ಕೋವಿಡ್ 19: 2.50 ಲಕ್ಷ ಫೇಸ್‌ಶೀಲ್ಡ್‌ಗಳನ್ನು ವಿತರಣೆ ಮಾಡಿದ ಮಹೀಂದ್ರಾ
ಮಹೀಂದ್ರಾ ಕಂಪನಿಯು ಅಗ್ಗದ ಬೆಲೆಯ ವೆಂಟಿಲೇಟರ್ ಮತ್ತು ಫೇಸ್‌ಶೀಲ್ಡ್‌ಗಳನ್ನು ಉತ್ಪಾದನೆ ಮಾಡುವ ಮೂಲಕ ವೈರಸ್ ವಿರುದ್ಧದ ಹೋರಾಟಕ್ಕೆ ಬಹುದೊಡ್ಡ ಶಕ್ತಿ ತುಂಬಿದ್ದು, ವೈರಸ್ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಫ್ರಂಟ್ ಲೈನ್ ಕರೋನಾ ವಾರಿಯರ್ಸ್‌ಗೆ ಗರಿಷ್ಠ ಸುರಕ್ಷತೆ ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.

ಮಹಾಮಾರಿ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ತಮ್ಮದೆ ಆದ ರೀತಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ನೆರವು ನೀಡುತ್ತಿದ್ದು, ಮಹೀಂದ್ರಾ ಕಂಪನಿಯು ಕೂಡಾ ಸಹ ದೇಣಿಗೆ ಮಾತ್ರವಲ್ಲದೆ ವೈರಸ್ ಹರಡುವಿಕೆ ತಡೆಗಟ್ಟಲು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ವೈರಸ್ ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ತುಂಬುತ್ತಿದೆ.

ಮಹೀಂದ್ರಾ ಕಂಪನಿಯು ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನದಿಂದ ಹಿಡಿದು ವೆಂಟಿಲೇಟರ್ ತನಕವು ಎಲ್ಲಾ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ವಿತರಣೆ ಮಾಡಿದ್ದು, ಇದುವರೆಗೆ ಬರೋಬ್ಬರಿ 2.50 ಲಕ್ಷ ಫೇಸ್ ಶೀಲ್ಡ್‌ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಿದೆ.

ಇದರ ಜೊತೆಗೆ ಮತ್ತೊಂದು ಸಿಹಿಸುದ್ದಿ ನೀಡಿರುವ ಮಹೀಂದ್ರಾ ಕಂಪನಿಯು ಇದೇ ಮೊದಲ ಬಾರಿಗೆ ಕರೋನಾ ವೈರಸ್ ಸೋಂಕು ಪಿಡಿತರ ಪ್ರಾಣ ಉಳಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯರ ಜೀವ ಹಾನಿ ತಡೆಯುವುದಕ್ಕೆ ಹೊಸ ತಂತ್ರಜ್ಞಾನ ಪ್ರೇರಿತ ಉಪಕರಣವೊಂದನ್ನು ನಿರ್ಮಾಣ ಮಾಡಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಉತ್ತರ ಅಮೆರಿಕದಲ್ಲಿರುವ ಮಹೀಂದ್ರಾ ಡೆಟ್ರಾಯಿಟ್ ಡಿಸೈನ್ ತಂಡವು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಯಾವುದೇ ರೀತಿ ಸೋಂಕು ತಗುಲದಂತೆ ತಡೆಯಲು ಏರೋಸೊಲ್ ಬಾಕ್ಸ್ ಅನ್ನು ಸಿದ್ದಪಡಿಸಿ ಉತ್ಪಾದನೆಗೆ ಚಾಲನೆ ನೀಡಿದ್ದು, ಭಾರತದಲ್ಲೂ ಇದೀಗ ಹೊಸ ಮಾದರಿಯ ಉಪಕರಣ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡುವಾಗ ಯಾವುದೇ ರೀತಿಯ ವೈರಸ್ ವೈದ್ಯರಿಗೆ ಹರಡದಂತೆ ತಡೆಯಲು ಇದು ಸಾಕಷ್ಟು ಸಹಕಾರಿಯಾಗಲಿದ್ದು, ಮೊದಲ ಹಂತವಾಗಿ ತೆಲಂಗಾಣ ಸರ್ಕಾರಕ್ಕೆ 75 ಏರೋಸೊಲ್ ಬಾಕ್ಸ್‌ಗಳನ್ನು ವಿತರಣೆ ಮಾಡಲಾಗಿದೆ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಜೊತೆಗೆ 15 ಸಾವಿರ ಫೇಸ್‌ಶೀಲ್ಡ್‌ಗಳನ್ನು ವಿತರಣೆ ಮಾಡಿರುವ ಮಹೀಂದ್ರಾ ಶೀಘ್ರದಲ್ಲೇ ವಿವಿಧ ರಾಜ್ಯ ಸರ್ಕಾರಗಳಿಗೂ ಏರೋಸೊಲ್ ಬಾಕ್ಸ್‌ಗಳನ್ನು ಪೂರೈಕೆ ಮಾಡಲಿದ್ದು, ವೈದ್ಯರಿಗೆ ಇದರಿಂದ ಶೇ.100 ರಷ್ಟು ಸುರಕ್ಷತೆಯ ದೊರೆಯಲಿದೆ.

ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಕೆಲವು ಸಂದರ್ಭಗಳಲ್ಲಿ ಸೋಂಕು ತಗಲುವ ಸಾಧ್ಯತೆಗಳಿದ್ದು, ಇದರಿಂದ ಕೆಲ ಕಡೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯು ಸಹ ಸೋಂಕಿಗೆ ತುತ್ತಾಗಿರುವ ಹಲವಾರು ಪ್ರಕರಣಗಳನ್ನು ದಾಖಲಾಗಿವೆ.
MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಇದಕ್ಕಾಗಿ ಏರೋಸೊಲ್ ಬಾಕ್ಸ್ ನಿರ್ಮಾಣದ ಮೇಲೆ ಹೆಚ್ಚು ಆಸಕ್ತಿ ವಹಿಸಿರುವ ಮಹೀಂದ್ರಾ ಕಂಪನಿಯು ಗಣನೀಯ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಯೋಜನೆಯಲ್ಲಿದ್ದು, ಸದ್ಯ ತೆಲಂಗಾಣ ಸರ್ಕಾರಕ್ಕೆ ಮೊದಲ ಹಂತವಾಗಿ ವಿತರಣೆ ಮಾಡಿದೆ.


Click it and Unblock the Notifications