ಬಹಿರಂಗವಾಯ್ತು 2020ರ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿ

ಹ್ಯುಂಡೈ ಇಂಡಿಯಾ ಕಂಪನಿಯು 2020ರ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿಯು ಬಹಿರಂಗವಾಗಿದೆ. ಹ್ಯುಂಡೈ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ 2020ರ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿಯನ್ನು ಪ್ರಕಟಿಸಿದೆ.

ಬಹಿರಂಗವಾಯ್ತು 2020ರ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿ

ಬಹಿರಂಗವಾದ ಮಾಹಿತಿಯ ಪ್ರಕಾರ ಬಿಎಸ್-6 ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯು ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಕಾರಿನಲಿ 1.5-ಲೀಟರ್ ಯು2 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 112 ಬಿಹೆಚ್‌ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಾಗಿದೆ ನೀಡಲಾಗಿದೆ.

ಬಹಿರಂಗವಾಯ್ತು 2020ರ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿ

ಹೊಸ ತಲೆಮಾರಿನ ಹೊಸ ಹ್ಯುಂಡೈ ಎಲಾಂಟ್ರಾ ಕಾರನ್ನು ಹೊಸ ಕೆ 3 ಪ್ಲಾಟ್‌ಫಾರಂನಲ್ಲಿ ತಯಾರಿಸಲಾಗುತ್ತದೆ. ಈ ಹೊಸ ಕಾರು ಹಳೆಯ ಕಾರಿಗಿಂತ 56 ಎಂಎಂ ಹೆಚ್ಚು ಅಗಲ ಹಾಗೂ 26 ಎಂಎಂ ಹೆಚ್ಚು ಎತ್ತರವನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಹಿರಂಗವಾಯ್ತು 2020ರ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿ

ಕಡಿಮೆ ತೂಕದ ಬಿಡಿ ಭಾಗಗಳನ್ನು ಅಳವಡಿಸಿರುವುದರಿಂದ ತೂಕವೂ ಸಹ ಕಡಿಮೆಯಾಗಿದೆ. ಎಕ್ಸಿಕ್ಯೂಟಿವ್ ಸೆಡಾನ್ ಕಾರು ಸೆಗ್ ಮೆಂಟಿನಲ್ಲಿ ಹ್ಯುಂಡೈ ಕಂಪನಿಯ ಎಲಾಂಟ್ರಾ ಕಾರು ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ.

ಬಹಿರಂಗವಾಯ್ತು 2020ರ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿ

ಬಾನೆಟ್, ಗ್ರಿಲ್ ಸಿಸ್ಟಂ, ಬಂಪರ್ ಸಿಸ್ಟಂ, ಹಿಂಭಾಗದ ವಿನ್ಯಾಸಗಳಿಂದ ಈ ಕಾರು ಸಂಪೂರ್ಣವಾಗಿ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ. ಈ ಕಾರಿನಲ್ಲಿ ಎಲ್‌ಇಡಿ ಹೆಡ್‌ಲೈಟ್‌, ದೊಡ್ಡ ಗಾತ್ರದ ಗ್ರಿಲ್ ಸಿಸ್ಟಂ, 17 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಹಾಗೂ ಎಲ್‌ಇಡಿ ಲೈಟ್ ಬಾರ್ ಗಳನ್ನು ಅಳವಡಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಹಿರಂಗವಾಯ್ತು 2020ರ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿ

ಹೊಸ ಹ್ಯುಂಡೈ ಎಲಾಂಟ್ರಾ ಕಾರಿನ ಇಂಟಿರಿಯರ್ ಅನ್ನು ಹೆಚ್ಚಿಸಲಾಗಿದೆ. ಈ ಕಾರು ಡ್ಯಾಶ್‌ಬೋರ್ಡ್‌ನಲ್ಲಿ ಎರಡು 10.25 ಇಂಚಿನ ಸ್ಕ್ರೀನ್ ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಟಚ್-ಸ್ಕ್ರೀನ್ ಇನ್ಫೋಟೈನ್ಮೆಂಟ್, ಆದರೆ ಮತ್ತೊಂದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿದೆ.

ಬಹಿರಂಗವಾಯ್ತು 2020ರ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿ

ಈ ಕಾರಿನ ಪ್ರಮುಖವಾದ ಫೀಚರ್ ಗಳೆಂದರೆ 4-ಸ್ಪೋಕ್ ಸ್ಟೀಯರಿಂಗ್ ವ್ಹೀಲ್, ನಾಲ್ಕು ಎಸಿ ವೆಂಟ್ಸ್, ಡ್ರೈವರ್ ಸೀಟ್ ಹಾಗೂ ಫ್ರಂಟ್ ಸೀಟ್ ಪ್ಯಾಸೆಂಜರ್. ಈ ಕಾರಿನಲ್ಲಿ ಅಳವಡಿಸಿರುವ ಬಿಡಿಭಾಗಗಳು ಅತ್ಯುತ್ತಮ ಗುಣಮಟ್ಟವನ್ನು ಹೊಂದಿವೆ. ಹೊಸ ಹ್ಯುಂಡೈ ಕಾರಿನಲ್ಲಿ ಹಲವಾರು ಫೀಚರ್ ಗಳಿದ್ದು, ಇವುಗಳನ್ನು ಬ್ಲೂಲಿಂಕ್ ಪ್ರೊಸೆಸರ್ ಮೂಲಕ ಆಕ್ಸೆಸ್ ಮಾಡಬಹುದು.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಬಹಿರಂಗವಾಯ್ತು 2020ರ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿ

ಈ ಸಿಸ್ಟಂ, ವಾಯ್ಸ್ ಕಮಾಂಡ್ ಫೀಚರ್ ಅನ್ನು ಹೊಂದಿದೆ. ಇದರಲ್ಲಿರುವ ಇನ್ಫೋಟೇನ್ ಮೆಂಟ್ ಸಿಸ್ಟಂ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳನ್ನು ಬೆಂಬಲಿಸುತ್ತದೆ. ಹೊಸ ಕಾರಿನಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್, ಆಂಬಿಯೆಂಟ್ ಲೈಟ್ ಸಿಸ್ಟಂ, ಡಿಜಿಟಲ್ ಕೀ ಸ್ಮಾರ್ಟ್‌ಫೋನ್ ಪ್ರೊಸೆಸರ್, 8 ಸ್ಪೀಕರ್‌ಗಳ ಸೌಂಡ್ ಸಿಸ್ಟಂ, ಎಲೆಕ್ಟ್ರಿಕ್ ಸನ್‌ರೂಫ್ ಗಳಿವೆ.

ಬಹಿರಂಗವಾಯ್ತು 2020ರ ಹ್ಯುಂಡೈ ಎಲಾಂಟ್ರಾ ಡೀಸೆಲ್ ಆವೃತ್ತಿಯ ಮಾಹಿತಿ

2020ರ ಎಲಾಂಟ್ರಾ ಡೀಸೆಲ್ ಆವೃತ್ತಿಯ ಬೆಲೆಯು ಇನ್ನು ಬಹಿರಂಗವಾಗಿಲ್ಲ. ಹೊಸ ಹ್ಯುಂಡೈ ಎಲಾಂಟ್ರಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಯಾದ ಬಳಿಕ ಹೊಂಡಾ ಸಿವಿಕ್, ಟೊಯೊಟಾ ಕೊರೊಲಾ ಹಾಗೂ ಅಟ್ಲೆಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Monday, April 13, 2020, 19:52 [IST]
English summary
Hyundai Elantra Diesel BS6 Specifications & Updates Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+