ಆಟೋ ಎಕ್ಸ್‌ಪೋ 2020: ಬಿಎಸ್-6 ಗೂರ್ಖಾ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಗೂರ್ಖಾ ಆಫ್ ರೋಡ್ ಆವೃತ್ತಿಯನ್ನು ಹೊಸ ಎಮಿಷನ್ ನಿಯಮದೊಂದಿಗೆ ಉನ್ನತೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಬಿಡುಗಡೆಗೂ ಮುನ್ನ ಹೊಸ ಕಾರನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಬಿಎಸ್-6 ಗೂರ್ಖಾ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಎಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮದಂತೆ ಹೊಸ ವಾಹನಗಳ ಎಂಜಿನ್ ಅಭಿವೃದ್ದಿಗೊಳಿಸಿರುವ ಫೋರ್ಸ್ ಮೋಟಾರ್ಸ್ ಸಂಸ್ಥೆಯು ಮಾರ್ಚ್ ಅಂತ್ಯದೊಳಗೆ ಬಿಡುಗಡೆಗೊಳಿಸಲಿದ್ದು, ಬಿಎಸ್-6 ನಿಯಮದಿಂದಾಗಿ ಹೊಸ ವಾಹನಗಳ ಎಂಜಿನ್‌ನಲ್ಲಿ ಮಾತ್ರವಲ್ಲದೇ ಹೊಸ ವಿನ್ಯಾಸದ ಜೊತೆಗೆ ಪ್ರಯಾಣಿಕ ಸುರಕ್ಷತೆಯಲ್ಲೂ ಸಾಕಷ್ಟು ಬದಲಾಣೆ ಪರಿಚಯಿಸಿರುವುದು ಗ್ರಾಹಕರನ್ನು ಮತ್ತಷ್ಟು ಸೆಳೆಯಲಿದೆ.

ಆಟೋ ಎಕ್ಸ್‌ಪೋ 2020: ಬಿಎಸ್-6 ಗೂರ್ಖಾ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಆಫ್ ರೋಡ್ ಬಳಕೆಯ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಫೋರ್ಸ್ ಮೋಟಾರ್ಸ್ ಸಂಸ್ಥೆಯು 2020ರ ಗೂರ್ಖಾ ಆವೃತ್ತಿ ಈ ಬಾರಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಹೊರ ಮತ್ತು ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ.

ಆಟೋ ಎಕ್ಸ್‌ಪೋ 2020: ಬಿಎಸ್-6 ಗೂರ್ಖಾ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಹೊಸ ಗೂರ್ಖಾ ಕಾರಿನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಬಂಪರ್ ಮೇಲೆ ನೀಡಲಾಗಿರುವ ಹೆಡ್‌ಲ್ಯಾಂಪ್ ಕ್ಲಸ್ಟರ್, ಬಲಿಷ್ಠವಾದ ಬಾಡಿ ಕ್ಲ್ಯಾಡಿಂಗ್ ಸೌಲಭ್ಯವು ಆಫ್ ರೋಡ್ ಪರ್ಫಾಮೆನ್ಸ್‌ಗೆ ಸಹಕಾರಿಯಾಗಿದೆ.

ಆಟೋ ಎಕ್ಸ್‌ಪೋ 2020: ಬಿಎಸ್-6 ಗೂರ್ಖಾ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಹಾಗೆಯೇ ಹೊಸ ಕಾರಿನ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಒಳಭಾಗದ ವಿನ್ಯಾಸದಲ್ಲೂ ಭಾರೀ ಬದಲಾವಣೆಯೊಂದಿಗೆ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ. ಹೊಸ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಆಫ್ ರೋಡ್ ಕಾರು ಚಾಲನೆಯು ಮತ್ತಷ್ಟು ಸುಗಮವಾಗಲಿದ್ದು, ಡ್ಯಾಶ್‌ಬೋರ್ಡ್ ತಾಂತ್ರಿಕ ಸೌಲಭ್ಯಗಳನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಬಿಎಸ್-6 ಗೂರ್ಖಾ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಹೊಸ ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಹೊಸದಾದ ಎಸಿ ವೆಂಟ್ಸ್ ಜೋಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಬಿಎಸ್-6 ಗೂರ್ಖಾ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ಬಿಎಸ್-6 ಎಮಿಷನ್ ನಿಯಮದಂತೆ 2.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಹೊಸ ಗೂರ್ಖಾ ಆವೃತ್ತಿಯು ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 90-ಬಿಎಚ್‌ಪಿ ಮೂಲಕ ನಾಲ್ಕು ಚಕ್ರಗಳಿಗೂ ಶಕ್ತಿ ಪೂರೈಕೆಯ ಸೌಲಭ್ಯ ಹೊಂದಿದೆ.

ಆಟೋ ಎಕ್ಸ್‌ಪೋ 2020: ಬಿಎಸ್-6 ಗೂರ್ಖಾ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಇದರೊಂದಿಗೆ ಹೊಸ ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಗೂರ್ಖಾದಲ್ಲಿ ನೀಡಲಾಗಿದೆ. ಹೊಸ ಕಾರು ಮಾರ್ಚ್ ಅಂತ್ಯದೊಳಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಬೆಲೆ ಕೂಡಾ ತುಸು ದುಬಾರಿಯಾಗಲಿದೆ.

More from DriveSpark

Article Published On: Thursday, February 6, 2020, 9:40 [IST]
English summary
Auto Expo 2020: New Force Gurkha BS6 Unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+