ಡಬ್ಲ್ಯುಆರ್-ವಿ ಕಾರಿಗಾಗಿ ಕಸ್ಟಮೈಜ್ಡ್ ಆಕ್ಸಸರಿಸ್ ಬಿಡುಗಡೆ ಮಾಡಿದ ಹೋಂಡಾ ಕಾರ್ಸ್

ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿರುವ ಬಿಎಸ್-6 ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆ ಅನ್ವಯ ಹೋಂಡಾ ಕಂಪನಿಯು ಕಾರಿನ ಪ್ರೀಮಿಯಂ ಲುಕ್ ಹೆಚ್ಚಿಸುವ ಪ್ರಮುಖ ಕಸ್ಟಮೈಜ್ಡ್ ಆಕ್ಸಸರಿಸ್‌ಗಳನ್ನು ಬಿಡುಗಡೆ ಮಾಡಿದೆ.

ಡಬ್ಲ್ಯುಆರ್-ವಿ ಕಾರಿಗಾಗಿ ಕಸ್ಟಮೈಜ್ಡ್ ಆಕ್ಸಸರಿಸ್ ಬಿಡುಗಡೆ ಮಾಡಿದ ಹೋಂಡಾ ಕಾರ್ಸ್

ಹೊಸ ಡಬ್ಲ್ಯುಆರ್-ವಿ ಕಾರು ಈ ಬಾರಿ ಬಿಎಸ್-6 ಎಂಜಿನ್‌ನೊಂದಿಗೆ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಆಕರ್ಷಕ ಫ್ರಂಟ್ ಲುಕ್ ಪಡೆದುಕೊಂಡಿದೆ. ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಡಬ್ಲ್ಯುಆರ್-ವಿ ಕಾರು ಆರಂಭಿಕವಾಗಿ ರೂ. 8.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.10.99 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಡಬ್ಲ್ಯುಆರ್-ವಿ ಕಾರಿಗಾಗಿ ಕಸ್ಟಮೈಜ್ಡ್ ಆಕ್ಸಸರಿಸ್ ಬಿಡುಗಡೆ ಮಾಡಿದ ಹೋಂಡಾ ಕಾರ್ಸ್

ಹೊಸ ಕಾರು ಪೆಟ್ರೋಲ್ ಮಾದರಿಯಲ್ಲಿ ಎರಡು ವೆರಿಯೆಂಟ್‌ಗಳನ್ನು ಮತ್ತು ಡೀಸೆಲ್ ಆವೃತ್ತಿಯಲ್ಲಿ ಎರಡು ವೆರಿಯೆಂಟ್‌ಗಳನ್ನು ಪಡೆದುಕೊಂಡಿದ್ದು, ಹೊಸ ಕಾರು ಬಿಎಸ್-4 ಮಾದರಿಗಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಡಬ್ಲ್ಯುಆರ್-ವಿ ಕಾರಿಗಾಗಿ ಕಸ್ಟಮೈಜ್ಡ್ ಆಕ್ಸಸರಿಸ್ ಬಿಡುಗಡೆ ಮಾಡಿದ ಹೋಂಡಾ ಕಾರ್ಸ್

ಇದೀಗ ಹೋಂಡಾ ಕಂಪನಿಯು ಬಿಡುಗಡೆ ಮಾಡಿರುವ ಕಸ್ಟಮೈಜ್ಡ್ ಆಕ್ಸಸರಿಸ್‌ಗಳು ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡಲಿದ್ದು, ಹೊಸ ಆಕ್ಸಸರಿಸ್‌ಗಳನ್ನು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಗೊಳಿಸಿದೆ.

ಡಬ್ಲ್ಯುಆರ್-ವಿ ಕಾರಿಗಾಗಿ ಕಸ್ಟಮೈಜ್ಡ್ ಆಕ್ಸಸರಿಸ್ ಬಿಡುಗಡೆ ಮಾಡಿದ ಹೋಂಡಾ ಕಾರ್ಸ್

ಹೊಸ ಕಾರಿನ ಪ್ರೀಮಿಯಂ ಖದರ್ ಹೆಚ್ಚಿಸಲು ಫ್ರಂಟ್ ಬಂಪರ್ ಗಾರ್ಡ್, ಬಂಪರ್ ಪ್ರೋಟೆಕ್ಟರ್, ಬಂಪರ್ ಪ್ರೋಜೆಕ್ಟರ್, ಬಾಡಿ ಸೈಡ್ ಮೌಲ್ಡಿಂಗ್, ಡೋರ್ ಎಡ್ಜ್ ಗಾರ್ನಿಶ್, ಡೋರ್ ಹ್ಯಾಂಡಲ್ ಪ್ರೋಟೆಕ್ಟರ್, ಸ್ಟೇಪ್ ಇಲ್ಯುನಿನೇಟರ್, ಫ್ರಂಟ್ ಫೆಂಡರ್ ಗಾರ್ನಿಶ್ ಮತ್ತು ಡೋರ್ ವೀಸರ್ ಲಭ್ಯವಿವೆ.

ಡಬ್ಲ್ಯುಆರ್-ವಿ ಕಾರಿಗಾಗಿ ಕಸ್ಟಮೈಜ್ಡ್ ಆಕ್ಸಸರಿಸ್ ಬಿಡುಗಡೆ ಮಾಡಿದ ಹೋಂಡಾ ಕಾರ್ಸ್

ಕಸ್ಟಮೈಜ್ಡ್ ಆಕ್ಸಸರಿಸ್‌ಗಳು ಅಧಿಕೃತವಾಗಿ ಕಾರು ಮಾರಾಟ ಕಂಪನಿಗಳೇ ಮಾರಾಟ ಮಾಡುವುದರಿಂದ ಬೆಲೆ ಕೂಡಾ ಕಡಿಮೆಯಾಗಿರುವುದಲ್ಲದೇ ಸಾರಿಗೆ ನಿಯಮದನ್ವಯ ಸಿದ್ದಪಡಿಸಲಾಗಿರುತ್ತದೆ. ಹೀಗಾಗಿ ಆಟೋ ಕಂಪನಿಗಳ ಬಳಿಯೇ ಕಸ್ಟಮೈಜ್ಡ್ ಆಕ್ಸಸರಿಸ್ ಜೋಡಣೆಯು ಉತ್ತಮ ಎನ್ನಬಹುದು.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಡಬ್ಲ್ಯುಆರ್-ವಿ ಕಾರಿಗಾಗಿ ಕಸ್ಟಮೈಜ್ಡ್ ಆಕ್ಸಸರಿಸ್ ಬಿಡುಗಡೆ ಮಾಡಿದ ಹೋಂಡಾ ಕಾರ್ಸ್

ಇನ್ನು ಬಿಎಸ್-6 ಡಬ್ಲ್ಯುಆರ್-ವಿ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ.

ಡಬ್ಲ್ಯುಆರ್-ವಿ ಕಾರಿಗಾಗಿ ಕಸ್ಟಮೈಜ್ಡ್ ಆಕ್ಸಸರಿಸ್ ಬಿಡುಗಡೆ ಮಾಡಿದ ಹೋಂಡಾ ಕಾರ್ಸ್

1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90-ಬಿಎಚ್‌ಪಿ ಮತ್ತು 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 100-ಬಿಎಚ್‌ಪಿ ಮತ್ತು 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಡಬ್ಲ್ಯುಆರ್-ವಿ ಕಾರಿಗಾಗಿ ಕಸ್ಟಮೈಜ್ಡ್ ಆಕ್ಸಸರಿಸ್ ಬಿಡುಗಡೆ ಮಾಡಿದ ಹೋಂಡಾ ಕಾರ್ಸ್

ಹೊಸ ಎಂಜಿನ್‌ಗಳು ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಕಾರಿನ ಮೈಲೇಜ್ ಪ್ರಮಾಣವು ಕೂಡಾ ತುಸು ಹೆಚ್ಚಳವಾಗಿದೆ. ಡಬ್ಲ್ಯುಆರ್-ವಿ ಕಾರಿನ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 16.5 ಕಿ.ಮೀ ಮತ್ತು ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ 23.7 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದೆ.

Article Published On: Thursday, August 6, 2020, 13:30 [IST]
English summary
2020 Honda WR-V Accessories Listed On Official Website. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+