ಸಿಟಿ ಡೀಸೆಲ್ ಕಾರಿಗೆ ಗುಡ್ ಬೈ ಹೇಳಿದ ಹೋಂಡಾ
ಹೋಂಡಾ ಕಂಪನಿಯು ಮಾರುಕಟ್ಟೆಯಲ್ಲಿರುವ ಸಿಟಿ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಲಾಗಿದೆ. ಹೊಸ ಹೋಂಡಾ ಸಿಟಿ ಕಾರನ್ನು ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ. ಹೋಂಡಾ ಕಂಪನಿಯು ಬಿಎಸ್ 4 ಹೋಂಡಾ ಸಿಟಿ ಡೀಸೆಲ್ ರೂಪಾಂತರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಹೋಂಡಾ ಸಿಟಿ ಡೀಸೆಲ್ ಆವೃತ್ತಿಯನ್ನು ನವೀಕರಿಸಲಾಗುವುದಿಲ್ಲ. ಹೋಂಡಾ ಕಂಪನಿಯು ತನ್ನ ವೆಬ್‌ಸೈಟ್ ನಿಂದ ಬಿಎಸ್-4 ಡೀಸೆಲ್ ಕಾರಿನ ಹೆಸರನ್ನು ಕೈಬಿಡಲಾಗಿದೆ. ಹೋಂಡಾ ಕಂಪನಿಯು ತನ್ನ 2020ರ ಸಿಟಿ ಕಾರನ್ನು ಭಾರತದಲ್ಲಿ ಇದೇ ತಿಂಗಳ 16ರಂದು ಬಿಡುಗಡೆಗೊಳಿಸಬೇಕಿತ್ತು. ಆದರೆ ಕರೋನಾ ಭೀತಿಯಿಂದಾಗಿ ಹೊಸ ಹೋಂಡಾ ಸಿಟಿ ಕಾರಿನ ಬಿಡುಗಡೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.

ಹೊಸ ಹೋಂಡಾ ಸಿಟಿ ಕಾರಿಗೆ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಮೂರನೇ ಬಾರಿಗೆ ಥೈಲ್ಯಾಂಡ್-ಸ್ಪೆಕ್ ಹೋಂಡಾ ಸಿಟಿ ಕಾರು 5 ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ.

ಹೊಸ ಹೋಂಡಾ ಸಿಟಿ 4,549 ಎಂಎಂ ಉದ್ದ, 1,784 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ಹೋಂಡಾ ಸಿಟಿ ಪ್ರಸ್ತುತ ಮಾದರಿಗಿಂತ ಹೆಚ್ಚು ಉದ್ದ ಮತ್ತು ಅಗಲವನ್ನು ಹೊಂದಿದೆ

2020ರ ಹೋಂಡಾ ಸಿಟಿ ಶಾರ್ಪರ್ ಹೆಡ್‍ಲ್ಯಾಂಪ್‍ಗಳನ್ನು ಹೊಂದಿರಲಿದೆ. ಇನ್ನೂ ಈ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್‍ಇಡಿ ಯುನಿಟ್‍ಗಳು, ಹೋಂಡಾ ಸಿಗ್ನೇಚರ್ ಕ್ರೋಮ್ ಬಾರ್, ಕೂಪ್ ಸ್ಟೈಲ್ ಸ್ಲೋಪಿಂಗ್ ರೂಫ್‍ಲೈನ್ ಮತ್ತು ದೊಡ್ಡ ಒಆರ್‍ವಿಎಂಗಳಿವೆ.

ಇನ್ನು ಹೊಸ ಹೋಂಡಾ ಕಾರಿನಲ್ಲಿ ಶಾರ್ಕ್ ಫಿನ್ ಆಂಟೆನಾ, ಟೇಲ್ ಸೆಗ್‍ಮೆಂಟ್ ಮತ್ತು ಉತ್ತಮವಾದ ಬೂಟ್ ಲಿಡ್‍ಗಳಿವೆ. ಹೊಸ ಹೋಂಡಾ ಸಿಟಿ ಕಾರಿನ ಇಂಟಿರಿಯರ್‍ನಲ್ಲಿ ಡ್ಯುಯಲ್ ಟೋನ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍ರೆಸ್ಟ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಹೊಸ ಟಚ್‍ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೋಸ್‍ನಲ್ಲಿ ಕಂಡುಬರುವ ಕನೆಕ್ಟಿವಿಟಿ ತಂತ್ರಜ್ಞಾನಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಹೋಂಡಾ ಸಂಸ್ಥೆಯು ಭಾರತ ಸೇರಿದಂತೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಜನಪ್ರಿಯ ಸಿಟಿ ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

ಹೊಸ ಸಿಟಿ ಕಾರು 1.5 ಲೀಟರ್ ಐ-ವಿಟಿಇಸಿ ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 119 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಹೊಂದಿರುತ್ತದೆ.

ಹೊಸ ಹೋಂಡಾ ಸಿಟಿ ಕಾರು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications