ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

2020ರ ದೆಹಲಿ ಆಟೋ ಎಕ್ಸ್‌ಪೋ ಇದೇ ತಿಂಗಳ 5ರಿಂದ ನೋಯ್ಡಾದಲ್ಲಿ ನಡೆಯಲಿದ್ದು, ಚೀನಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಗ್ರೇಟ್ ವಾಲ್ ಮೋಟಾರ್ಸ್ ತನ್ನ ಬಹುಬೇಡಿಕೆಯ ಹವಾಲ್ ಎಸ್‌ಯುವಿಯೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

ಚೀನಾ ಮಾರುಕಟ್ಟೆಯಲ್ಲಿ ಸದ್ಯ ಭಾರೀ ಜನಪ್ರಿಯತೆ ಹೊಂದಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗುತ್ತಿದ್ದು, ಅಧಿಕೃತ ಟ್ವಿಟರ್ ಖಾತೆ ಮೂಲಕ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗುತ್ತಿರುವುದಾಗಿ ಹೇಳಿಕೊಂಡಿರುವುದಲ್ಲದೇ ಬಿಡುಗಡೆಗೊಳಿಸಲಿರುವ ಮೊದಲ ಎಸ್‌ಯುವಿ ಕಾರಿನ ಬಗ್ಗೆಯು ಮಾಹಿತಿ ಬಹಿರಂಗಪಡಿಸಿದೆ. ಹೊಸ ಕಾರಿನ ಡಿಸೈನ್ ಕುರಿತಾಗಿ ಹಲವು ಟೀಸರ್ ಚಿತ್ರಗಳನ್ನು ಬಹಿರಂಗಪಡಿಸಲಾಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

ಚೀನಿ ಮಾರುಕಟ್ಟೆಯಲ್ಲಿ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಹವಾಲ್ ಸಂಸ್ಥೆಯು ವಿವಿಧ ಮಾದರಿಯ ಕಾರು ಆವೃತ್ತಿಗಳನ್ನು ಮಾರಾಟಮಾಡುತ್ತಿದ್ದು, ಇದೀಗ ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಹತ್ತಕ್ಕೂ ಹೆಚ್ಚು ಹೊಸ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿವೆ.

ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

ಹವಾಲ್ ನಿರ್ಮಾಣದ ಹೆಚ್6 ಎನ್ನುವ ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಯು ಭಾರತದಲ್ಲಿ ಮೊದಲ ಹಂತದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಕಿಯಾ ಸೆಲ್ಟೊಸ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಇದು ಪೈಪೋಟಿಯಾಗಿದೆ.

ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

ಇದರೊಂದಿಗೆ ಸೆಡಾನ್, ಎಂಪಿವಿ, ಹ್ಯಾಚ್‌ಬ್ಯಾಕ್ ಮತ್ತು ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಬಿಡುಗಡೆ ಪಟ್ಟಿಯಲ್ಲಿ ಸೇರಿದ್ದು, ಕೈಗೆಟುಕುವ ಬೆಲೆಗಳಲ್ಲಿ ಹೊಸ ಕಾರು ಉತ್ಪನ್ನಗಳು ಬಿಡುಗಡೆಗೊಳ್ಳಲಿವೆ. ಇದರಿಂದ ಚೀನಿ ಮಾರುಕಟ್ಟೆಯಲ್ಲಿರುವ ಎಂಜಿ ಮಾತೃಸಂಸ್ಥೆ ಸೈಕ್‌‌ಗೆ ಪ್ರಬಲ ಪೈಪೋಟಿಯಾಗಿರುವಂತೆ ಭಾರತದಲ್ಲೂ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಇದೀಗ ಎಂಜಿ ಸಂಸ್ಥೆಗೆ ಪೈಪೋಟಿಯಾಗಲಿದ್ದು, 2021ರ ಆರಂಭದಲ್ಲಿ ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

ಇನ್ನು ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯ ಕಾರು ಉತ್ಪನ್ನಗಳ ಬಗೆಗೆ ಹೇಳುವುದಾದರೇ, ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಲಿದೆ.

ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

ಮೊದಲ ಹಂತವಾಗಿ ಭಾರತದಲ್ಲಿ ವಾರ್ಷಿಕವಾಗಿ 2 ಲಕ್ಷ ಕಾರುಗಳ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ತೆರೆಯಲು ಯೋಜಿಸಿರುವ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು, ಚೀನಾದಲ್ಲಿ ಪ್ರತಿ ಸ್ಪರ್ಧಿ ಕಾರು ಸಂಸ್ಥೆಯಾಗಿರುವ ಸೈಕ್‌(ಎಂಜಿ ಮೋಟಾರ್ ಮಾತೃ ಸಂಸ್ಥೆ)ಗೆ ಪೈಪೋಟಿ ನೀಡುತ್ತಿರುವಂತೆ ಭಾರತದಲ್ಲೂ ಎಂಜಿಗೆ ಪೈಪೋಟಿ ನೀಡಲು ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

ಹೊಸ ಕಾರು ಉತ್ಪಾದನಾ ಘಟಕ ನಿರ್ಮಾಣಕ್ಕಾಗಿ ಕಳೆದ ವರ್ಷ ಪುಣೆ ಬಳಿ 500 ಎಕರೆ ಭೂಮಿ ಖರೀದಿಗೆ ಮುಂದಾಗಿದ್ದ ಗ್ರೇಟ್ ವಾಲ್ ಮೋಟಾರ್ಸ್ ಸಂಸ್ಥೆಯು ಕೊನೆಯ ಹಂತದಲ್ಲಿ ತೆಲಂಗಾಣದಲ್ಲಿರುವ ಜನರಲ್ ಮೋಟಾರ್ಸ್ ಸಂಸ್ಥೆಯ ಹಳೆಯ ಕಾರು ಉತ್ಪಾದನಾ ಘಟಕವನ್ನೇ ಖರೀದಿ ಮಾಡಿ ಉನ್ನತೀಕರಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

ಆಟೋ ಎಕ್ಸ್‌ಪೋದಲ್ಲಿ ಹೊಸ ಕಾರುಗಳು ಭಾಗಿಯಾದ ನಂತರ ಅಧಿಕೃತ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದ್ದು, 2021ರ ವೇಳೆಗೆ ಗ್ರೇಟ್ ವಾಲ್ ಮೋಟಾರ್ಸ್ ಹೊಸ ಕಾರುಗಳು ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿವೆ.

ಆಟೋ ಎಕ್ಸ್‌ಪೋ 2020: ಹವಾಲ್ ಕಾನ್ಸೆಪ್ಟ್ ಕಾರಿನ ಟೀಸರ್ ಬಿಡುಗಡೆ..!

ಇಲ್ಲದೇ ಭಾರತದಿಂದಲೇ ಹೊಸ ಕಾರುಗಳನ್ನು ರಫ್ತು ಮಾಡಲು ಉದ್ದೇಶಿಸಿರುವ ಗ್ರೇಟ್ ವಾಲ್ ಸಂಸ್ಥೆಯು ಇಂಡೋನೇಷ್ಯಾ, ಆಸ್ಟ್ರೇಲಿಯಾ ಮಾರುಕಟ್ಟೆಗಳಿಗೆ ರಫ್ತು ಮಾಡುವ ಯೋಜನೆಯಲ್ಲಿದ್ದು, ಭಾರತದಲ್ಲಿ ತನ್ನ ಹೊಸ ಕಾರುಗಳ ಮಾರಾಟ ಸರಣಿಯನ್ನು ಪರಿಚಯಿಸಲು ಬರೋಬ್ಬರಿ ರೂ. 7 ಸಾವಿರ ಕೋಟಿ ಬಂಡವಾಳವನ್ನು ಹಂತಹಂತವಾಗಿ ಹೂಡಿಕೆ ಮಾಡಲಿದೆ.

More from DriveSpark

Article Published On: Monday, February 3, 2020, 18:44 [IST]
English summary
GWM Havel concept will be showcased at Auto Expo. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+