ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಹ್ಯುಂಡೈ ಇಂಡಿಯಾ ಕಂಪನಿಯು ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಜನಪ್ರಿಯ ಕಾರುಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಹುಂಡೈ ಕಂಪನಿ ಹಬ್ಬದ ಸೀಸನ್ ನಲ್ಲಿ ತನ್ನ ಕಾರುಗಳ ಮರಾಟವನ್ನು ಹೆಚ್ಚಿಸಲು ಈ ಭರ್ಜರಿ ರಿಯಾಯಿತಿಗಳನ್ನು ನೀಡಲಾಗಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಹ್ಯುಂಡೈನ ಮಾದರಿ ಮತ್ತು ರೂಪಾಂತರಗಳನ್ನು ಅವಲಂಬಿಸಿ ರೂ.1 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ನಗದು ರಿಯಾಯಿತಿಗಳು, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಹ್ಯುಂಡೈನ ಸ್ಯಾಂಟ್ರೋ, ಗ್ರ್ಯಾಂಡ್ 10, ಗ್ರ್ಯಾಂಡ್ ಐ10 ನಿಯೊಸ್, ಎಲೈಟ್ ಐ 20, ಒರಾ ಮತ್ತು ಎಲಾಂಟ್ರ ಕಾರುಗಳಿಗೆ ಈ ರಿಯಾಯಿತಿಗಳು ಲಭ್ಯವಿದೆ. ಖರೀದಿದಾರರು ದೇಶಾದ್ಯಂತ ತಮ್ಮ ಹತ್ತಿರದ ಅಧಿಕೃತ ಡೀಲರುಗಳ ಮೂಲಕ ಈ ರಿಯಾಯಿತಿಗಳನ್ನು ಪಡೆಯಬಹುದು.

ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಇದರೊಂದಿಗೆ ಬ್ರ್ಯಾಂಡ್‌ನ ಕ್ಲಿಕ್-ಟು-ಬೈ ಪ್ಲಾಟ್‌ಫಾರ್ಮ್ ಬಳಸಿ ಆನ್‌ಲೈನ್‌ನಲ್ಲಿ ತಮ್ಮ ನೆಚ್ಚಿನ ಮಾದರಿಯನ್ನು ಬುಕ್ ಮಾಡಬಹುದು ಮತ್ತು ಹಬ್ಬದ ಕೊಡುಗೆಗಳನ್ನು ಪಡೆಯಬಹುದು. ಈ ತಿಂಗಳ ಅಂತ್ಯದವರೆಗೂ ಈ ಆಫರ್ ಲಭ್ಯವಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಸ್ಯಾಂಟ್ರೊ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಹ್ಯುಂಡೈ ಸ್ಯಾಂಟ್ರೊ ಕಾರಿಗೆ ಒಟ್ಟು ರೂ.45,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ. ಇದರಲ್ಲಿ ರೂ.25 ಸಾವಿರ ಗಳವರೆಗೆ ನಗದು ರಿಯಾಯಿತಿ ಜೊತೆಗೆ ರೂ.15 ಸಾವಿರಗಳ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಲಾಗಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಹ್ಯುಂಡೈ ಗ್ರ್ಯಾಂಡ್ ಐ10

ದೀಪಾವಳಿ ಹಬ್ಬದ ಪ್ರಯುಕ್ತ ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಮೇಲೆ ಒಟ್ಟು ರೂ.60,000 ಗಳವರೆಗೆ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ರೂ.40,000 ಗಳವರೆಗೆ ನಗದು ರಿಯಾಯಿತಿ ಜೊತೆಗೆ ರೂ.15,000 ಸಾವಿರಗಳ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಗಳವರೆಗೆ ಸರ್ಕಾರಿ ನೌಕರರಿಗೆ ರಿಯಾಯಿತಿಯನ್ನು ನೀಡಲಾಗಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಹ್ಯುಂಡೈ ಗ್ರ್ಯಾಂಡ್ ಐ10 ನಿಯೊಸ್

