ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಹೆಚ್‌ಎಂಐಎಲ್) ಕಂಪನಿಯು ತನ್ನ ಬಿಎಸ್-4 ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹ್ಯುಂಡೈ ಕಂಪನಿಯು ಬಿಎಸ್-4 ಕ್ರೆಟಾ ಮಾದರಿಗೆ ಬರೊಬ್ಬರಿ ರೂ.1.15 ಲಕ್ಷಗಳವರೆಗೆ ನಗದು ರಿಯಾಯಿತಿಯನ್ನು ಘೋಷಿಸಿದೆ.

ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಕ್ರೆಟಾ, ಎಸ್‍‍ಯುವಿ ಸೆಗ್‍‍ಮೆಂಟ್‍ನಲ್ಲಿ ಹೆಚ್ಚು ಮಾರಾಟವಾಗುವ ಎಸ್‍‍ಯು‍ವಿಗಳಲ್ಲಿ ಒಂದಾಗಿದೆ. ಕ್ರೆಟಾ ಎಸ್‍‍ಯುವಿ ಭಾರತದಲ್ಲಿ ಒಂದೆರಡು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಅಂದಿನಿಂದಲೇ ತನ್ನ ಸೆಗ್‍‍ಮೆಂಟಿನಲ್ಲಿ ಪಾರುಪತ್ಯ ಸಾಧಿಸುತ್ತಿದೆ. ಇತ್ತೀಚೆಗೆ ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಕಿಯಾ ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್‍ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಉಂಟಾದ ಪೈಪೋಟಿಯಿಂದ ಕ್ರೆಟಾ ಕಾರಿನ ಮಾರಾಟವು ಕಡಿಮೆಯಾಗಿದೆ.

ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಇದರಿಂದ ಮಾರಾಟವನ್ನು ಹೆಚ್ಚಿಸಲು ಮತ್ತು ಬಿ‍ಎಸ್-4 ಎಂಜಿನ್ ಸ್ಟಾಕ್‍‍ಗಳನ್ನು ಮಾರಾಟ ಮಾಡಲು ಭರ್ಜರಿ ಆಫರ್ ಅನ್ನು ಘೋಷಿಸಲಾಗಿದೆ.

ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಕ್ರೆಟಾ ಕಾರಿನಲ್ಲಿ ಬಿಎಸ್-4, 1.6 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯು 4000 ಆರ್‍‍ಪಿಎಂನಲ್ಲಿ 126 ಬಿಹೆಚ್‍‍ಪಿ ಪವರ್ ಮತ್ತು 1500-3000 ಆರ್‍‍ಪಿಎಂ ನಡುವೆ 240 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-4 ಹ್ಯುಂಡೈ ಕ್ರೆಟಾ ಕಾರಿನಲ್ಲಿ ಒಆರ್‍‍ವಿಎಂಗಳು, ಸ್ಟೀಲ್ ವ್ಹೀಲ್‍, ಸಿಲ್ವರ್ ಸ್ಕಿಡ್ ಪ್ಲೇಟ್‍‍ಗಳ ಜೊತೆಯಲ್ಲಿ ಡ್ಯುಯಲ್ ಟೋನ್ ಬಂಪರ್‍‍ಗಳು ಮತ್ತು ಬ್ಲ್ಯಾಕ್/ಸಿಲ್ವರ್ ಗ್ರಿಲ್‍‍ಗಳಿವೆ.

ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಕ್ರೆಟಾ ಕಾರಿನಲ್ಲಿ ಫಾಲೋ-ಮಿ-ಹೋಮ್ ಹೆಡ್‍‍ಲ್ಯಾಂ‍‍ಪ್‍‍ಗಳು, ಇಂಟಿಗ್ರೇ‍‍ಟೆ‍ಡ್ ಎಲ್‍ಇ‍ಡಿ ಟರ್ನ್ ಸಿಗ್ನಲ್‍‍ಗಳೊಂದಿಗೆ ಎಲೆಕ್ಟ್ರಿಕ್ ಒರ್‍‍ವಿಎಂಗಳನ್ನು ಹೊಂದಿವೆ.

ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಕ್ರೆಟಾ ರೂಪಾಂತಗಳ ಕಾರಿನ ಇಂಟಿರಿಯರ್‍‍ನಲ್ಲಿ ಎಸಿ, ಹೊಂದಾಣಿಕ ಮಾಡಬಹುದಾದ ಚಾಲಕನ ಸೀಟ್, ಹಿಂಭಾಗದ ಎಸಿ ವೆಂಟ್ಸ್, ಸ್ಟೀರಿಂಗ್ ವ್ಹೀಲ್‍‍ಗಾಗಿ ಟಿಲ್ಟ್ ಪಂಕ್ಷನ್ ಮತ್ತು ಎಲೆಕ್ಟ್ರಿಕ್ ಟೈಲ್‍‍ಗೇಟ್ ಅನ್ನು ಹೊಂದಿದೆ.

ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಇಎಕ್ಸ್ ಟ್ರಿಮ್ ಹೆಚ್ಚುವರಿಯಾಗಿ ರೇರ್ ಸೆಂಟ್ರಲ್ ಆರ್ಮ್ಮಸ್ಟ್ರೆಸ್ಟ್, ಎಲ್ಇಡಿ ಡಿಆರ್‍ಎಲ್, ಫ್ರಂಟ್ ಯುಎಸ್‍ಬಿ ಚಾರ್ಜರ್, ಸನ್‍‍ಗ್ಲಾಸ್ ಹೋಲ್ಡರ್‍‍ಗಳು, ಹೊಂದಾಣಿಕ ಮಾಡಬಹುದಾದ ಫ್ರಂಟ್ ಮತ್ತು ರೇರ್ ಹೆಡ್‍‍ರೆಸ್ಟ್, 5.0 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಸಿಸ್ಟಂ ಹ್ಯುಂಡೈನ ಐ-ಬ್ಲೂ ರಿಮೋಟ್ ಅಪ್ಲಿಕೇಶನ್ ಮತ್ತು ಮಲ್ಟಿ ಫಂಕ್ಷನ್ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ.

ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಕ್ರೆಟಾ ಇ ಪ್ಲಸ್ ಮತ್ತು ಇಎಕ್ಸ್ ರೂಪಾಂತರಗಳಲ್ಲಿ ಹೆಚ್ಚಿನ ಸುರಕ್ಷಾ ವೈಶಿಷ್ಟ್ಯಗಳನ್ನು ಅಳವಡಿಸಿದ್ದಾರೆ. ಸುರಕ್ಷತೆಗಾಗಿ ಫ್ರಂಟ್ ಏರ್‍‍ಬ್ಯಾಗ್, ಎಬಿಎಸ್ ಜೊತೆ ಇ‍ಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್‍, ಡೇ/ನೈಟ್ ಐಆರ್‍‍ವಿಎಂ, ಫ್ರಂಟ್ ಸೀಟ್‍ಬೆಲ್ಟ್ ಪ್ರಿಟೆನ್ಷನರ್, ಹೈಸ್ಪೀಡ್ ವಾರ್ನಿಂಗ್ ಮತ್ತು ಸೀಟ್ ಬೆಲ್ಟೆ ರಿಮೈಂಡರ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಕ್ರೆಟಾ ಕಾರಿನ ಮೇಲೆ ಭರ್ಜರಿ ರಿಯಾಯಿತಿ

ಇದೇ ತಿಂಗಳು 17ರಂದು ಬಿಎಸ್-6 ಹ್ಯುಂಡೈ ಕ್ರೆಟಾ ಭಾರತದಲ್ಲಿ ಬಿಡುಗಡೆಯಾಗಲಿದೆ. ಬಿಎಸ್-6 ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೆಲ್ಟೋಸ್‍‍ಗೆ ನೇರವಾಗಿ ಪೈಪೋಟಿ ನೀಡುತ್ತದೆ.

Most Read Articles

Kannada
English summary
Big Discounts On Remaining Units Of Current-Gen BS4 Hyundai Creta. Read in Kannada.
Story first published: Wednesday, March 11, 2020, 11:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X