ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಜಾಝ್ ಕಾರು

ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ ಬಿಎಸ್-6 ಜಾಝ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೋಂಡಾ ಕಂಪನಿಯು ಹೊಸ ಜಾಝ್ ಕಾರನ್ನು ಬಿಡುಗಡೆಗೊಳಿಸುವ ಮೊದಲು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಜಾಝ್ ಕಾರು

ಕರೋನಾ ಭೀತಿಯಿಂದ ಕೇಂದ್ರ ಸರ್ಕಾರವು ದೇಶಾದ್ಯಂತ ಲಾಕ್ ಡೌನ್ ಮಾಡಿದ್ದಾರೆ. ಹೋಂಡಾ ಜಾಝ್ ಕಾರು ಲಾಕ್ ಡೌನ್ ಮಾಡುವ ಮೊದಲು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಹೋಂಡಾ ಜಾಝ್ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಆಟೋಕಾರ್ ಇಂಡಿಯಾ ಬಹಿರಂಗಪಡಿಸಿದೆ. ಹೊಸ ಹೋಂಡಾ ಜಾಝ್ ಕಾರಿನ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೋಂಡಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಎಸ್-6 ಜಾಝ್ ಕಾರಿನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಜಾಝ್ ಕಾರು

ಹೊಸ ಹೋಂಡಾ ಜಾಝ್ ಕಾರಿನ ಕೆಲವು ಬದಲಾವಣೆಗಳೊಂದಿಗೆ ಹೊಸ ಫೀಚರ್ಸ್‍ಗಳನ್ನು ಅಳವಡಿಸಲಾಗುತ್ತದೆ ಎಂಬ ನಿರೀಕ್ಷೆಯಿದೆ. ಈ ಕಾರಿನ ಇಂಟಿರಿಯರ್ ನಲ್ಲಿ ಕೆಲವು ಬದಲಾವಣೆಗಳನ್ನು ನಡೆಸಬಹುದು ಎಂದು ನಿರೀಕ್ಷಿಸುತ್ತೇವೆ. ಹಿಂದಿನ ಮಾದರಿಗಳಲ್ಲಿ ಕಂಡುಬರುವ ಟಚ್‍ಪ್ಯಾಡ್ ಏರ್-ಕಾನ್ ಯುನಿಟ್ ಅನ್ನು ಹೊಸ ಮಾದರಿಯಲ್ಲಿ ಬದಲಾವಣೆಯನ್ನು ಮಾಡುವ ಸಾಧ್ಯತೆಗಳಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಜಾಝ್ ಕಾರು

ಹೊಸ ಹೋಂಡಾ ಜಾಝ್ ಕಾರಿನ ಡ್ಯಾಶ್‌ಬೋರ್ಡ್ ನಲ್ಲಿ ಸಣ್ಣ ಮಟ್ಟದ ಬದಲಾವಣೆಗಳನ್ನು ನಿರೀಕ್ಷಿಸುತ್ತೇವೆ. ಈ ಹೊಸ ಹೋಂಡಾ ಜಾಜ್ ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‍‍ಪ್ಲೇಯನ್ನು ಕನೆಕ್ಟ್ ಆಗಿರುವ ಏಳು ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಜಾಝ್ ಕಾರು

ಇದರೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ, ಕ್ರೂಸ್ ಕಂಟ್ರೋಲ್, ಸೆಮಿ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕ್ಲೈಮೆಂಟ್ ಕಂಟ್ರೋಲ್ ಮತ್ತು ಪುಶ್ ಬಟನ್ ಅನ್ನು ಹೊಂದಿರಲಿದೆ. ಹೊಸ ಹೋಂಡಾ ಜಾಝ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಜಾಝ್ ಕಾರು

ಈ ಕಾರಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್-ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಪಾರ್ಕಿಂಗ್ ಸೆನ್ಸರ್‌ಗಳೊಂದಿಗೆ ರೇರ್ ಕ್ಯಾಮೆರಾ, ಐಎಸ್‌ಒಫಿಕ್ಸ್ ಮೌಂಟ್ಸ್ ಅನ್ನು ಹೊಂದಿರುತ್ತದೆ. ಈ ಕಾರಿನಲ್ಲಿ ಒಟ್ಟು ಆರು ಏರ್‌ಬ್ಯಾಗ್‌‍ಗಳನ್ನು ಅಳವಡಿಸಲಾಗುತ್ತದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಜಾಝ್ ಕಾರು

ಹೊಸ ಹೋಂಡಾ ಜಾಝ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಈ ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಜಾಝ್ ಕಾರು ಹಿಂದಿನ ಮಾದರಿಗಿಂತ ತುಸು ಹೆಚ್ಚು ಬೆಲೆಯನ್ನು ಹೊಂದಿರಲಿದೆ. ಕಂಪನಿಯು ಈ ಹೊಸ ಕಾರಿನ ಬೆಲೆಯನ್ನು ಬಹಿರಂಗಪಡಿಸಿಲ್ಲ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಜಾಝ್ ಕಾರು

ಹೋಂಡಾ ಜಾಝ್ ಕಾರಿನ ಒಳ ಭಾಗದಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿರುವುದರಿಂದ ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದಾಗಿದೆ. ಹೊಸ ಹೋಂಡಾ ಜಾಝ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಹೋಂಡಾ ಜಾಝ್ ಕಾರು

ಹೂಸ ಹೋಂಡಾ ಜಾಝ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಐ20, ಫೋಕ್ಸ್‌ವ್ಯಾಗನ್ ಪೊಲೊ, ಮಾರುತಿ ಬಲೆನೊ, ಟೊಯೊಟಾ ಗ್ಲಾಂಝಾ ಮತ್ತು ಟಾಟಾ ಆಲ್ಟ್ರೋಜ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಹೋಂಡಾ honda
English summary
Honda Jazz BS6 Model Spotted Testing Ahead Of India Launch. Read in Kannada.
Story first published: Saturday, April 11, 2020, 10:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X