ಬಿಎಸ್-6 ಎಫೆಕ್ಟ್- ಡಿಜೈರ್ ಫೇಸ್‌ಲಿಫ್ಟ್‌ನಲ್ಲಿ ಡಿಸೇಲ್ ವರ್ಷನ್‌ಗೆ ಗುಡ್‌ಬೈ
ಮಾರುತಿ ಸುಜುಕಿ ಕಂಪನಿಯು ಜಾರಿಗೆ ಬರುತ್ತಿರುವ ಬಿಎಸ್-6 ಎಮಿಷನ್‌ನಂತೆ ಪ್ರಯಾಣಿಕರ ಕಾರು ಮಾರಾಟದಲ್ಲಿ ಮಹತ್ವದ ಬದಲಾಣೆಗಳನ್ನು ಪರಿಚಯಿಸಿದ್ದು, ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಕಾರು ಮಾದರಿಗಳಲ್ಲೇ ಡೀಸೆಲ್ ಎಂಜಿನ್ ಮಾರಾಟವನ್ನು ಸ್ಥಗಿತಗೊಳಿಸಿದೆ.

ಡೀಸೆಲ್ ಎಂಜಿನ್ ಮೂಲಕ ಕಾರು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದ ಡಿಜೈರ್ ಕಂಪ್ಯಾಕ್ಟ್ ಸೆಡಾನ್ ಕಾರಿನಲ್ಲೂ ಇದೀಗ ಹೊಸ ಎಮಿಷನ್ ನಿಯಮದಂತೆ ಕೇವಲ ಪೆಟ್ರೋಲ್ ಎಂಜಿನ್ ಮಾದರಿಯನ್ನು ಮಾತ್ರವೇ ಬಿಡುಗಡೆಗೊಳಿಸಲಾಗಿದ್ದು, ಬಿಎಸ್-6 ನಿಯಮ ಪಾಲಿಸಲು ಸಾಧ್ಯವಿಲ್ಲದ 1.3-ಲೀಟರ್ ಡೀಸೆಲ್ ಎಂಜಿನ್ ಮಾರಾಟವನ್ನು ಸ್ಥಗಿತಗೊಳಿಸಿರುವುದು ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳ ಕಾರಿಗಳಿಗೆ ಭಾರೀ ಹೊಡೆತ ನೀಡಲಿದೆ.

ಫಿಯೆಟ್ ಕಂಪನಿಯಿಂದ ಎರವಲು ಪಡೆಯಲಾಗುತ್ತಿದ್ದ 1.3-ಡೀಸೆಲ್ ಎಂಜಿನ್ ಮಾದರಿಯು ಹೊಸ ನಿಯಮದಂತೆ ಸಾಕಷ್ಟು ಸುಧಾರಣೆಗೊಳ್ಳಬೇಕಿತ್ತು. ಆದರೆ ಬೆಲೆ ಹೆಚ್ಚಳವಾಗುವ ಕಾರಣದಿಂದ 1.3-ಲೀಟರ್ ಬೂಸ್ಟರ್ ಜೆಟ್ ಡೀಸೆಲ್ ಎಂಜಿನ್ ಅನ್ನು ಉತ್ಪಾದನೆಯಿಂದ ಕೈಬಿಡಲಾಗಿದೆ.

1.3-ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಅನ್ನು ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳಿಗೆ ಪೂರೈಕೆ ಮಾಡಿದ್ದ ಫಿಯೆಟ್ ಸಂಸ್ಥೆಯು ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಎಂಜಿನ್ ಮಾದರಿಯಾಗಿತ್ತು.

