ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಕ್ಯಾಲಿಫೋರ್ನಿಯಾ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಫಿಸ್ಕರ್ ಇಂಕ್, ತನ್ನ ಹೊಸ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ಲಾಸ್‍‍ವೇಗಾಸ್‍‍ನಲ್ಲಿ ನಡೆದ 2020ರ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋದಲ್ಲಿ (ಸಿ‍ಇ‍ಎಸ್) ಅನಾವರಣಗೊಳಿಸಿದೆ.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಕಂಪನಿಯು ಈ ಎಸ್‍‍ಯುವಿಯನ್ನು ಮುಂದಿನ ಐದು ವರ್ಷಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಕಾರ್ ಅಂಡ್ ಬೈಕ್ ವರದಿಗಳ ಪ್ರಕಾರ, ಫಿಸ್ಕರ್ ಕಂಪನಿಯು ಈ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ಮುಂದಿನ ವರ್ಷದ ಕೊನೆಯಲ್ಲಿ ಅಮೇರಿಕಾದಲ್ಲಿ ಬಿಡುಗಡೆಗೊಳಿಸಲಿದೆ. ಇದಾದ ನಂತರ 2022ರ ವೇಳೆಗೆ ಯುರೋಪ್ ಹಾಗೂ ಚೀನಾ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಿದೆ.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಇದಾದ ನಂತರ ಫಿಸ್ಕರ್ ಕಂಪನಿಯು ಪ್ರಪಂಚದ ಇತರ ಮಾರುಕಟ್ಟೆಗಳತ್ತ ಗಮನಹರಿಸಲಿದೆ. 2024ರ ವೇಳೆಗೆ ಈ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಫಿಸ್ಕರ್ ಕಂಪನಿಯು ಈ ಎಸ್‍‍ಯುವಿಯನ್ನು ಭಾರತದಲ್ಲಿಯೇ ತಯಾರಿಸಿ, ಉಳಿದ ದೇಶಗಳಿಗೂ ಸಹ ರಫ್ತು ಮಾಡಲಿದೆ.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಫಿಸ್ಕರ್ ಇಂಕ್‌ನ ಅಧ್ಯಕ್ಷ ಹಾಗೂ ಸಿ‍ಇ‍ಒ ಆದ ಹೆನ್ರಿಕ್ ಫಿಸ್ಕರ್‍‍ರವರು ಮಾತನಾಡಿ, ನಾವು ನಮ್ಮ ಫಿಸ್ಕರ್ ಓಷಿಯನ್ ಇವಿಯನ್ನು ದಕ್ಷತೆಯಿಂದ ವಿನ್ಯಾಸಗೊಳಿಸಿದ್ದೇವೆ. ಇದರಿಂದಾಗಿ ಮಿಡ್ ಮಾರ್ಕೆಟ್ ಸೆಗ್‍‍ಮೆಂಟ್‍‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಕಾರುಗಳನ್ನು ಮಾರಾಟ ಮಾಡಬಹುದು ಎಂದು ಹೇಳಿದರು.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಇದರ ಜೊತೆಗೆ ಖರ್ಚನ್ನು ಕಡಿಮೆಗೊಳಿಸಲು ಕಾರುಗಳನ್ನು ಭಾರತದಲ್ಲಿಯೇ ನಿರ್ಮಿಸಲಾಗುವುದು. ನಮ್ಮ ಆ್ಯಪ್ ಮೂಲಕ ವಿಶ್ವದ ಅತ್ಯಂತ ಸುಸ್ಥಿರ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ದೇಶಿಯ ಗ್ರಾಹಕರಿಗೆ ತಲುಪಿಸಲು ನಾವು ಬಯಸುತ್ತೇವೆ. ಗ್ರಾಹಕರನ್ನು ನೇರವಾಗಿ ತಲುಪುವ ಮೂಲಕ ವೆಚ್ಚವನ್ನು ಉಳಿಸುತ್ತೇವೆ ಎಂದು ಹೇಳಿದರು.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಫಿಸ್ಕರ್ ಓಷಿಯನ್ ಎಸ್‍‍ಯುವಿಯು ಸ್ವಚ್ಛವಾದ, ಸರಳವಾದ ಡ್ಯಾಶ್‍‍ಬೋರ್ಡ್ ಅನ್ನು ಹೊಂದಿದೆ. ಈ ಡ್ಯಾಶ್‍‍ಬೋರ್ಡ್ ಮಧ್ಯ ಭಾಗದಲ್ಲಿ ದೊಡ್ಡ ಗಾತ್ರದ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸ್ಕ್ರೀನ್ ಅನ್ನು ಹೊಂದಿದೆ. ಈ ಎಸ್‍‍ಯುವಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಹೆಡ್ಸ್ ಅಪ್ ಡಿಸ್‍‍ಪ್ಲೇಗಳನ್ನು ಹೊಂದಿದೆ.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ನ್ಯಾವಿಗೇಷನ್ ಹಾಗೂ ವೇಗದ ಬಗ್ಗೆ ಮಾಹಿತಿಯನ್ನು ನೀಡುವುದರ ಜೊತೆಗೆ ಈ ಎಲೆಕ್ಟ್ರಿಕ್ ಎಸ್‍‍ಯುವಿಯಲ್ಲಿ ಅಳವಡಿಸಲಾಗಿರುವ ಹೆಚ್‍‍ಯುಡಿ ಕರೋಕೆ ಮೋಡ್‍‍ನಲ್ಲಿದ್ದಾಗ ಹಾಡಿನ ಸಾಹಿತ್ಯವನ್ನು ಸಹ ತೋರಿಸುತ್ತದೆ. ಓಷಿಯನ್ ಎಸ್‍‍ಯುವಿಯು ದೊಡ್ಡ ಗಾತ್ರದ ಸನ್‍‍ರೂಫ್ ಸೇರಿದಂತೆ ಒಟ್ಟು 9 ವಿಂಡೊಗಳನ್ನು ಹೊಂದಿದೆ.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಫಿಸ್ಕರ್ ಎಲೆಕ್ಟ್ರಿಕ್ ಎಸ್‍‍ಯುವಿಯಲ್ಲಿರುವ ಮುಖ್ಯ ಅಂಶವೆಂದರೆ ಕ್ಯಾಲಿಫೋರ್ನಿಯಾ ಮೋಡ್. ಈ ಮೋಡ್ ಸನ್‍‍ರೂಫ್, ರೇರ್ ವಿಂಡೋ ಸ್ಕ್ರೀನ್ ಸೇರಿದಂತೆ ಎಲ್ಲಾ 9 ವಿಂಡೊಗಳನ್ನು ಪುಶ್ ಬಟನ್‍‍ನಿಂದ ತೆರೆಯುತ್ತದೆ. ಫಿಸ್ಕರ್ ಓಷಿಯನ್ ಎಸ್‍‍ಯುವಿಯಲ್ಲಿ 80 ಕಿ.ವ್ಯಾನ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 300 ಕಿ.ಮೀವರೆಗೂ ಚಲಿಸುತ್ತದೆ. ಈ ಎಸ್‍‍ಯುವಿಯು 0 ಯಿಂದ 100 ಕಿ.ಮೀ ಅನ್ನು ಮೂರು ಸೆಕೆಂಡುಗಳನ್ನು ಆಕ್ಸೆಲೆರೇಟ್ ಮಾಡುತ್ತದೆ. ಫಿಸ್ಕರ್ ಕಂಪನಿಯು ಈ ಎಲೆಕ್ಟ್ರಿಕ್ ಎಸ್‍‍ಯುವಿಯ ಪವರ್ ಉತ್ಪಾದನೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಆದರೆ ಈ ಎಸ್‍‍ಯುವಿಯನ್ನು ಟೂ ವ್ಹೀಲ್ ಡ್ರೈವ್ ಹಾಗೂ ಫೋರ್ ವ್ಹೀಲ್ ಡ್ರೈವ್‍‍ನಲ್ಲಿ ಮಾರಾಟ ಮಾಡಲಾಗುವುದೆಂದು ತಿಳಿಸಿದೆ. ಈ ಎಸ್‍‍ಯುವಿಯ ಬೆಲೆಯು ಅಮೇರಿಕಾದ ಎಕ್ಸ್ ಶೋರೂಂ ದರದಂತೆ ರೂ. 29,999 ಡಾಲರ್‍‍ಗಳು ಅಂದರೆ ರೂ.21.25 ಲಕ್ಷಗಳು. ಆನ್‍‍‍ರೋಡ್ ದರ 37,499 ಡಾಲರ್‍‍ಗಳು ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.27.57 ಲಕ್ಷಗಳಾಗುತ್ತದೆ.

