ಐದನೇ ತಲೆಮಾರಿನ ಹೊಸ ಸಿಟಿ ಕಾರಿನ ಜೊತೆಗೆ ಹಳೆಯ ಮಾದರಿಯ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕಳೆದ ಜುಲೈನಲ್ಲಿ ಐದನೇ ತಲೆಮಾರಿನ ಸಿಟಿ ಸೆಡಾನ್ ಮಾದರಿಯನ್ನು ಹಲವು ಹೊಸ ಬದಲಾವಣೆಗಳನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಜೊತೆಗೆ ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಕಾರು ಮಾರಾಟವನ್ನು ಸಹ ಮುಂದುವರಿಸುವುದಾಗಿ ಹೋಂಡಾ ಕಂಪನಿಯು ಸ್ಪಷ್ಟಪಡಿಸಿದೆ.

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಐದನೇ ತಲೆಮಾರಿನ ಸಿಟಿ ಸೆಡಾನ್ ಕಾರು ಮಾದರಿಯು ಬಿಎಸ್-6 ನಿಯಮ ಅನುಸಾರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಬಿಡುಗಡೆಗೊಂಡಿದ್ದು, ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಮಾದರಿಯು ಕೂಡಾ ಬಿಎಸ್-6 ವೈಶಿಷ್ಟ್ಯತೆಯ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿದೆ. ನಾಲ್ಕನೇ ತಲೆಮಾರಿನ ಸಿಟಿ ಕಾರಿನಲ್ಲಿ ಬಿಎಸ್-6 ನಿಯಮ ಜಾರಿ ಹಿನ್ನಲೆಯಲ್ಲಿ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಿದ್ದು, ಸ್ಟಾಕ್ ಪೂರ್ಣಗೊಳ್ಳುವ ತನಕ ಹಳೆಯ ಮಾದರಿಯ ಮಾರಾಟವು ಮುಂದುವರಿಯಲಿದೆ.

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಹಳೆಯ ತಲೆಮಾರಿನ ಸಿಟಿ ಸೆಡಾನ್ ಮಾದರಿಯು 1.5-ಲೀಟರ್ ಪೆಟ್ರೋಲ್ ಮ್ಯಾನುವಲ್ ಆವೃತ್ತಿಯೊಂದಿಗೆ ಎಸ್‌ವಿ ಮತ್ತು ವಿ ವೆರಿಯೆಂಟ್ ಹೊಂದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.30 ಲಕ್ಷ ಮತ್ತು ರೂ.10 ಲಕ್ಷ ಬೆಲೆ ಹೊಂದಿದೆ.

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಸಿಟಿ ಸೆಡಾನ್ ಕಾರು ಖರೀದಿದಾರರನ್ನು ಸೆಳೆಯಲು ಹಳೆಯ ಮಾದರಿಯ ಬೆಲೆಯಲ್ಲಿ ಸುಮಾರು ರೂ. 61 ಸಾವಿರದಿಂದ ರೂ. 66 ಸಾವಿರ ಬೆಲೆ ಇಳಿಕೆ ಮಾಡಿದ್ದು, ಹೊಸ ತಲೆಮಾರಿನಲ್ಲಿ ಎಸ್‌ವಿ ಮತ್ತು ವಿ ವೆರಿಯೆಂಟ್‌ಗಳು ಪೆಟ್ರೋಲ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 10.90 ಲಕ್ಷ ಮತ್ತು ರೂ.13.15 ಲಕ್ಷ ಬೆಲೆ ಹೊಂದಿದೆ.