ಆದರೆ ಬೂಸ್ಟರ್ ಜೆಟ್ ಎಂಜಿನ್‌ನಲ್ಲಿ ಬಿಎಸ್-6 ವೈಶಿಷ್ಟ್ಯತೆ ಅಳವಡಿಕೆಯು ಆರ್ಥಿಕವಾಗಿ ಹೊರೆಯಾಗುವ ಕಾರಣಕ್ಕೆ ಮಾರುತಿ ಸುಜುಕಿಯು ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಆಯ್ಕೆಯನ್ನು ಹೆಚ್ಚಿಸಲು ಗಮನಹರಿಸಿದೆ. ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿಯು ಹೈ ಎಂಡ್ ಕಾರು ಮಾದರಿಗಳಲ್ಲಿ ಮಾತ್ರವೇ ಮುಂಬರುವ ದಿನಗಳಲ್ಲಿ ಹೊಸ ಮಾದರಿಯ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಿದ್ದು, ಇನ್ನುಳಿದಂತೆ ಪೆಟ್ರೋಲ್ ಕಾರುಗಳನ್ನು ಈಗಾಗಲೇ ಸಂಪೂರ್ಣವಾಗಿ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಮಾರಾಟ ಮಾಡುತ್ತಿದೆ.

ಡಿಜೈರ್ ಫೇಸ್‌ಲಿಫ್ಟ್ ಆವೃತ್ತಿಯ ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಿದ್ದು, ನ್ಯೂ ಜನರೇಷನ್ ಬಲೆನೊ ಕಾರಿನಲ್ಲಿ ಬಳಕೆ ಮಾಡಲಾಗಿರುವ ಕೆ12ಸಿ ಡ್ಯುಯಲ್ ಜೆಟ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಡಿಜೈರ್ ಫೇಸ್‌ಲಿಫ್ಟ್ ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಪೆಟ್ರೋಲ್ ಎಂಜಿನ್ ಮಾದರಿಯಲ್ಲೇ ಡೀಸೆಲ್ ಕಾರುಗಳು ನೀಡುವಷ್ಟು ಮೈಲೇಜ್ ಪ್ರಮಾಣವನ್ನು ಕಾಯ್ದುಕೊಂಡಿರುವುದು ವಿಶೇಷವಾಗಿದೆ.

ಡಿಜೈರ್ ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಆವೃತ್ತಿಯು 23.26 ಕಿ.ಮೀ ಮತ್ತು ಆಟೋಮ್ಯಾಟಿಕ್ ಆವೃತ್ತಿಯು 24.12 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇಂಧನ ದಕ್ಷತೆಗಾಗಿ ಫಸ್ಟ್ ಇನ್ ಸೆಗ್ಮೆಂಟ್‌ನಲ್ಲಿಯೇ ಐಡೆಲ್ ಸ್ಟಾರ್ಟ್ ಮತ್ತು ಸ್ಟಾಪ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.

ಡಿಜೈರ್ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.89 ಲಕ್ಷ ಮತ್ತು ಹೈ ಎಂಡ್ ಆವೃತ್ತಿಯು ರೂ. 8.81 ಲಕ್ಷ ಬೆಲೆ ಹೊಂದಿದ್ದು, ಹೊಸ ವಿನ್ಯಾಸದ ಗ್ರಿಲ್, ಫ್ರಂಟ್ ಬಂಪರ್ ಜೊತೆಗೆ ಫಾಗ್ ಲ್ಯಾಂಪ್ ಮತ್ತು ಡ್ಯುಯಲ್ ಟೋನ್ ಅಯಾಲ್ ವೀಲ್ಹ್ ನೀಡಲಾಗಿದೆ.

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸದಲ್ಲೂ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇಗೆ ಸರ್ಪೋಟ್ ಮಾಡಬಲ್ಲ ಸ್ಮಾರ್ಟ್ ಸ್ಟುಡಿಯೋ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್ ಟೋನ್ ಆಸನಗಳು, ಫ್ಲಕ್ಸ್ ವುಡ್ ಟ್ರಮ್, ಆಟೋ ಫ್ಲೊಡಿಂಗ್ ರಿಯರ್ ವ್ಯೂ ಮಿರರ್, ಟಿಎಫ್‌ಟಿ ಸ್ಕ್ರೀನ್, ಎಂಡಿಐ ಸೌಲಭ್ಯ ಹೊಂದಿದೆ.

ಪ್ರಯಾಣಿಕ ಸುರಕ್ಷತೆಗೂ ಈ ಬಾರಿ ಹೆಚ್ಚು ಗಮನಹರಿಸಿರುವ ಮಾರುತಿ ಸುಜುಕಿಯು ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.


Click it and Unblock the Notifications