾಪ್ಚರ್ ವಿಫಲವಾಗಿದೆ. ಆದರೆ ಬಿಎಸ್ 6 ಅಪ್‌ಡೇಟ್ ಬಳಿಕ ಮಾರಾಟದಲ್ಲಿ ಏರಿಕೆ ಕಾಣಬಹದೆಂದು ರೆನಾಲ್ಟ್ ನಿರೀಕ್ಷಿಸುತ್ತಿದೆ.

Most Read Articles

Kannada
English summary
Renault Captur BS4 Removed From Website Ahead Of Updated BS6 Model Launch. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X