ಪ್ರಸ್ತುತ ಮಾರಾಟವಾಗುತ್ತಿರುವ ಗ್ರ್ಯಾಂಡ್ ಐ10 ನಿಯೊಸ್ ಹ್ಯಾಚ್‌ಬ್ಯಾಕ್‌ನ ಮೂರನೇ ತಲೆಮಾರಿನ ಮಾದರಿಯಾಗಿದೆ ಗ್ರ್ಯಾಂಡ್ ಐ10 ನಿಯೊಸ್ ಒಟ್ಟು ರೂ.25 ಸಾವಿರಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ರೂ.10,000 ನಗದು ರಿಯಾಯಿತಿ ಮತ್ತು ರೂ.10,000 ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಹ್ಯುಂಡೈ ಎಲೈಟ್ ಐ20

ಹ್ಯುಂಡೈ ಕಂಪನಿಯು ಇತ್ತೀಚೆಗೆ ಬ್ರ್ಯಾಂಡ್‌ನ ಭಾರತೀಯ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಡೀಲರುಗಳ ಬಳಿ ಇರುವ ಹ್ಯುಂಡೈ ಎಲೈಟ್ ಐ20 ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ಹ್ಯುಂಡೈ ಎಲೈಟ್ ಐ20 ಕಾರಿನ ಮೇಲೆ ಒಟ್ಟು ರೂ. 50,000 ಗಳವರೆಗೆ ನಗದು ರಿಯಾಯಿತಿ ಜೊತೆಗೆ ರೂ.20,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಮತ್ತು ಸರ್ಕಾರಿ ನೌಕರರಿಗೆ ರೂ.5,000 ರಿಯಾಯಿತಿಯನ್ನು ಘೋಷಿಸಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಹ್ಯುಂಡೈ ಒರಾ

ಹ್ಯುಂಡೈ ಒರಾ ಬ್ರ್ಯಾಂಡ್‌ನ ಕಾಂಪ್ಯಾಕ್ಟ್-ಸೆಡಾನ್ ಆಗಿದೆ.ಹ್ಯುಂಡೈ ಕಂಪನಿಯು ಎಕ್ಸೆಟ್ ಸೆಡಾನ್ ಬದಲಾಯಿಸಿ ಒರಾ ಮಾದರಿಯನ್ನು ಬಿಡುಗಡೆಗೊಳಿಸಿತು. ಹ್ಯುಂಡೈ ಒರಾ ಕಾರಿನ ಮೇಲೆ ಒಟ್ಟು ರೂ.30,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ರೂಪಾಂತರವನ್ನು ಅವಲಂಬಿಸಿ ರೂ.10,000 ಗಳವರೆಗೆ ನಗದು ರಿಯಾಯಿತಿ ಮತ್ತು ರೂ.15,000 ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5,000 ಗಳ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಹ್ಯುಂಡೈ ಎಲಾಂಟ್ರ

ಹ್ಯುಂಡೈ ಎಲಾಂಟ್ರ ದೇಶದಲ್ಲಿ ಮಾರಾಟವಾಗುವ ಬ್ರ್ಯಾಂಡ್‌ನ ಪ್ರಮುಖ ಸೆಡಾನ್ ಮಾದರಿಯಾಗಿದೆ. ಹ್ಯುಂಡೈ ಎಲಾಂಟ್ರ ಕಾರಿನ ಮೇಲೆ ರೂ.1 ಲಕ್ಷ ಗಳವರೆಗೆ ಭರ್ಜರಿ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ರೂ.70,000 ಗಳವರೆಗೆ ನಗದು ರಿಯಾಯಿತಿ ಮತ್ತು ರೂ.30,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹ್ಯುಂಡೈ ಕಾರುಗಳ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ರಿಯಾಯಿತಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಜನಪ್ರಿಯ ಮಾದರಿಗಳಿಗೆ ಹ್ಯುಂಡೈ ರಿಯಾಯಿತಿಯನ್ನು ಘೋಷಿಸಲಾಗಿದೆ. ಹ್ಯುಂಡೈ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಹಬ್ಬದ ಸೀಸನ್ ನಲ್ಲಿ ರಿಯಾಯಿತಿಯನ್ನು ನೀಡಿರುವುದರಿಂದ ಹ್ಯುಂಡೈ ಕಾರುಗಳ ಮಾರಾಟಕ್ಕೆ ಸಹಕಾರಿಯಾಗಬಹುದು.

More from DriveSpark

Article Published On: Friday, November 6, 2020, 14:37 [IST]
English summary
Hyundai Car Discounts For November 2020. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+