ಮೇ ತಿಂಗಳಿನಲ್ಲಿ ಮಾರಾಟವಾದ ಹ್ಯುಂಡೈ ಮಾದರಿಯ ಕಾರುಗಳಿವು
ಹ್ಯುಂಡೈ ಇಂಡಿಯಾ ಕಂಪನಿಯು ಇತ್ತೀಚೆಗೆ ಕಳೆದ ಮೇ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ಮೇ ತಿಂಗಳಲ್ಲಿ ಹ್ಯುಂಡೈ ಕಂಪನಿಯ ಒಟ್ಟು 12,583 ಕಾರುಗಳು ಮಾರಾಟವಾಗಿವೆ. ಇದರಲ್ಲಿ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟ ಮತ್ತು ರಫ್ತು ಮಾಡಿದ ಸಂಖ್ಯೆಯು ಒಳಗೊಂಡಿದೆ.

ಹ್ಯುಂಡೈ ಕಂಪನಿಯು ಒಟ್ಟು ಕಾರು ಮಾರಾಟದ ಸಂಖ್ಯೆಯಲ್ಲಿ 6,883 ಯುನಿಟ್‍ಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದರೆ, ಉಳಿದ 5,700 ಯುನಿಟ್‍ಗಳು ರಫ್ತು ಮಾಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಕ್ರೆಟಾ ಎಸ್‍ಯುವಿಯು ಹ್ಯುಂಡೈ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ಮೇ ತಿಂಗಳಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯ 3,212 ಯುನಿಟ್‌ಗಳು ಮಾರಾಟವಾಗಿವೆ. ಅಲ್ಲದೇ ಹ್ಯುಂಡೈ ಕ್ರೆಟಾ ಕಳೆದ ಮೇ ತಿಂಗಳಲ್ಲಿ ದೇಶದಲ್ಲೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನು ಹ್ಯುಂಡೈ ಕಾರುಗಳ ಮಾದರಿವಾರು ಮಾರಾಟದಲ್ಲಿ ಹ್ಯುಂಡೈ ವೆನ್ಯೂ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಮೇ ತಿಂಗಳಲ್ಲಿ ಹ್ಯುಂಡೈ ವೆನ್ಯೂ ಕಾರಿನ 1,242 ಯುನಿಟ್‌ಗಳು ಮಾರಾಟವಾಗಿವೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹ್ಯುಂಡೈ ಕಾರುಗಳ ಮಾದರಿವಾರು ಮಾರಾಟದಲ್ಲಿ ಎಲೈಟ್ ಐ20 ಕಾರು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಹ್ಯುಂಡೈ ಎಲೈಟ್ ಐ20 ಯಾವಾಗಲೂ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ಗೆ ಹೆಚ್ಚು ಮಾರಾಟವಾದ ಮಾದರಿಗಳಲ್ಲಿ ಒಂದಾಗಿದೆ. ಕಳೆದ ಮೇ ತಿಂಗಳಲ್ಲಿ ಹ್ಯುಂಡೈ ಎಲೈಟ್ ಐ20 ಕಾರಿನ 878 ಯುನಿಟ್ ಗಳು ಮಾರಾಟವಾಗಿವೆ.

ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಕಾಂಪ್ಯಾಕ್ಟ್-ಸೆಡಾನ್ ಒರಾ ನಾಲ್ಕನೇ ಮತ್ತು ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಮೇ ತಿಂಗಳಲ್ಲಿ ಹ್ಯುಂಡೈ ನಿಯೋಸ್ ಕಾರಿನ 706 ಯುನಿಟ್‌ಗಳು ಮಾರಾಟವಾಗಿದ್ದರೆ, ಒರಾ ಕಾರಿನ 349 ಯುನಿಟ್‌ಗಳು ಮಾರಾಟವಾಗಿವೆ.
MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಇನ್ನು ನಂತರದ ಸ್ಥಾನವನ್ನು ಹ್ಯುಂಡೈ ವೆರ್ನಾ ಮತ್ತು ಸ್ಯಾಂಟ್ರೊ ಕಾರುಗಳು ಈ ಪಟ್ಟಿಯಲ್ಲಿ ನಂತರದ ಸ್ಥಾನವನ್ನು ಗಳಿಸಿದೆ. ಕಳೆದ ಮೇ ತಿಂಗಳಲ್ಲಿ ಹ್ಯುಂಡೈ ವೆರ್ನಾ ಕಾರಿನ 317 ಯುನಿಟ್‌ಗಳು ಮಾರಾಟವಾಗಿದ್ದರೆ, ಸ್ಯಾಂಟ್ರೊ ಕಾರಿನ 157 ಯುನಿಟ್‌ಗಳು ಮಾರಾಟವಾಗಿವೆ.

ಇತರ ಜನಪ್ರಿಯ ಮಾದರಿಗಳಾದ ಹ್ಯುಂಡೈ ಎಲಾಂಟ್ರ ಮತ್ತು ಕೋನಾ ಎಲೆಕ್ಟ್ರಿಕ್ ಕ್ರಮವಾಗಿ 6 ಮತ್ತು 4 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಕಳೆದ ವರ್ಷದ ಮೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ದೊಡ್ಡ ಕುಸಿತ ಕಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಟಕ್ಸನ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಈ ಹ್ಯಂಡೈ ಟಕ್ಸನ್ ಫೇಸ್‌ಲಿಫ್ಟ್ ಅನ್ನು ಪ್ರದರ್ಶಿಸಲಾಗಿತ್ತು.

ಹ್ಯುಂಡೈ ಕಂಪನಿಯು ಇತರ ಕಾರು ತಯಾರಕ ಕಂಪನಿಗಳಂತೆ ಕಳೆದ ಎರಡು ತಿಂಗಳುಗಳಲ್ಲಿ ಭಾರಿ ನಷ್ಟ ಅನುಭವಿಸಿದೆ. ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯಾದ ಹ್ಯುಂಡೈನ ಕಾರುಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದೆ.


Click it and Unblock the Notifications