ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಹ್ಯುಂಡೈ ಇಂಡಿಯಾ ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಒರಾ ಕಾಂಪ್ಯಾಕ್ಟ್ ಸೆಡಾನ್ ಕಾರ್ ಅನ್ನು ಅನಾವರಣಗೊಳಿಸಿತ್ತು. ಅನಾವರಣಗೊಳಿಸುವಾಗ ಒರಾ ಕಾರಿನ ಎಕ್ಸ್ ಟಿರಿಯರ್ ಅನ್ನು ಮಾತ್ರ ಪ್ರದರ್ಶಿಸಲಾಗಿತ್ತು.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಈಗ ಹ್ಯುಂಡೈ ಕಂಪನಿಯು ಹೊಸ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿ ಹೊಸದಾಗಿ ಬಿಡುಗಡೆಯಾಗಲಿರುವ ಕಾರಿನ ಇಂಟಿರಿಯರ್‍‍ಗಳನ್ನು ತೋರಿಸಲಾಗಿದೆ. ಒರಾ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಜನವರಿ 21ರಂದು ಬಿಡುಗಡೆಗೊಳಿಸಲಾಗುವುದು.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಒರಾ ಕಾಂಪ್ಯಾಕ್ಟ್ ಸೆಡಾನ್ ಕಾರಿನ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ. ರೂ.10,000 ಪಾವತಿಸಿ ಒರಾ ಕಾರ್ ಅನ್ನು ಬುಕ್ ಮಾಡಬಹುದಾಗಿದೆ. ಈ ಕಾರಿನ ವಿತರಣೆಯನ್ನು ಕಾರು ಬಿಡುಗಡೆಯಾದ ತಕ್ಷಣ ನೀಡಲಾಗುವುದು.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಈ ವೀಡಿಯೊದಲ್ಲಿ ಕಾಣುವಂತೆ ಹ್ಯುಂಡೈ ಒರಾ ಗ್ರಾಂಡ್ ಐ10 ನಿಯೋಸ್‍‍ನಲ್ಲಿರುವಂತಹ ಕ್ಯಾಬಿನ್ ಲೇ‍ಔಟ್ ಅನ್ನು ಹೊಂದಿದೆ. ನಿಯೋಸ್ ಕಾರಿಗೆ ಹೋಲಿಸಿದರೆ ಒರಾ ಕಾರು ಹೆಚ್ಚು ಡಾರ್ಕ್ ಬಣ್ಣವನ್ನು ಹೊಂದಿರಲಿದೆ. ಹ್ಯುಂಡೈ ಒರಾ ಕ್ಯಾಬಿನ್ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿರಲಿದೆ.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಡ್ಯಾಶ್‍‍ಬೋರ್ಡ್ ಮೇಲೆ ಡಾರ್ಕ್ ಶೇಡ್‍‍ಗಳಿರಲಿದ್ದು, ಫ್ಯಾಬ್ರಿಕ್ ಅಪ್‍‍ಹೋಲೆಸ್ಟರಿ ಸೀಟುಗಳು ಬೀಜ್ ಬಣ್ಣವನ್ನು ಹೊಂದಿವೆ. ಸೆಂಟ್ರಲ್ ಕಂಸೋಲ್‍‍ನಲ್ಲಿರುವ ಡ್ಯಾಶ್‍‍ಬೋರ್ಡ್ 8.0 ಇಂಚಿನ ಆಪಲ್ ಕಾರ್‍‍ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗಳಿಗೆ ಹೊಂದಿಕೊಳ್ಳುವ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹೊಂದಿದೆ.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಈ ಕ್ಯಾಬಿನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿ 5.3 ಇಂಚಿನ ಡಿಜಿಟಲ್ ಡಿಸ್‍‍ಪ್ಲೇ ಹಾಗೂ ಅನಲಾಗ್ ಟಾಚೋಮೀಟರ್‍‍ಗಳನ್ನು ಹೊಂದಿದೆ. ಇವುಗಳನ್ನು ಗ್ರಾಂಡ್ ಐ10 ನಿಯೋಸ್ ಕಾರಿನಲ್ಲಿಯೂ ಸಹ ಅಳವಡಿಸಲಾಗಿದೆ.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಕ್ಲೈಮೇಟ್ ಕಂಟ್ರೋಲ್ ಫೀಚರ್‍‍ನಲ್ಲಿ ಚಿಕ್ಕದಾದ ಡಿಸ್‍‍ಪ್ಲೇಯನ್ನು ನೀಡಲಾಗಿದೆ. ನಿಯೋಸ್ ಕಾರಿನಲ್ಲಿರುವಂತಹ ಟರ್ಬೈನ್ ಶೇಪಿನ ಎ‍‍ಸಿ ವೆಂಟ್‍‍ಗಳನ್ನು ಎರಡೂ ಬದಿಯಲ್ಲಿ ಅಳವಡಿಸಲಾಗಿದೆ.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಹ್ಯುಂಡೈ ಒರಾ ಕಾರಿನಲ್ಲಿ ವೈರ್‍‍ಲೆಸ್ ಚಾರ್ಜಿಂಗ್, ರೇರ್ ಎಸಿ ವೆಂಟ್ಸ್, ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಇಬಿಡಿ ಹೊಂದಿರುವ ಎ‍‍ಬಿ‍ಎಸ್, ಏರ್‍‍ಬ್ಯಾಗ್ ಸೇರಿದಂತೆ ಹಲವಾರು ಫೀಚರ್‍‍ಗಳಿವೆ.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಒರಾ ಕಾರ್ ಅನ್ನು ಮೂರು ರೀತಿಯ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುವುದು. ಈ ಎಲ್ಲಾ ಮೂರು ಎಂಜಿನ್‍‍ಗಳು ಬಿ‍ಎಸ್ 6 ಆಗಿವೆ. ಹ್ಯುಂಡೈ ವೆನ್ಯೂ ಕಾರಿನಲ್ಲೂ ಇದೇ ರೀತಿಯ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

