ಕಾರು ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್‌ ಜಗತ್ತಿನಾದ್ಯಂತ ಆತಂಕ ಹುಟ್ಟಿಸಿದೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾ ವೈರಸ್‌ ಭೀತಿಯಿಂದ ಇದೇ ತಿಂಗಳು ನಡೆಯಬೇಕಿದ್ದ ಜಿನೆವಾ ಮೋಟಾರ್ ಶೋವನ್ನು ರದ್ದುಗೊಳಿಸಲಾಗಿದೆ.

ಕಾರು ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಇದರೊಂದಿಗೆ ಹ್ಯುಂಡೈ ಕಂಪನಿಗೂ ಕರೋನಾ ವೈರಸ್ ಬಿಸಿ ತಟ್ಟಿದೆ. ಹ್ಯುಂಡೈ ಕಂಪನಿಯ ಉಲ್ಸಾನ್ ಘಟಕದಲ್ಲಿರುವ ಕಾರ್ಮಿಕನೊಬ್ಬನಿಗೆ ಕರೋನಾ ವೈರಸ್ ಬಂದಿರುವುದರಿಂದ ಈ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಕಾರುಗಳ ಮಾರಾಟದಲ್ಲಿ ಇಳಿಕೆ ಕಂಡಿದೆ. ಇದೀಗ ಹ್ಯುಂಡೈ ಕಂಪನಿಯು ಕರೋನಾ ವೈರಸ್ ಭೀತಿಯಿಂದ ಜನಪ್ರಿಯ ಐ20 ಕಾರಿನ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಳಿಸುವುದನ್ನು ಮುಂದೂಡಲಾಗಿದೆ.

ಕಾರು ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಇತ್ತೀಚೆಗೆ ಹೊಸ ಐ20 ಕಾರಿನ ಹೊರಭಾಗದ ಚಿತ್ರಗಳು ಬಹಿರಂಗವಾಗಿತ್ತು. ಇದರಿಂದಾಗಿ 2020ರ ಹ್ಯುಂಡೈ ಐ20 ಕಾರಿನ ವಿನ್ಯಾಸ ಮತ್ತು ಫೀಚರ್ಸ್‍‍ಗಳ ಮಾಹಿತಿ ಬಹಿರಂಗವಾಗಿದೆ. ಈ ಹೊಸ ಐ20 ಕಾರು ಸಾಕಷ್ಟು ಸ್ಪೋರ್ಟಿಯರ್ ಮತ್ತು ಸ್ಟೈಲಿಶ್ ಲುಕ್ ಅನ್ನು ಹೊಂದಿದೆ.

ಕಾರು ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಐ20 ಹ್ಯುಂಡೈ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍‍ನಲ್ಲಿ 4 ಸ್ಫೋಕ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇದು ಹೊಸ ಹ್ಯುಂಡೈ ಕ್ರೆಟಾ ಕಾರಿನಲ್ಲಿರುವ ಸ್ಟೀಯರಿಂಗ್ ಮಾದರಿಯಲ್ಲಿದೆ.

ಕಾರು ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಹೊಸ ಹ್ಯುಂಡೈ ಐ20 ಕಾರು ಆಡಿಯೊ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಅನ್ನು ಒಳಗೊಂಡಿದೆ. ಈ ಕಾರಿನಲ್ಲಿ 10.25 ಇಂಚಿನ ಡಿಜಿಟಲ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಮತ್ತು ಇತರ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಕಾರಿನ ಮುಂಭಾಗದಲ್ಲಿ ಹೊಸ ಹನಿಕೊಂಬ್ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನ ಮ್ಯಾಟ್ ಕಪ್ಪು ಬಣ್ಣವನ್ನು ಹೊಂದಿದೆ.

ಕಾರು ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಹೊಸ ಹ್ಯುಂಡೈ ಐ20 ಕಾರು ಹೊಸ ಕ್ರೆಟಾದಲ್ಲಿರುವಂತಹ ಕ್ಯಾಸ್ಕೇಡಿಂಗ್ ಗ್ರಿಲ್‍ ಅನ್ನು ಹೊಂದಿದೆ. ಬಹಿರಂಗವಾಗಿರುವ ಚಿತ್ರದಲ್ಲಿ 2020ರ ಹ್ಯುಂಡೈ ಐ20 ಕಾರು ನೀಲಿ ಬಣ್ಣವನ್ನು ಹೊಂದಿದೆ. ಹೊಸ ಹುಂಡೈ ಐ20 ಕಾರಿನ ಬದಿಯ ಪಿಲ್ಲರ್‍‍ಗಳು ಕಪ್ಪು ಬಣ್ಣವನ್ನು ಹೊಂದಿದೆ.

ಕಾರು ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಎರಡು ಟೇಲ್‍ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ವಿಡಬ್ಲ್ಯೂ ಟೈಗನ್‍‍‍ನಲ್ಲಿ ಇರುವಂತಹ ಕೆಂಪು ಇ‍ಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಟೇಲ್‍‍ಲೈಟ್ ಹೊಂದಿದೆ. ಹೊಸ ಐ20 ಕಾರಿನಲ್ಲಿ 1.2 ಲೀಟರಿನ ಬಿ‍ಎಸ್ 6 ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು.

ಕಾರು ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಈ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ ವೆನ್ಯೂ ಕಾರಿನಲ್ಲಿರುವಂತಹ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಸಹ ಅಳವಡಿಸುವ ಸಾಧ್ಯತೆಗಳಿವೆ.

ಕಾರು ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಹೊಸ ಹ್ಯುಂಡೈ ಐ20 ಕಾರು ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಕಂಪನಿಯ ಬಲೆನೊ, ಫೋರ್ಡ್ ಫ್ರೀ‍‍ಸ್ಟೈಲ್, ಟಾಟಾ ಆಲ್ಟ್ರೋಜ್ ಹಾಗೂ ಹೋಂಡಾ ಜಾಜ್‍ ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Tuesday, March 3, 2020, 16:54 [IST]
English summary
2020 Hyundai i20 Global Debut Delayed Due To Corona Virus. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+