Just In
Don't Miss!
- News
ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಹೊಸ ದಾಖಲೆ ಸೃಷ್ಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಅನಾವರಣಗೊಂಡ ಹೋಂಡಾ ಸಿಟಿ
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಸಿಟಿ ಹ್ಯಾಚ್‌ಬ್ಯಾಕ್ ಅನ್ನು ಥೈಲ್ಯಾಂಡ್‌ನಲ್ಲಿ ಅನಾವರಣಗೊಳಿಸಿದೆ. ಹೋಂಡಾ ಸಿಟಿ ಸೆಡಾನ್ ಜೊತೆ ಈ ಹೊಸ ಹ್ಯಾಚ್‌ಬ್ಯಾಕ್ ಹಲವಾರು ಸಾಮ್ಯತೆಯನ್ನು ಹೊಂದಿದೆ.

ಹೋಂಡಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕ್ರಮಣಕಾರಿ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತಿದೆ. ಹೋಂಡಾ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಎಸ್‍ಯುವಿಗಳು ಮತ್ತು ಸೆಡಾನ್‌ಗಳನ್ನು ಬಿಡುಗಡೆಗೊಳಿಸಲು ಯೋಜಿಸಿದೆ. ಇದರ ನಡುವೆ ಹೋಂಡಾ ಕಂಪನಿಯ ಜನಪ್ರಿಯ ಸಿಟಿ ಮಾದರಿಯನ್ನು ಹ್ಯಾಚ್‌ಬ್ಯಾಕ್ ಆಗಿ ರೋಡ್ ಟೆಸ್ಟ್ ಗಳನ್ನು ನಡೆಸಿತ್ತು. ಇದೀಗ ಈ ಹೊಸ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಅನ್ನು ಅನಾವರಣಗೊಳಿಸಲಾಗಿದೆ.

ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ತನ್ನ ಒಡಹುಟ್ಟಿದ ಸೆಡಾನ್ ಮಾದರಿಯ ಜೊತೆ ಸಿ-ಪಿಲ್ಲರ್ ವರೆಗೆಸಾಕಷ್ಟು ಸಾಮ್ಯತೆಯನ್ನು ಹೊಂದಿದೆ. ಇನ್ನು ಹೊಸ ಹ್ಯಾಚ್‌ಬ್ಯಾಕ್ ನಲ್ಲಿ ಟೈಲ್‌ಗೇಟ್, ಇಂಟಿಗ್ರೇಟೆಡ್ ಸ್ಪಾಯ್ಲರ್, ಹೊದಿಕೆ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಬಂಪರ್‌ನೊಂದಿಗೆ ಹ್ಯಾಚ್ ಸ್ಟೈಲಿಂಗ್‌ಗೆ ಅನುಗುಣವಾಗಿ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್‌ನ ಹಿಂಭಾಗವನ್ನು ಮರುವಿನ್ಯಾಸಗೊಳಿಸಲಾಗಿದೆ.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇವುಗಳು 1.0 ಟರ್ಬೊ ಎಸ್ ಪ್ಲಸ್, 1.0 ಟರ್ಬೊ ಎಸ್‌ವಿ ಮತ್ತು 1.0 ಟರ್ಬೊ ಆರ್‌ಎಸ್ ಆಗಿದೆ. ಇದರಲ್ಲಿ ಆರ್‌ಎಸ್ ಹೆಚ್ಚು ಪರ್ಫಾಮೆನ್ಸ್ ಮಾದರಿಯಾಗಿದೆ.

ಹ್ಯಾಚ್‌ಬ್ಯಾಕ್ ನಲ್ಲಿ 1.0-ಲೀಟರ್ ಮೂರು-ಸಿಲಿಂಡರ್ ಟರ್ಬೋಚಾರ್ಜ್ಡ್ ಗ್ಯಾಸೋಲಿನ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 173 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಸಿವಿಟ್ ಗೇರ್ ಬಾಕ್ಸ್ ಆಯ್ಕೆಯಾಗಿ ಜೋಡಿಸಲಾಗಿದೆ. 85/55 ವಿಭಾಗದ ಟೈರ್‌ಗಳಿಗೆ 16 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಆಕರ್ಷಕವಾಗಿ ಅಳವಡಿಸಲಾಗಿದೆ.

ಈ ಹೊಸ ಸಿಟಿ ಹ್ಯಾಚ್‌ಬ್ಯಾಕ್ ನಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಹೋಂಡಾ ಸ್ಮಾರ್ಟ್ ಕೀ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್, ಆಟೋಮ್ಯಾಟಿಕ್ ಎಸಿ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಗಳನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಈ ಹೊಸ ಸಿಟಿ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ. ಈ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಎಂಟು-ಸ್ಪೀಕರ್ ಆಡಿಯೊ, ಮಲ್ಟಿ-ಆಂಗಲ್ ಪಾರ್ಕಿಂಗ್ ಕ್ಯಾಮೆರಾ, ಆರು ಏರ್ ಬ್ಯಾಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಪ್ಯಾಡಲ್ ಶಿಫ್ಟಿಂಗ್ ಫಂಕ್ಷನ್ ಮತ್ತು ಇತ್ಯಾದಿ ಫೀಚರ್ ಗಳನ್ನು ಹೊಂದಿವೆ.

ಥೈಲ್ಯಾಂಡ್ ಹೊರತುಪಡಿಸಿ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 1.5-ಲೀಟರ್, 1.5-ಲೀಟರ್ ಟರ್ಬೊಡೈಸೆಲ್ ಮತ್ತು 1.5-ಲೀಟರ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಪಡೆಯಬಹುದು. ಐದನೇ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಸಿಟಿ ಸೆಡಾನ್ ಇದು ಇತ್ತೀಚಿನ ತಿಂಗಳುಗಳಲ್ಲಿ ಸಿ-ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಯಾಗಿದೆ. ಇನ್ನು ಹೊಸ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಬಿಡುಗಡೆಗೊಳಿಸುವುದರ ಬಗ್ಗೆ ಹೋಂಡಾ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.