1.2 ಲೀಟರಿನ ಪೆಟ್ರೋಲ್ ಎಂಜಿನ್ 82 ಬಿ‍‍ಹೆಚ್‍ಪಿ ಪವರ್ ಹಾಗೂ 114 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 100 ಬಿ‍‍ಹೆಚ್‍‍ಪಿ ಪವರ್ ಹಾಗೂ 172 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.2 ಲೀಟರಿನ ಡೀಸೆಲ್ ಎಂಜಿನ್ 75 ಬಿ‍‍ಹೆಚ್‍‍ಪಿ ಪವರ್ ಹಾಗೂ 190 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಈ ಎಲ್ಲಾ ಎಂಜಿನ್‍‍ಗಳಲ್ಲೂ 5 ಸ್ಪೀಡಿನ ಸ್ಟಾಂಡರ್ಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಹ್ಯುಂಡೈ ಕಂಪನಿಯು 1.2 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ನಲ್ಲಿ ಎ‍ಎಂಟಿ ಟ್ರಾನ್ಸ್ ಮಿಷನ್ ಅಳವಡಿಸಲಿದೆ. 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್‍‍ನಲ್ಲಿ ಎ‍ಎಂಟಿ ಗೇರ್‍‍ಬಾಕ್ಸ್ ಅಳವಡಿಸುವುದಿಲ್ಲ.

ವೀಡಿಯೊ ಮೂಲಕ ಬಹಿರಂಗವಾದ ಹ್ಯುಂಡೈ ಒರಾ ಇಂಟಿರಿಯರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಒರಾ ಸೆಡಾನ್ ಕಾರು ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿರುವ ಮತ್ತೊಂದು ಪ್ರಮುಖ ಕಾರ್ ಆಗಿದೆ. ಒರಾ ಕಾರು ಬಿಡುಗಡೆಯಾದ ನಂತರ ಹ್ಯುಂಡೈನ ಮತ್ತೊಂದು ಕಾರ್ ಆದ ಎಕ್ಸೆಂಟ್ ಕಾರ್ ಅನ್ನು ಸ್ಥಗಿತಗೊಳಿಸಲಾಗುವುದು. ಈ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.6 ಲಕ್ಷಗಳಿಂದ ರೂ.8 ಲಕ್ಷಗಳವರೆಗೆ ಇರಲಿದೆ.

Article Published On: Thursday, January 16, 2020, 12:07 [IST]
English summary
Hyundai Aura Interiors Revealed In New Video: India Launch Scheduled For 21st Of January. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+