ಹೊಸ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡ ಹ್ಯುಂಡೈ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಕಳೆದ ಜುಲೈ ತಿಂಗಳ ಕಾರುಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಹ್ಯುಂಡೈ ಕಂಪನಿಯು ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರ ಶೇ.28 ರಷ್ಟು ಕುಸಿತವನ್ನು ಕಂಡಿದೆ.

ಹ್ಯುಂಡೈ ಕಂಪನಿಯು ಈ ವರ್ಷದ ಜುಲೈ ತಿಂಗಳಲ್ಲಿ ಒಟ್ಟು 41,300 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು ಕಳೆದ ವರ್ಷದ ಜುಲೈ ತಿಂಗಳಲ್ಲಿ ಹ್ಯಂಡೈ ಕಂಪನಿಯು 57,310 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ಬಾರಿ ಶೇ.ಶೇ.28 ರಷ್ಟು ಕುಸಿತವನ್ನು ದಾಖಲಾಗಿದೆ. ಇನ್ನು ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಒಟ್ಟು 38,200 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಇದು ಕಳೆದ ವರ್ಷದ ಜುಲೈ ಅವಧಿಗೆ ಹೋಲಿಸಿದರೆ ಶೇ.2.07 ರಷ್ಟು ಕುಸಿತವಾಗಿದೆ. ಆದರೆ ಇದೇ ವರ್ಷದ ಜೂನ್ ತಿಂಗಳ ಮಾರಾಟಕ್ಕೆ ಹೊಲಿಸಿದರೆ ಶೇ.42 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಇಂತಹ ಸಂಕಷ್ಟದ ಸಮಯದಲ್ಲಿ ಹ್ಯುಂಡೈ ಕಂಪನಿಯ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ ಎಂದು ಹೇಳಬಹುದು. ಕಂಪನಿಯು ಈ ವರ್ಷದ ಜುಲೈ ತಿಂಗಳಲ್ಲಿ ಭಾರತದಿಂದ 3100 ಯುನಿಟ್‌ಗಳನ್ನು ರಫ್ತು ಮಾಡಿದೆ.

ಕಳೆದ ವರ್ಷದ ರಫ್ತಿಗೆ ಹೋಲಿಸಿದರೆ ಶೇ.98 ರಷ್ಟು ಹೆಚ್ಚಾಗಿದೆ. ಹ್ಯುಂಡೈ ಕಂಪನಿಯ ಕ್ರೆಟಾ, ವೆನ್ಯೂ ಮತ್ತು ಐ20 ಕಾರುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಗಳಿಸಿದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ 2020ರ ಹ್ಯುಂಡೈ ಕ್ರೆಟಾ ಎಸ್‍ಯುವಿಗಾಗಿ ಭರ್ಜರಿ ಬುಕ್ಕಿಂಗ್ ದಾಖಲಾಗಿದೆ. 2020ರ ಹ್ಯುಂಡೈ ಕ್ರೆಟಾ ಎಸ್‌ಯುವಿಗಾಗಿ 45,000ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆಯಲಾಗಿದೆ ಎಂದು ಹದಿನೈದು ದಿನಗಳ ಹಿಂದೆ ವರದಿ ಪ್ರಕಟವಾಗಿತ್ತು.

ಇದೀಗ ಹ್ಯುಂಡೈ ಕ್ರೆಟಾ ಬುಕ್ಕಿಂಗ್ ನಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. ಇಲ್ಲಿಯವರೆಗೆ 2020ರ ಹ್ಯುಂಡೈ ಕ್ರೆಟಾ ಎಸ್‌ಯುವಿಗಾಗಿ 55,000ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆಯಲಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಕರೋನಾ ವೈರಸ್ ಸಂಕಷ್ಟದ ಸಮಯದಲ್ಲೂ ಹ್ಯುಂಡೈ ಕ್ರೆಟಾದ 55,000ಕ್ಕೂ ಹೆಚ್ಚು ಯುನಿಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಈ ಮಿಡ್ ಎಸ್‍ಯುವಿಯು ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಹೊಸ ಮೈಲಿಗಲ್ಲು ಸಾಧಿಸುವಲ್ಲಿ ಯಶ್ವಸಿಯಾಗಿದೆ.

ಹೊಸ ಹ್ಯುಂಡೈ ಕಾರುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ಹೊಸ ಐ20 ಪ್ರೀಮಿಯಂ ಕಾರನ್ನು ಬಿಡುಗಡೆಗೊಳಿಸಲಿದೆ.


Click it and Unblock the Notifications