ಆಕರ್ಷಕ ಬೆಲೆಯೊಂದಿಗೆ ಅತಿ ಹೆಚ್ಚು ಮೈಲೇಜ್ ನೀಡುವ ಹ್ಯುಂಡೈ ಔರಾ ಬಿಡುಗಡೆ
ಹ್ಯುಂಡೈ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಮಾದರಿಯಾದ ಎಕ್ಸೆಂಟ್ ಕಾರಿನ ಬದಲಾಗಿ ನ್ಯೂಜನರೇಷನ್ ಮಾದರಿಯಾದ ಔರಾ ಬಿಡುಗಡೆಗೊಳಿಸಿದ್ದು, ಹೊಸ ಕಾರು ಹೊಸ ಫೀಚರ್ಸ್‌ಗಳೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸೆಂಟ್ ಕಾರು ಮಾದರಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವ ಹ್ಯುಂಡೈ ಸಂಸ್ಥೆಯು ಎಕ್ಸೆಂಟ್ ಕಾರಿಗೆ ಬದಲಾಗಿ ಹೊಸ ವಿನ್ಯಾಸ ಮತ್ತು ಬಿಎಸ್-6 ವೈಶಿಷ್ಟ್ಯತೆಗಳನ್ನು ಒಳಗೊಂಡ ಔರಾ ಕಾರನ್ನು ಬಿಡುಗಡೆಗೊಳಿಸಿದ್ದು, ಔರಾ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.22 ಲಕ್ಷ ಬೆಲೆಯೊಂದಿಗೆ ಇಂದಿನಿಂದಲೇ ಖರೀದಿಗೆ ಲಭ್ಯವಿರಲಿದೆ.

ಔರಾ ಕಾರು ಗ್ರಾಹಕರ ಬೇಡಿಕೆಯೆಂತೆ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್ ಪ್ಲಸ್ ಮತ್ತು ಎಸ್ಎಕ್ಸ್ ಆಪ್ಷನ್ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಔರಾ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಇ (ಪೆಟ್ರೋಲ್ ಮ್ಯಾನುವಲ್)- ರೂ.5,79,900
ಎಸ್ (ಪೆಟ್ರೋಲ್ ಮ್ಯಾನುವಲ್)- ರೂ.6,55,900
ಎಸ್ಎಕ್ಸ್ (ಪೆಟ್ರೋಲ್ ಮ್ಯಾನುವಲ್)- ರೂ. 7,29,900
ಎಸ್ಎಕ್ಸ್ ಆಪ್ಷನ್ (ಪೆಟ್ರೋಲ್ ಮ್ಯಾನುವಲ್)- ರೂ.7,85,900
***
ಎಸ್ (ಪೆಟ್ರೋಲ್ ಆಟೋಮ್ಯಾಟಿಕ್)- ರೂ.7,05,800
ಎಸ್ಎಕ್ಸ್ (ಪೆಟ್ರೋಲ್ ಆಟೋಮ್ಯಾಟಿಕ್)- ರೂ. 8,04,800
ಎಸ್ (ಸಿಎನ್‌ಜಿ)- ರೂ. 7,28,900
***
ಎಸ್ (ಡೀಸೆಲ್ ಮ್ಯಾನುವಲ್)- ರೂ.7,73,800
ಎಸ್ (ಡೀಸೆಲ್ ಆಟೋಮ್ಯಾಟಿಕ್)- ರೂ.8,23,700
ಎಸ್ಎಕ್ಸ್ (ಡೀಸೆಲ್ ಆಟೋಮ್ಯಾಟಿಕ್)- ರೂ.9,22,700
ಎಸ್ಎಕ್ಸ್ ಆಪ್ಷನ್ (ಡೀಸೆಲ್ ಮ್ಯಾನುವಲ್)- ರೂ. 9,03,800
***
ಎಸ್ಎಕ್ಸ್ ಟರ್ಬೋ ಪೆಟ್ರೋಲ್- ರೂ. 8,54,900