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಹಳೆಯ ತಲೆಮಾರಿನ ಸಿಟಿ ಸೆಡಾನ್ ಪೆಟ್ರೋಲ್ ಮ್ಯಾನುವಲ್ ಮಾದರಿಗೂ ಮತ್ತು ಹೊಸ ತಲೆಮಾರಿನ ಸಿಟಿ ಪೆಟ್ರೋಲ್ ಮ್ಯಾನುವಲ್ ಮಾದರಿಗಳಿಗೂ ರೂ. 1.60 ಲಕ್ಷದಿಂದ ರೂ. 3.15 ಲಕ್ಷದಷ್ಟು ಬೆಲೆ ವ್ಯತ್ಯಾಸವಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಹಳೆಯ ತಲೆಮಾರಿನ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಾಗುತ್ತಿದೆ.

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ತಾಂತ್ರಿಕವಾಗಿ ಹಳೆಯ ಮಾದರಿಗಿಂತಲೂ ಹೊಸ ಸಿಟಿ ಸೆಡಾನ್ ಕಾರು ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಸದ್ಯಕ್ಕೆ ಎರಡು ತಲೆಮಾರಿನ ಆವೃತ್ತಿಗಳಲ್ಲೂ ಆಯ್ಕೆ ಮಾಡಬಹುದಾಗಿದೆ.

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಇನ್ನು 5ನೇ ತಲೆಮಾರಿನ ಸಿಟಿ ಕಾರು ವಿ, ವಿಎಕ್ಸ್, ಜೆಡ್ಎಕ್ಸ್ ಆವೃತ್ತಿಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಕಾರು ಸಿ ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.65 ಲಕ್ಷದೊಂದಿಗೆ ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಾರಿನ ವಿನ್ಯಾಸದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗೊಳಿಸಲಾಗಿದೆ.

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಹೊಸ ಸಿಟಿ ಕಾರಿನಲ್ಲಿ ಈ ಬಾರಿ ಡಬಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್15ಬಿ) ನೀಡಲಾಗುತ್ತಿದ್ದು, ಈ ಹೊಸ ಎಂಜಿನ್ 120-ಬಿಎಚ್‌ಪಿ ಮತ್ತು 145-ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಹಾಗೆಯೇ ಡೀಸೆಲ್ ಮಾದರಿಯು 1.5-ಲೀಟರ್ 100-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಸ್ಟ್ಯಾಂಡರ್ಡ್ ಆಗಿ ಎರಡು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಪರ್ಫಾಮೆನ್ಸ್ ಪ್ರಿಯರಿಗಾಗಿ ಪೆಟ್ರೋಲ್ ಹೈ ಎಂಡ್ ಮಾದರಿಯಲ್ಲಿ ಮಾತ್ರ 7-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 17ರಿಂದ 18 ಕಿ.ಮೀ ಮತ್ತು ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 22ರಿಂದ 23 ಕಿ.ಮೀ ಇಂಧನ ದಕ್ಷತೆಯನ್ನು ಹೊಂದಿರಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಹಳೆಯ ಮಾದರಿಯ ಸಿಟಿ ಕಾರಿನ ಮಾರಾಟವನ್ನು ಮುಂದುವರಿಸಲಿದೆ ಹೋಂಡಾ

ಸಿ-ಸೆಗ್ಮೆಂಟ್ ಸೆಡಾನ್ ಕಾರಿನಲ್ಲೇ ಅತಿಹೆಚ್ಚು ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಸಿಟಿ ಕಾರಿನಲ್ಲಿ ಈ ಬಾರಿ ಮತ್ತಷ್ಟು ಸುಧಾರಿತ ಸುರಕ್ಷಾ ಅಂಶಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಹ್ಯಾಂಡ್‌ಲಿಂಗ್ ಅಸಿಸ್ಟ್, ಹಿಲ್ ಸ್ಟಾರ್ಟ್, 6-ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ವ್ಯೂ ಕ್ಯಾಮೆರಾ ಮತ್ತು 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳಿವೆ.

Most Read Articles

Kannada
Read more on ಹೋಂಡಾ honda
English summary
Fourth Generation Honda City Price And Variant details. Read in Kannada.
Story first published: Tuesday, September 1, 2020, 19:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X