ಆಟೋ ಎಕ್ಸ್‌ಪೋ 2020: ಅಗ್ಗದ ಬೆಲೆಯ ಆರ್1 ಎಲೆಕ್ಟ್ರಿಕ್ ಕಾರು ಅನಾವರಣ

2020ರ ಆಟೋ ಎಕ್ಸ್‌ಪೋ ಈ ಬಾರಿ ವಿವಿಧ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅನಾವರಣಗೊಳಿಸಿದ್ದು, ಚೀನಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಗ್ರೇಟ್ ವಾಲ್ ಮೋಟಾರ್ಸ್ ಕೂಡಾ ಅಗ್ಗದ ಬೆಲೆಯ ಇವಿ ಕಾನ್ಸೆಪ್ಟ್ ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಅಗ್ಗದ ಬೆಲೆಯ ಆರ್1 ಎಲೆಕ್ಟ್ರಿಕ್ ಕಾರು ಅನಾವರಣ

ಚೀನಾದಲ್ಲಿ ಕಳೆದ ಮೂರು ದಶಕಗಳಿಂದ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಗ್ರೇಟ್ ವಾಲ್ ಮೋಟಾರ್ಸ್‌ ಸಂಸ್ಥೆಯು ತನ್ನ ಬಹುನೀರಿಕ್ಷಿತ ಆರ್ 1 ಎಲೆಕ್ಟ್ರಿಕ್ ಕಾರ್ ಅನ್ನು ಪ್ರದರ್ಶಿಸಿದ್ದು, ಈ ಎಲೆಕ್ಟ್ರಿಕ್ ಕಾರಿನ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯೊಂದಿಗೆ ಮಾರಾಟವಾಗುವ ಸುಳಿವು ನೀಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸೆಲೆರಿಯೊ ಕಾರಿಗಿಂತಲೂ ಚಿಕ್ಕದಾಗಿರುವ ಹೊಸ ಕಾರು ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅಗ್ಗದ ಬೆಲೆಯ ಆರ್1 ಎಲೆಕ್ಟ್ರಿಕ್ ಕಾರು ಅನಾವರಣ

ಮಾಹಿತಿಗಳ ಪ್ರಕಾರ ಚೀನಿ ಮಾರುಕಟ್ಟೆಯಲ್ಲಿ ಆರ್1 ಕಾರು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ರೂ. 5.50 ಲಕ್ಷದಿಂದ ರೂ.6.50 ಲಕ್ಷ ಬೆಲೆ ಹೊಂದಿದ್ದು, ಭಾರತದಲ್ಲೂ ಕೂಡಾ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

ಆಟೋ ಎಕ್ಸ್‌ಪೋ 2020: ಅಗ್ಗದ ಬೆಲೆಯ ಆರ್1 ಎಲೆಕ್ಟ್ರಿಕ್ ಕಾರು ಅನಾವರಣ

ಸಣ್ಣ ಗಾತ್ರದ ಆರ್1 ಎಲೆಕ್ಟ್ರಿಕ್ ಕಾರಿನಲ್ಲಿ 33.1 ಕಿವ್ಯಾ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಗರಿಷ್ಠ 351 ಕಿ.ಮೀವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

ಆಟೋ ಎಕ್ಸ್‌ಪೋ 2020: ಅಗ್ಗದ ಬೆಲೆಯ ಆರ್1 ಎಲೆಕ್ಟ್ರಿಕ್ ಕಾರು ಅನಾವರಣ

2019ರ ಮಧ್ಯಂತರದಲ್ಲಿ ಚೀನಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಉತ್ತಮ ಬೇಡಿಕೆ ಹೊಂದಿರುವ ಆರ್1 ಕಾರು ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯುತ್ತಿದೆ.

ಆಟೋ ಎಕ್ಸ್‌ಪೋ 2020: ಅಗ್ಗದ ಬೆಲೆಯ ಆರ್1 ಎಲೆಕ್ಟ್ರಿಕ್ ಕಾರು ಅನಾವರಣ

ಹೊಸ ಕಾರು ಪ್ರತಿ ಗಂಟೆಗೆ 100 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದ್ದು, ಕಂಪ್ಯಾಕ್ಟ್ ವಿನ್ಯಾಸದೊಂದಿಗೆ ಅನೂಕಲಕವಾದ ಒಳಾಂಗಣ ವಿನ್ಯಾಸ ಪಡೆದುಕೊಂಡಿದೆ.

ಆಟೋ ಎಕ್ಸ್‌ಪೋ 2020: ಅಗ್ಗದ ಬೆಲೆಯ ಆರ್1 ಎಲೆಕ್ಟ್ರಿಕ್ ಕಾರು ಅನಾವರಣ

ಹಾಗೆಯೇ ಆರ್1 ಕಾರಿನಲ್ಲಿ ಕಾರ್ ಕನೆಕ್ಟೆಡ್ ಫೀಚರ್ಸ್ ಜೋಡಿಸಲಾಗಿದ್ದು, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ನೀಡಿರುವುದು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲಿದೆ.

ಆಟೋ ಎಕ್ಸ್‌ಪೋ 2020: ಅಗ್ಗದ ಬೆಲೆಯ ಆರ್1 ಎಲೆಕ್ಟ್ರಿಕ್ ಕಾರು ಅನಾವರಣ

ಇನ್ನು ಗ್ರೇಟ್‍‍ವಾಲ್ ಮೋಟಾರ್ಸ್ ಆರ್1 ಕಾರ್ ಅನ್ನು ಸದ್ಯಕ್ಕೆ ಭಾರತದಲ್ಲಿ ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲವಾದರೂ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆಟೋ ಎಕ್ಸ್‌ಪೋ ಆರಂಭಿಸಲಿದ್ದು, ಹೊಸ ಕಾರು 2021ರ ವೇಳೆಗೆ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

More from DriveSpark

Article Published On: Wednesday, February 5, 2020, 22:33 [IST]
English summary
Auto Expo 2020: Great Wall Motors R1 Electric Unveiled. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+