ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ದೇಶಾದ್ಯಂತ ಮುಂದಿನ ತಿಂಗಳು ಏಪ್ರಿಲ್ 1ರಿಂದ ಕಡ್ಡಾಯವಾಗಿ ಬಿಎಸ್-6 ಎಮಿಷನ್ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಬಿಎಸ್-4 ಸ್ಟಾಕ್ ಕಾರುಗಳ ಮೇಲೆ ಆಟೋ ಉತ್ಪಾದನಾ ಕಂಪನಿಗಳು ಭರ್ಜರಿ ಆಫರ್‌ಗಳನ್ನು ಘೋಷಣೆ ಮಾಡಿವೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಎಪ್ರಿಲ್ 1ರ ನಂತರ ಬಿಎಸ್-4 ಎಂಜಿನ್ ಪ್ರೇರಿತ ವಾಹನಗಳ ಮಾರಾಟವು ಸಂಪೂರ್ಣವಾಗಿ ನಿಷೇಧವಾಗಲಿದ್ದು, ಈ ಹಿನ್ನಲೆಯಲ್ಲಿ ನಿಗದಿತ ಅವಧಿಯೊಳಗೆ ಹಳೆಯ ವಾಹನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್‌ಗಳನ್ನು ನೀಡುತ್ತಿವೆ. ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ಬಿಎಸ್-4 ವಾಹನಗಳ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಆಕರ್ಷಕ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹ್ಯುಂಡೈ ಕಂಪನಿಯು ಈಗಾಗಲೇ ಬಹುತೇಕ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಕ್ಕೆ ಚಾಲನೆ ನೀಡಿದ್ದು, ಲಭ್ಯವಿರುವ ಬಿಎಸ್-4 ಸ್ಟಾಕ್ ಕಾರುಗಳ ಮೇಲೆ ಮಾತ್ರವೇ ಆಫರ್ ಅನ್ವಯವಾಗಲಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಸ್ಯಾಂಟ್ರೊ ಮತ್ತು ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್

ಹ್ಯಾಚ್‌ಬ್ಯಾಕ್ ಮಾದರಿಗಳಾದ ಸ್ಯಾಂಟ್ರೊ ಪೆಟ್ರೋಲ್ ಆವೃತ್ತಿಯ ಮೇಲೆ ರೂ.55 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, ಗ್ರಾಂಡ್ ಐ10 ಪೆಟ್ರೋಲ್ ಮಾದರಿಯ ಮೇಲೆ ರೂ.75 ಸಾವಿರ ಡಿಸ್ಕೌಂಟ್ ಪಡೆದುಕೊಳ್ಳಬಹುದು.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹಾಗೆಯೇ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿದ್ದ ಗ್ರಾಂಡ್ ಐ10 ನಿಯೋಸ್ ಕಾರಿನ ಮೇಲೂ ರೂ. 55 ಸಾವಿರ ಡಿಸ್ಕೌಂಟ್ ನೀಡಲಾಗಿದ್ದು, ನಿಯೋಸ್ ಪೆಟ್ರೋಲ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯ ಹೊಂದಿದೆ. ಆದರೆ ಡೀಸೆಲ್ ಮಾದರಿಯನ್ನು ಮಾತ್ರ ಬಿಎಸ್-4 ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದ್ದ ಹ್ಯುಂಡೈ ಕಂಪನಿಯು ಕಳೆದ ವಾರವಷ್ಟೇ ಡೀಸೆಲ್ ಮಾದರಿಯನ್ನು ಸಹ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಎಕ್ಸೆಂಟ್ ಕಂಪ್ಯಾಕ್ಟ್ ಸೆಡಾನ್

ಕಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲಿ ಉತ್ತಮ ಬೇಡಿಕೆ ಹೊಂದಿದ್ದ ಎಕ್ಸೆಂಟ್ ಮಾದರಿಯನ್ನು ಇದೀಗ ಹ್ಯುಂಡೈ ಕಂಪನಿಯು ಸ್ಥಗಿತಗೊಳಿಸಿದ್ದು, ಸ್ಟಾಕ್ ಆವೃತ್ತಿಗಳ ಮೇಲೆ ರೂ.95 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ಆಕ್ಸೆಂಟ್ ಕಾರಿನ ಬಿಎಸ್-6 ಆವೃತ್ತಿಯ ಬದಲಾಗಿ ಔರಾ ಎನ್ನುವ ಹೊಸ ಕಾರು ಮಾದರಿಯನ್ನು ಬಿಡುಗಡೆಗೊಳಿಸಲಾಗಿದ್ದು, ಹೊಸ ಕಾರು ಎಕ್ಸೆಂಟ್ ಹೋಲಿಕೆ ಇದ್ದರೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ವೆರ್ನಾ, ಕ್ರೆಟಾ ಮೇಲೂ ಭರ್ಜರಿ ಆಫರ್