ಭಾರತಕ್ಕೆ ಲಗ್ಗೆಯಿಡಲಿವೆ ಫಿಸ್ಕರ್ ಓಷಿಯನ್ ಎಲೆಕ್ಟ್ರಿಕ್ ಕಾರುಗಳು

ಭಾರತದಲ್ಲಿ ಈ ಎಸ್‍‍ಯುವಿಯ ಬೆಲೆ ಎಷ್ಟಿರಲಿದೆ ಎಂಬುದನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಅಮೇರಿಕಾದಲ್ಲಿ ಈಗಾಗಲೇ ಫಿಸ್ಕರ್ ಎಲೆಕ್ಟ್ರಿಕ್ ಎಸ್‍‍ಯುವಿಯ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ. 250 ಡಾಲರ್ ಪಾವತಿಸಿ ಓಷಿಯನ್ ಎಸ್‍‍ಯುವಿಯನ್ನು ಬುಕ್ಕಿಂಗ್ ಮಾಡಬಹುದು. ಈ ಹಣವನ್ನು ರಿಫಂಡ್ ಮಾಡಲಾಗುವುದು.

Article Published On: Monday, January 13, 2020, 16:20 [IST]
English summary
Fisker Ocean Electric SUV Launching In India Sometime Over The Next Five Years. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+