ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
ಹೋಂಡಾ ಇಂಡಿಯಾ ತನ್ನ ಆಯ್ದ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿ ಮತ್ತು ವಿಶೇಷ ಆಫರ್ ಅನ್ನು ಘೋಷಿಸಿದೆ. ಈ ಆಯ್ದಾ ಮಾದರಿಗಳಿಗೆ ಕಂಪನಿಯು ಮೂರು ವರ್ಷಗಳ ಕಾಲ ಮೇಂಟೆನೆನ್ಸ್ ಪ್ಯಾಕೇಜ್ ಅಫರ್ ಅನ್ನು ನೀಡಿದೆ.

ಕಂಪನಿಯು ಹೊಸ ಕಾರುಗಳ ಮೇಲೆ ನೀಡಿರುವ ರಿಯಾಯಿತಿ ಮತ್ತು ವಿಶೇಷ ಆಫರ್ ಗಳು ಈ ಮೇ ತಿಂಗಳ ಅಂತ್ಯದವರೆಗೂ ಲಭ್ಯವಿದೆ. ಹೋಂಡಾ ಕಂಪನಿಯು ತನ್ನ ಹೊಸ ಅಮೇಜ್ ಮತ್ತು ಸಿಟಿ ಕಾರುಗಳಿಗೆ ಈ ರಿಯಾಯಿತಿಯನ್ನು ನೀಡಿದ್ದಾರೆ. ಹೋಂಡಾ ಕಂಪನಿಯು ತನ್ನ ಗ್ರಾಹಕರಿಗಾಗಿ ಮೇ ತಿಂಗಳ ವಿಶೇಷ ರಿಯಾಯಿತಿಯನ್ನು ನೀಡಿದೆ. ಹೋಂಡಾ ಕಾರುಗಳ ಮೇಲೆ ನೀಡಿರುವ ರಿಯಾಯಿತಿಯ ಬಗ್ಗೆ ಮಾಹಿತಿ ಇಲ್ಲಿದೆ.

ಹೂಸ ಹೋಂಡಾ ಅಮೇಜ್ ಕಾರಿನ ಎಲ್ಲಾ ರೂಪಾಂತರಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. ಹೊಸ ಅಮೇಜ್ ಕಾರಿಗಾಗಿ ತಮ್ಮ ಹಳೆಯ ಕಾರನ್ನು ವಿನಿಮಯ ಮಾಡಿಕೊಳ್ಳಲು ಬಯಸುವ ಗ್ರಾಹಕರು ರೂ. 20,000 ಗಳವರೆಗೆ ನಗದು ರಿಯಾಯಿತಿ ಮತ್ತು ಇತರ ಆಫರ್ ಗಳನ್ನು ಕೂಡ ನೀಡಿದೆ. ಹೋಂಡಾ ಅಮೇಜ್ ಮೇಲೆ ಒಟ್ಟು ರೂ.32,000 ಗಳವರೆಗೆ ವಿಶೇಷ ರಿಯಾಯಿತಿ ಘೋಷಿಸಿದೆ.
MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍ಯುವಿ

ಹೊಸ ಹೋಂಡಾ ಅಮೇಜ್ ಕಾರನ್ನು ಖರೀದಿಸುವ ಗ್ರಾಹಕರಿಗೆ ಮೂರು ವರ್ಷಗಳ ಕಾಲ ವಾರ್ಷಕ ಮೇಂಟೆನೆನ್ಸ್ ಪ್ಯಾಕೇಜ್ ಆಫರ್ ಅನ್ನು ಒಪ್ಪಂದದ ಮೇರೆಗೆ ನೀಡಲಾಗುತ್ತದೆ. ಇದರೊಂದಿಗೆ ಇತರ ಆಫರ್ ಗಳನ್ನು ಕೂಡ ಒಳಗೊಂಡಿದೆ,

ಹೋಂಡಾ ಸಿಟಿ ಕಾರಿನ ರೂಪಾಂತರಕ್ಕೆ ಅನುಗುಣವಾಗಿ ರೂ.1 ಲಕ್ಷ ರಿಯಾಯಿತಿಯನ್ನು ಘೋಷಿಸಿದೆ. ಸಿಟಿ ಕಾರಿನ ಎಸ್‌ವಿ ಎಂಟಿ, ವಿ ಎಂಟಿ ಮತ್ತು ವಿ ಸಿವಿಟಿ ರೂಪಾಂತರಗಳಿಗೆ ರೂ.45,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.25 ಸಾವಿರಗಳವರೆಗೆ ನಗದು ರಿಯಾಯಿತಿ ಮತ್ತು ರೂ.20 ಸಾವಿರಗಳವರೆಗೆ ವಿನಿಮಯ ಬೋನಸ್ ಸೇರಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಮಿಡ್-ಸ್ಪೆಕ್ ವಿಎಕ್ಸ್ ಎಂಟಿ ರೂಪಾಂತರಕ್ಕೆ ರೂ.37,000 ಗಳವರೆಗೆ ನಗದು ರಿಯಾಯಿತಿ ಮತ್ತು ರೂ.35,000 ವಿನಿಮಯ ಬೋನಸ್ ಲಭ್ಯವಿದೆ. ಉಳಿದ ಹೋಂಡಾ ಸಿಟಿ ರೂಪಾಂತರಗಳಿಗೆ ರೂ.50,000 ರೂ.ಗಳವರೆಗೆ ನಗದು ರಿಯಾಯಿತಿ ಮತ್ತು ರೂ.50,000 ರೂ.ಗಳವರೆಗೆ ವಿನಿಮಯ ಬೋನಸ್ ಅನ್ನು ನೀಡಿದೆ.

ಹೋಂಡಾ ಸಿಟಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸೆಡಾನ್ ಗಳಲ್ಲಿ ಒಂದಾಗಿದೆ. ಹೊಸ ತಲೆಮಾರಿನ ಹೊಂಡಾ ಸಿಟಿ ಕಾರಿನ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಹುನಿರೀಕ್ಷಿತ ಈ ಹೊಸ ಹೋಂಡಾ ಸಿಟಿ ಕಾರಿನಲ್ಲಿ ಹೊಸ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಮಾರುಕಟ್ಟೆಯಲ್ಲಿರುವ 1.5-ಲೀಟರ್ ಎಸ್‌ಒಹೆಚ್‌ಸಿ ಎಂಜಿನ್‌ಗಿಂತಲೂ ಇದು ಹೆಚ್ಚು ಪವರ್ ಬ್ಯಾಂಡ್ ಹೊಂದಿರಲಿದೆ. ಹೊಸ ಸಿಟಿ ಕಾರಿನಲ್ಲಿ ಡ್ಯುಯಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್ 15 ಬಿ) ನೀಡಲಾಗುತದೆ. ಈ ಹೊಸ ಎಂಜಿನ್ 119 ಬಿಎಚ್‌ಪಿ ಮತ್ತು ಸುಮಾರು 155 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ತಲೆಮಾರಿನ ಹೋಂಡಾ ಸಿಟಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್, ಟೊಯೊಟಾ ಯಾರೀಸ್ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications