Just In
- 15 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೇಶದ ಮೊದಲ ಮಾರುತಿ 800 ಕಾರನ್ನು ಇಂದಿರಾ ಗಾಂಧಿಯವರಿಂದ ಪಡೆದಿದ್ದವರು ಇವರೇ..
ಮಾರುತಿ 800 ಕಾರನ್ನು ದೇಶಿಯ ಮಾರುಕಟ್ಟೆಯ ಅಪ್ರತಿಮ ಕಾರು ಎಂದು ಪರಿಗಣಿಸಲಾಗುತ್ತದೆ. ಈ ಕಾರು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಕಾರು ಎಂಬ ಹೆಗ್ಗಳಿಕೆಯನ್ನು ಸಹ ಹೊಂದಿದೆ.

ಮಾರುತಿ 800 ಕಾರನ್ನು 37 ವರ್ಷಗಳ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿರವರು ಮೊದಲ ಮಾರುತಿ 800 ಕಾರನ್ನು ವಿತರಿಸಿದ್ದರು. 2010ರವರೆಗೆ ಈ ಕಾರು ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಗರಿಮೆಯನ್ನು ಹೊಂದಿತ್ತು.

ಮಾರುತಿ 800 ಮೊದಲ ಕಾರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿರವರು ದೆಹಲಿಯ ಹರ್ಪಾಲ್ ಸಿಂಗ್ ಎಂಬುವವರಿಗೆ ವಿತರಿಸಿದ್ದರು. ಹರ್ಪಾಲ್ ಸಿಂಗ್ ರವರು ಈ ಕಾರನ್ನು 2010ರವರೆಗೆ ಈ ಕಾರನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಳೆದ ವರ್ಷ ಈ ಕಾರು ರಿಸ್ಟೋರ್ ಮಾಡುವ ಸಂದರ್ಭದಲ್ಲಿ ಮಾರುತಿ ಸುಜುಕಿ ಕಂಪನಿಯ ಡೀಲರ್ ಬಳಿ ಕಂಡು ಬಂದಿತ್ತು. ಹರ್ಪಾಲ್ ಸಿಂಗ್ ರವರ ಕುಟುಂಬ ಈ ಕಾರನ್ನು ಏಕೆ ಮಾರಾಟ ಮಾಡಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಆದರೆ ಈ ಕಾರನ್ನು ರಿಸ್ಟ್ರೋರ್ ಮಾಡುವ ವೇಳೆ ಹಳೆಯ ಭಾಗಗಳಿಂದಾಗಿ ಅನೇಕ ಸಮಸ್ಯೆಗಳು ತಲೆದೋರಿದ್ದವು. ಮಾರುತಿ ಸುಜುಕಿ ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಹಲವಾರು ವರ್ಷಗಳು ಕಳೆದಿವೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮಾರುತಿ ಸುಜುಕಿ ಕಂಪನಿಯು 800 ಕಾರನ್ನು ಹಲವು ಹೊಸ ಅವತಾರಗಳಲ್ಲಿ ಪರಿಚಯಿಸಿದೆ. 800 ಕಾರನ್ನು ಸ್ಥಗಿತಗೊಳಿಸಿದ ನಂತರ ಆಲ್ಟೋ ಎಂಬ ಹೊಸ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ.

ಆಲ್ಟೊ ಮಾರುತಿ ಸುಜುಕಿ ಕಂಪನಿಯ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ. ಈ ಕಾರು ಪ್ರತಿ ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಇದುವರೆಗೆ ಆಲ್ಟೊ ಕಾರಿನ 40 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಾರುತಿ ಆಲ್ಟೊ ಮೊದಲ ಬಾರಿಗೆ ಕಾರು ಖರೀದಿಸುವವರ ಮೊದಲ ಆಯ್ಕೆಯಾಗಿದೆ. ಮಾರುತಿ ಸುಜುಕಿ ಕಂಪನಿಯು ಈ ಕಾರನ್ನು ಹಲವು ಬಾರಿ ಅಪ್ ಡೇಟ್ ಮಾಡಿದೆ. ಈ ಕಾರಿನಲ್ಲಿ ಸುರಕ್ಷತಾ ಫೀಚರ್ ಸೇರಿದಂತೆ ಇನ್ನೂ ಹಲವಾರು ಫೀಚರ್ ಹಾಗೂ ಆಕ್ಸೆಸರಿಸ್'ಗಳನ್ನು ನೀಡಲಾಗಿದೆ.

ಈ ಕಾರು ಕಳೆದ 16 ವರ್ಷಗಳಿಂದ ಭಾರತದಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಕಾರನ್ನು ಮೊದಲ ಬಾರಿಗೆ 2000ನೇ ಇಸವಿಯಲ್ಲಿ ಬಿಡುಗಡೆಗೊಳಿಸಲಾಯಿತು. 2004ರಲ್ಲಿ ಈ ಕಾರು ಮಾರಾಟದಲ್ಲಿ ಮೊದಲ ಸ್ಥಾನಕ್ಕೇರಿತು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

2008ರಲ್ಲಿ ಈ ಕಾರು 1 ಮಿಲಿಯನ್ ಯುನಿಟ್ ಮಾರಾಟದ ಗಡಿ ದಾಟಿತು. ಮಾರುತಿ ಆಲ್ಟೊ ದೇಶದ ಮೊದಲ ಬಿಎಸ್ 6 ಎಂಟ್ರಿ ಲೆವೆಲ್ ಕಾರ್ ಆಗಿದೆ. ಈ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 22.05 ಕಿ.ಮೀ ಮೈಲೇಜ್ ನೀಡುತ್ತದೆ.

ಈ ಕಾರನ್ನು ಸಿಎನ್‌ಜಿ ಮಾದರಿಯಲ್ಲಿಯೂ ಮಾರಾಟ ಮಾಡಲಾಗುತ್ತದೆ. ಈ ಮಾದರಿಯು ಪ್ರತಿ ಕೆ.ಜಿ ಸಿಎನ್‌ಜಿಗೆ 31.56 ಕಿ.ಮೀ ಮೈಲೇಜ್ ನೀಡುತ್ತದೆ. ಮಾರುತಿ ಆಲ್ಟೊ ಕಾರನ್ನು ದೇಶಾದ್ಯಂತವಿರುವ ಎಲ್ಲಾ ಮಾರುತಿ ಸುಜುಕಿ ಮಾರಾಟಗಾರರ ಮೂಲಕ ಮಾರಾಟ ಮಾಡಲಾಗುತ್ತದೆ.