ಮಧ್ಯಮ ಕ್ರಮಾಂಕದ ಸೆಡಾನ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ವೆರ್ನಾ ಮತ್ತು ಕ್ರೆಟಾ ಕಾರುಗಳ ಬಿಎಸ್-4 ಆವೃತ್ತಿಗಳ ಮೇಲೆ ರೂ. 95 ಸಾವಿರ ತನಕ ಆಫರ್ ಪಡೆದುಕೊಳ್ಳಬಹುದಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯ ಮೇಲೂ ಆಫರ್ ಲಭ್ಯವಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹಾಗೆಯೇ ವೆರ್ನಾ, ಕ್ರೆಟಾ ಹೈ ಎಂಡ್ ಡೀಸೆಲ್ ಆವೃತ್ತಿಯ ಮೇಲೆ ರೂ. 1.15 ಲಕ್ಷ ಆಫರ್ ನೀಡಲಾಗುತ್ತಿದ್ದು, ಡೀಲರ್ಸ್ ಮಟ್ಟದಲ್ಲೂ ಇನ್ನು ಕೆಲವು ಹೆಚ್ಚುವರಿ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಐ20 ಕಾರು ಖರೀದಿ ಮೇಲೂ ಬಂಪರ್ ಆಫರ್

ಹ್ಯುಂಡೈ ಕಂಪನಿಯು ಹ್ಯಾಚ್‌ಬ್ಯಾಕ್ ಪ್ರಿಯರ ನೆಚ್ಚಿನ ಕಾರು ಮಾದರಿಯಾದ ಐ20 ಮ್ಯಾಗ್ನಾ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯ ಮೇಲೆ ರೂ. 45 ಸಾವಿರ ಡಿಸ್ಕೌಂಟ್ ನೀಡಲಾಗಿದ್ದು, ಸ್ಪೋರ್ಟ್ಜ್ ಆವೃತ್ತಿಯ ಮೇಲೆ ರೂ. 65 ಸಾವಿರ ಡಿಸ್ಕೌಂಟ್ ಪಡೆದುಕೊಳ್ಳಬಹುದು.

ಬಿಎಸ್-6 ಜಾರಿಗೆ ದಿನಗಣನೆ- ಬಿಎಸ್-4 ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಟಕ್ಸನ್ ಮತ್ತು ಎಲಾಂಟ್ರಾ ಮೇಲೆ ಗರಿಷ್ಠ ಆಫರ್

ಹ್ಯುಂಡೈ ಕಾರುಗಳ ಮಾದರಿಗಳಲ್ಲೇ ಐಷಾರಾಮಿ ಫೀಚರ್ಸ್ ಹೊಂದಿರುವ ಟಕ್ಸನ್ ಎಸ್‌ಯುವಿ ಮತ್ತು ಎಲಾಂಟ್ರಾ ಸೆಡಾನ್ ಖರೀದಿ ಮೇಲೂ ಗರಿಷ್ಠ ಪ್ರಮಾಣದ ಆಫರ್ ನೀಡಲಾಗುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳ ಮೇಲೂ ರೂ. 2.50 ಲಕ್ಷದ ತನಕ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ವಿ.ಸೂಚನೆ: ಮೇಲೆ ನೀಡಲಾಗಿರುವ ಆಫರ್‌ಗಳು ಕೆಲವು ಬಾರಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುವ ಸಾಧ್ಯತೆಗಳಿದ್ದು, ಆ ಪ್ರದೇಶದ ಆಫರ್‌ಗಳ ಮಾಹಿತಿಯನ್ನು ನಿಮ್ಮ ಹತ್ತಿರದ ಅಧಿಕೃತ ಡೀಲರ್ಸ್‌ಗಳಲ್ಲಿ ಪಡೆಯಬಹುದಾಗಿದೆ.

Article Published On: Sunday, March 22, 2020, 11:22 [IST]
English summary
Discount up to Rs 2.5 lakh for Hyundai BS-IV models. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+