ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

ಕಾರು ಮಾರಾಟದಲ್ಲಿ ಕಳೆದ ಒಂದು ವರ್ಷದಿಂದ ಸತತ ಹಿನ್ನಡೆ ಅನುಭವಿಸುತ್ತಿರುವ ಹೋಂಡಾ ಸಂಸ್ಥೆಯು ಫೆಬ್ರುವರಿ ಅವಧಿಯ ಕಾರು ಮಾರಾಟದಲ್ಲೂ ಭಾರೀ ಕುಸಿತ ಕಂಡಿದೆ. ಹೊಸ ಎಮಿಷನ್ ಜಾರಿಗೆ ಬರುವ ಮುನ್ನ ಬಿಎಸ್-4 ಸ್ಟಾಕ್ ಪೂರ್ಣಗೊಳಿಸಲು ಹರಸಾಹಸ ನಡೆಸಿರುವ ಹೋಂಡಾ ಸಂಸ್ಥೆಯು ಸಿಟಿ ಪೆಟ್ರೋಲ್ ಹೊರತುಪಡಿಸಿ ಇದುವರೆಗೂ ಯಾವುದೇ ಕಾರು ಮಾದರಿಗಳನ್ನು ಹೊಸ ನಿಯಮದಂತೆ ಬಿಡುಗಡೆ ಮಾಡಿಲ್ಲ.

ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಬಿಎಸ್-6 ನಿಯಮದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಈಗಾಗಲೇ ಹೊಸ ವಾಹನಗಳನ್ನು ಬಿಡುಗಡೆಗೊಳಿಸುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಎಂಜಿನ್ ಪ್ರೇರಿತ ವಾಹನಗಳನ್ನು ಇದುವರೆಗೂ ಉನ್ನತೀಕರಿಸದಿರುವ ಹೋಂಡಾ ಸಂಸ್ಥೆಯು ಬಿಎಸ್-4 ಸ್ಟಾಕ್ ಪೂರ್ಣಗೊಳಿಸುವ ಉದ್ದೇಶದಿಂದ ಭರ್ಜರಿ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ.

ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

ಆದಾಗ್ಯೂ ಹೋಂಡಾ ಸಂಸ್ಥೆಯು ಕಳೆದ ತಿಂಗಳ ಫೆಬ್ರುವರಿ ಅವಧಿಯಲ್ಲಿ ಕೇವಲ 7,269 ಕಾರುಗಳನ್ನು ಮಾತ್ರವೇ ಮಾಡಿದ್ದು, 2019ರ ಅವಧಿಯ ಕಾರು ಮಾರಾಟಕ್ಕೆ ಹೋಲಿಕೆ ಮಾಡಿದರೆ ಇದು ಶೇ.46.02ರಷ್ಟು ಕುಸಿತ ಕಂಡಿದೆ.

ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

ಹೋಂಡಾ ನಿರ್ಮಾಣದ ಅಮೇಜ್, ಜಾಝ್ ಮತ್ತು ಸಿಟಿ ಸೆಡಾನ್ ಹೊರತುಪಡಿಸಿ ಉಳಿದ ಕಾರು ಮಾದರಿಗಳು ಮಾರಾಟದಲ್ಲಿ ಶೇ. 90ಕ್ಕಿಂತಲೂ ಹೆಚ್ಚು ಕುಸಿತ ಕಂಡಿದ್ದು, ಬಿಎಸ್-6 ಎಂಜಿನ್ ಮಾದರಿಗಳ ಬಿಡುಗಡೆಯ ನಂತರವಷ್ಟೇ ಗ್ರಾಹಕರ ಬೇಡಿಕೆಯಲ್ಲಿ ಚೇತರಿಕೆ ಕಾಣುವ ನೀರಿಕ್ಷೆಯಿದೆ.

ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

ಆರ್ಥಿಕ ಹಿಂಜರಿತದಿಂದ ಕಳೆದ ವರ್ಷ ಆಟೋ ಉದ್ಯಮದಲ್ಲಿ ಆದ ಸತತ ಕುಸಿತವು ಕಾರು ಉತ್ಪಾದನಾ ಸಂಸ್ಥೆಗಳಿಗೆ ಭಾರೀ ಹೊಡೆತ ನೀಡಿದ್ದಲ್ಲದೆ ಬಿಎಸ್-4 ವಾಹನಗಳ ಸ್ಟಾಕ್ ಉಳಿಯಲು ಪ್ರಮುಖ ಕಾರಣವಾಯ್ತು. ಇದೇ ಸ್ಟಾಕ್ ಪ್ರಮಾಣವು ಇದೀಗ ಕಾರು ಉತ್ಪಾದನಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಏಪ್ರಿಲ್ 1ರ ಒಳಗಾಗಿ ಬಿಎಸ್-4 ಸ್ಟಾಕ್ ಪ್ರಮಾಣವನ್ನು ಮಾರಾಟ ಮಾಡಬೇಕಿರುವುದು ಒಂದು ಸವಾಲಾಗಿದೆ.

ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

ಇದಕ್ಕಾಗಿಯೇ ಸದ್ಯ ಬಿಎಸ್-6 ಮಾದರಿಗಳ ಬಿಡುಗಡೆಗಡೆಗಿಂತಲೂ ಬಿಎಸ್-4 ಸ್ಟಾಕ್ ಕ್ಲಿಯೆರೆನ್ಸ್ ಮೇಲೆ ಹೆಚ್ಚು ಗಮನಹರಿಸಿರುವ ಹೋಂಡಾ ಸಂಸ್ಥೆಯು ಆಕರ್ಷಕ ಆಫರ್‌ಗಳೊಂದಿಗೆ ಸ್ಟಾಕ್ ಪ್ರಮಾಣವನ್ನು ತೆರವುಗೊಳಿಸುತ್ತಿದೆ.

ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

ಆಯ್ದ ಕಾರು ಮಾದರಿಗಳ ಖರೀದಿ ಮೇಲೆ ಗರಿಷ್ಠ 10 ವರ್ಷಗಳ ಗರಿಷ್ಠ ವಾರಂಟಿ ಆಫರ್ ನೀಡಿರುವ ಹೋಂಡಾ ಸಂಸ್ಥೆಯು ಈ ಹಿಂದೆ ಇದ್ದ ಸಾಮಾನ್ಯ 3 ವರ್ಷಗಳ ವಾರಂಟಿ ಅವಧಿಯನ್ನು ವಿಸ್ತರಿಸಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ 10 ವರ್ಷ ಅಥವಾ 1.20 ಲಕ್ಷ ಕಿ.ಮೀ ಆಧಾರದ ಮೇಲೂ ವಾರಂಟಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

ಮತ್ತೊಂದು ವಿಶೇಷ ಅಂದ್ರೆ, ಈಗಾಗಲೇ ಕಾರು ಖರೀದಿ ಮಾಡಿರುವ ಮಾಲೀಕರಿಗೂ ಸಹ ಈ ಹೊಸ ವಾರಂಟಿ ಯೋಜನೆಯು ಅನ್ವಯವಾಗಲಿದ್ದು, ಹೊಸ ಆಫರ್‌ಗಾಗಿ ಹೆಚ್ಚುವರಿ ಮೊತ್ತ ಪಾವತಿ ಮಾಡಬೇಕಾಗುತ್ತದೆ.

ಬಿಎಸ್-6 ಎಫೆಕ್ಟ್- ಹೋಂಡಾ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ

ಸಿಆರ್-ವಿ ಐಷಾರಾಮಿ ಎಸ್‌ಯುವಿ ಮೇಲೆ ಗರಿಷ್ಠ ರೂ.5 ಲಕ್ಷ ತನಕ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಬಿಆರ್‌-ವಿ ಖರೀದಿ ಮೇಲೆ ರೂ.1.10 ಲಕ್ಷ, ನ್ಯೂ ಜನರೇಷನ್ ಸಿವಿಕ್ ಐಷಾರಾಮಿ ಸೆಡಾನ್ ಮೇಲೆ ರೂ.2.50 ಲಕ್ಷ, ಸಿಟಿ ಸೆಡಾನ್ ಮಾದರಿಯ ಮೇಲೆ ರೂ. 75 ಸಾವಿರ, ಜಾಝ್ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ರೂ.50 ಸಾವಿರ, ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ ಮೇಲೆ ರೂ.45 ಸಾವಿರ ಮತ್ತು ಅಮೇಜ್ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯ ಮೇಲೆ ರೂ. 42 ಸಾವಿರ ಡಿಸ್ಕೌಂಟ್ ನೀಡುತ್ತಿದೆ.

More from DriveSpark

Article Published On: Thursday, March 5, 2020, 8:45 [IST]
English summary
Honda Car sales February decrease 46.26 percent details. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+