ಎಂಜಿನ್ ಸಾಮರ್ಥ್ಯ
ಔರಾ ಕಾರು ಏಪ್ರಿಲ್ 1ರಿಂದ ಕಡ್ಡಾಯಗೊಳ್ಳಲಿರುವ ಬಿಎಸ್-6 ನಿಯಮದಂತೆ 1.2-ಲೀಟರ್ ಕಪ್ಪಾ ಪೆಟ್ರೋಲ್, 1.2-ಲೀಟರ್ ಇಕೋ ಟಾರ್ಕ್ ಡೀಸೆಲ್, ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು ಪೆಟ್ರೋಲ್ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ.

1.2-ಲೀಟರ್ ಪೆಟ್ರೋಲ್ ಕಾರು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83-ಬಿಎಚ್‌ಪಿ, 114-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, 1.2-ಲೀಟರ್ ಡೀಸೆಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 75-ಬಿಎಚ್‌ಪಿ, 190-ಟಾರ್ಕ್ ಉತ್ಪಾದನೆ ಮಾಡಲಿದೆ.

ಹಾಗೆಯೇ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದ್ದು, ತ್ರಿ ಸಿಲಿಂಡರ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಣೆಯೊಂದಿಗೆ 100-ಬಿಎಚ್‌ಪಿ ಮತ್ತು 172-ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

ಔರಾ ಕಾರಿನ ವೈಶಿಷ್ಟ್ಯತೆಗಳು
ಹ್ಯುಂಡೈ ಸಂಸ್ಥೆಯು ಹೊಸ ಔರಾ ಕಾರಿನಲ್ಲಿ ಹಲವು ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ನೀಡಿದ್ದು, ಆಕರ್ಷಕ ಹೊರ ಮತ್ತು ಒಳ ವಿನ್ಯಾಸನೊಂದಿಗೆ ಟ್ವಿನ್ ಬೂಮ್‌ಬರ್ಗ್ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ಸ್, 15-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲೈಟ್ಸ್, ಕೀ ಲೆಸ್ ಎಂಟ್ರಿ, 8-0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ವಾಯ್ಸ್ ರೆಕಗ್ನಿಷನ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್ ಸೌಲಭ್ಯ ಹೊಂದಿದೆ.

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್‌ನೊಂದಿಗೆ ಇಬಿಡಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯದೊಂದಿಗೆ 3 ವರ್ಷಗಳ ವಾರಂಟಿ ಪಡೆದುಕೊಂಡಿದೆ.

ಔರಾ ಮೈಲೇಜ್(ಎಆರ್‌ಎಐ ಪ್ರಮಾಣಿಕೃತ)
1.0-ಲೀಟರ್ ಟರ್ಬೋ ಪೆಟ್ರೋಲ್- ಪ್ರತಿ ಲೀಟರ್‌ಗೆ 20 ಕಿ.ಮೀ
1.2-ಲೀಟರ್ ಕಪ್ಪಾ ಪೆಟ್ರೋಲ್ - ಪ್ರತಿ ಲೀಟರ್‌ಗೆ 20 ಕಿ.ಮೀ
1.2-ಲೀಟರ್ ಇಕೋ ಟಾರ್ಕ್ ಡೀಸೆಲ್ - ಪ್ರತಿ ಲೀಟರ್‌ಗೆ 25 ಕಿ.ಮೀ

ಇನ್ನು ಹೊಸ ಕಾರು ಫೈರಲಿ ರೆಡ್, ಪೊಲಾರ್ ವೈಟ್, ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಅಲ್ಫಾ ಬ್ಲ್ಯೂ ಮತ್ತು ವಿಟೇಂಜ್ ಬ್ರೌನ್ ಬಣ್ಣಗಳ ಆಯ್ಕೆ ಹೊಂದಿದ್ದು, ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಮತ್ತು ಬಿಡುಗಡೆಗೆ ಸಜ್ಜಾಗಿರುವ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.


Click it and Unblock the Notifications