ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಬಿಎಸ್-6 ಹ್ಯುಂಡೈ ಕ್ರೆಟಾ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಬಿಎಸ್-6 ಕ್ರೆಟಾ ಎಸ್‍ಯುವಿಯನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಹ್ಯುಂಡೈ ಇಂಡಿಯಾ ಕಂಪನಿಯು ಈ ಹೊಸ ಕ್ರೆಟಾ ಎಸ್‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಬಿಎಸ್-6 ಹ್ಯುಂಡೈ ಕ್ರೆಟಾ

ಭಾರತೀಯ ಮಾರುಕಟ್ಟೆಯಲ್ಲಿ 2020ರ ಹ್ಯುಂಡೈ ಕ್ರೆಟಾ ಎಸ್‍ಯುವಿಗಾಗಿ ಭರ್ಜರಿ ಬುಕ್ಕಿಂಗ್ ದಾಖಲಾಗಿದೆ. 2020ರ ಹ್ಯುಂಡೈ ಕ್ರೆಟಾ ಎಸ್‌ಯುವಿಗಾಗಿ 1.15 ಲಕ್ಷ ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆಯಲಾಗಿದೆ. ಇದೀಗ ಹ್ಯುಂಡೈ ಕ್ರೆಟಾ ಬುಕ್ಕಿಂಗ್ ನಲ್ಲಿ ದಾಖಲೆಯನ್ನು ನಿರ್ಮಿಸಿದೆ. 2020ರ ಹ್ಯುಂಡೈ ಕ್ರೆಟಾ ಎಸ್‌ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಬಿಎಸ್-6 ಹ್ಯುಂಡೈ ಕ್ರೆಟಾ

ಕರೋನಾ ವೈರಸ್ ಸಂಕಷ್ಟದ ಸಮಯದಲ್ಲೂ ಹ್ಯುಂಡೈ ಕ್ರೆಟಾದ 1.15 ಲಕ್ಷ ಕ್ಕೂ ಹೆಚ್ಚು ಯುನಿಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಈ ಮಿಡ್ ಎಸ್‍ಯುವಿಯು ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಹೊಸ ಮೈಲಿಗಲ್ಲು ಸಾಧಿಸುವಲ್ಲಿ ಯಶ್ವಸಿಯಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಬಿಎಸ್-6 ಹ್ಯುಂಡೈ ಕ್ರೆಟಾ

2020ರ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಮುಂಭಾಗದಲ್ಲಿರುವ ಹ್ಯುಂಡೈನ ಕ್ಯಾಸ್ಕೇಡಿಂಗ್ ಗ್ರಿಲ್ ಹೆಚ್ಚು ಗಮನ ಸೆಳೆದರೂ, ಹೆಡ್‍‍ಲೈಟ್ ಮತ್ತಷ್ಟು ಗಮನ ಸೆಳೆಯುತ್ತದೆ. ಸ್ಪ್ಲಿಟ್ ಹೆಡ್‍‍‍ಲೈಟ್ ಸ್ಲಿಟ್ ರೀತಿಯ ಎಲ್ಇಡಿ ಡಿಆರ್‍ಎಲ್ ಅನ್ನು ಹೊಂದಿದೆ.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಬಿಎಸ್-6 ಹ್ಯುಂಡೈ ಕ್ರೆಟಾ

ಈ ಎಸ್‍ಯುವಿಯ ಹೆಡ್‌ಲೈಟ್ ಕ್ಲಸ್ಟರ್ ಕೆಳಗೆ ಹೊಸ ಲುಕ್‍‍ನ ಫಾಗ್ ಲ್ಯಾಂಪ್‍‍ಗಳಿವೆ. ಇನ್ನು ಬಂಪರ್‍‍ನ ಕೆಳಗೆ ಸ್ಕಫ್ ಪ್ಲೇಟ್‍‍ಗಳಿವೆ. ಸ್ಕ್ವೇರ್ ಶೇಪಿನ ವ್ಹೀಲ್ ಆರ್ಕ್‍‍ಗಳು ಕ್ರೆಟಾಗೆ ಹೆಚ್ಚಿನ ಲುಕ್ ನೀಡುತ್ತವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಬಿಎಸ್-6 ಹ್ಯುಂಡೈ ಕ್ರೆಟಾ

ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍‍ಯುವಿಯಲ್ಲಿ ಹೊಸ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂನಲ್ಲಿ ವಾಯ್ಸ್ ಕಮಾಂಡ್ ಹಾಗೂ ಬ್ಲೂಲಿಂಕ್ ಕನೆಕ್ಟಿವಿಟಿ ಫೀಚರ್‍‍ಗಳಿರಲಿವೆ.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಬಿಎಸ್-6 ಹ್ಯುಂಡೈ ಕ್ರೆಟಾ

ಈ ಎಸ್‍‍ಯುವಿಯಲ್ಲಿರುವ ಸನ್‍‍ರೂಫ್ ವಾಯ್ಸ್ ಕಮಾಂಡ್‍‍ನಿಂದ ಚಲಿಸಲಿದೆ. ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟ್, ಡ್ಯುಯಲ್ ಹೋಸ್ ಚಿಮ್ನಿ, ರಿಮೋಟ್ ಎಂಜಿನ್ ಸ್ಟಾರ್ಟ್ ಅಪ್, ಕ್ರೂಸ್ ಕಂಟ್ರೋಲ್, ಏರ್ ಪ್ಯೂರಿಫೈಯರ್ ಹಾಗೂ ವೈರ್‍‍ಲೆಸ್ ಚಾರ್ಜರ್‍‍ಗಳಿರಲಿವೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಬಿಎಸ್-6 ಹ್ಯುಂಡೈ ಕ್ರೆಟಾ

ಇದರೊಂದಿಗೆ ಹೊಸ ಕ್ರೆಟಾ ಎಸ್‍ಯುವಿಯು ಮೂರು ವಿಭಿನ್ನ ಟ್ರಾಕ್ಷನ್ ಕಂಟ್ರೋಲ್ ಮತ್ತು ಟಿಯರಿಯನ್ ಮೋಡ್‌ಗಳನ್ನು ಹೊಂದಲಿದೆ. ಈ ಹೊಸ ತಾಂತ್ರಕ ಸೌಲಭ್ಯದಿಂದಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ.

ದಾಖಲೆ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡ ಬಿಎಸ್-6 ಹ್ಯುಂಡೈ ಕ್ರೆಟಾ

ಜನಪ್ರಿಯ ಬಿ‍ಎಸ್-6 ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
2020 Hyundai Creta Bookings Cross The 1.15 Lakh Mark. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X