ಹೊಸ ಹೋಂಡಾ ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಕಾರು ಬಿಡುಗಡೆ ದಿನಾಂಕ ಬಹಿರಂಗ
ಹೋಂಡಾ ಇಂಡಿಯಾ ಕಂಪನಿಯು ಹೊಸ ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಈ ಹೊಸ ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಕಾರಿನ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.

ಈ ಹೊಸ ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಕಾರು ಜುಲೈ 2 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಹೋಂಡಾ ಕಂಪನಿಯು ತನ್ನ ಹೊಸ ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಆವೃತ್ತಿಯ ಬುಕ್ಕಿಂಗ್ ಅನ್ನು ಇತ್ತೀಚೆಗೆ ಅಧಿಕೃತವಾಗಿ ಸ್ವೀಕರಿಸಲು ಪ್ರಾರಂಭಿಸಿದೆ. ಹೋಂಡಾ ಕಂಪನಿಯ ಹಿಂದಿನ ಡಬ್ಲ್ಯುಆರ್-ವಿ ಮಾದರಿಗೆ ಹೊಸ ಫೇಸ್‍ಲಿಫ್ಟ್ ಕಾರನ್ನು ಹೋಲಿಸಿದರೆ ಹಲವಾರು ಬದಲಾವಣೆಗಳಾಗಿರುವುದನ್ನು ಕಾಣಬಹುದು. ಬಿಡುಗಡೆಯ ಮುನ್ನ ಡೀಲರ್ ಬಳಿ ತಲುಪಿರುವ ಹೊಸ ಹೋಂಡಾ ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಕಾರಿನ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿತ್ತು.

ಫೇಸ್ಲಿಫ್ಟ್ ಆವೃತ್ತಿಯಲ್ಲಿ ಹೊಸ ಬಿಎಸ್-6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಹೋಂಡಾ ಕಂಪನಿಯು ತನ್ನ ಹೊಸ ಹೋಂಡಾ ಜಾಝ್ ಕಾರನ್ನು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆಗೊಳಿಸಲಿದೆ. ಇನ್ನು 2020ರ ಹೋಂಡಾ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಹೊಸ ವಿನ್ಯಾಸ ಹಾಗೂ ಫೀಚರ್‍ಗಳನ್ನು ಸಹ ನವೀಕರಿಸಲಾಗಿದೆ.
MOST READ: ಹೊಸ ಹೋಂಡಾ ಸಿಟಿ ಕಾರಿನ ಟೀಸರ್ ಬಿಡುಗಡೆ

ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಆವೃತ್ತಿಯನ್ನು 1.2 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಬಿಎಸ್ 6 ಎಂಜಿನ್‍ನಲ್ಲಿ ಬಿಡುಗಡೆಗೊಳಿಸಲಾಗುವುದು. ಹಳೆಯ ತಲೆಮಾರಿನ ಕಾರಿನಂತೆ ಫೇಸ್‍ಲಿಫ್ಟ್ ಕಾರಿನಲ್ಲಿಯೂ ಸಹ 5-ಸ್ಪೀಡ್ ಹಾಗೂ 6-ಸ್ಪೀಡಿನ ಗೇರ್‍ಬಾಕ್ಸ್ ಆಯ್ಕೆಗಳನ್ನು ನೀಡಲಾಗುವುದು.

ಇದರಲ್ಲಿ 1.2 ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 16.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು 1.5 ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 23.7 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2020ರ ಹೋಂಡಾ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್‌ನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಪೊಸಿಷನ್ ಲ್ಯಾಂಪ್‌ಗಳಿವೆ. ಹಿಂಭಾಗದಲ್ಲಿ, ಡಬ್ಲ್ಯುಆರ್-ವಿ ಫೇಸ್ ಲಿಫ್ಟ್ ಸುಧಾರಿತ ಸಿ-ಆಕಾರದ ಎಲ್ಇಡಿ ರೇರ್ ಫಾಗ್ ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ.

ಹೊಸ ಹೋಂಡಾ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಕಾರಿನಲ್ಲಿ ಕ್ರಾಸ್ಒವರ್ ಕ್ರೂಸ್ ಕಂಟ್ರೋಲ್ ಮತ್ತು ಒನ್-ಟಚ್ ಎಲೆಕ್ಟ್ರಿಕ್ ಸನ್ರೂಫ್ ಅನ್ನು ಸಹ ಹೊಂದಿದೆ. ಹೊಸ ಕಾರಿನ ಗ್ರಿಲ್ ಹಾಗೂ ಬಂಪರ್‍ಗಳು ಹೊಸ ಲುಕ್ ಅನ್ನು ಹೊಂದಿದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಈ ಕಾರಿನ ಇಂಟಿರಿಯರ್ ನಲ್ಲಿ ಟಚ್‍ಸ್ಕ್ರೀನ್ ಇನ್ಫೋಟೆನ್‍ಮೆಂಟ್ ಸಿಸ್ಟಂ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್‍ಗಳನ್ನು ಹೊಂದಿರಲಿದೆ. ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಹೋಂಡಾ ಡಬ್ಲ್ಯುಆರ್-ವಿಯಲ್ಲಿರುವ ಎಲೆಕ್ಟ್ರಾನಿಕ್ ಸನ್‍ರೂಫ್ ಹಾಗೂ ಕ್ರೂಸ್ ಕಂಟ್ರೋಲ್‍ಗಳನ್ನು ಫೇಸ್‍ಲಿಫ್ಟ್ ಆವೃತ್ತಿಯಲ್ಲಿಯೂ ಸಹ ನೀಡಲಾಗುವುದು.

ಹೊಸ ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








