ಸ್ಥಗಿತವಾಯ್ತು ಹ್ಯುಂಡೈ ಎಲೈಟ್ ಐ20 ಡೀಸೆಲ್ ಆವೃತ್ತಿ

ಮುಂದಿನ ಏಪ್ರಿಲ್ ತಿಂಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ಹಿನ್ನಲೆಯಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಕಂಪನಿಯು ತನ್ನ ಜನಪ್ರಿಯ ಎಲೈಟ್ ಐ೨೦ ಕಾರಿನ ಡೀಸೆಲ್ ಆವೃತ್ತಿಯನ್ನು ಸ್ಥಗಿತಗೊಳಿಸಲಾಗಿದೆ. ಹ್ಯುಂಡೈ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಎಲೈಟ್ ಐ20 ಡೀಸೆಲ್ ಆವೃತ್ತಿಯ ಹೆಸರನ್ನು ಕೈಬಿಡಲಾಗಿದೆ.

ಸ್ಥಗಿತವಾಯ್ತು ಹ್ಯುಂಡೈ ಎಲೈಟ್ ಐ20 ಡೀಸೆಲ್ ಆವೃತ್ತಿ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ 2020ರ ಐ20 ಕಾರ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಹೊಸ ಹ್ಯುಂಡೈ ಐ20 ಕಾರನ್ನು ಬಿಡುಗಡೆಗೊಳಿಸಲಾಗುತ್ತದೆ. ಇತ್ತೀಚೆಗೆ ಹ್ಯುಂಡೈ ಕಂಪನಿಯು ಐ20ಯ ಏಳು ಪೆಟ್ರೋಲ್ ರೂಪಾಂತರಗಳಲ್ಲಿ ಎಂಟ್ರಿ ಲೆವೆಲ್ ಇಆರ್‍ಎ ಮ್ಯಾನುವಲ್, ಮಿಡ್ ಲೆವೆಲ್ ಸ್ಪೋರ್ಟ್ಸ್ ಪ್ಲಸ್ ಸಿವಿಟಿ, ಆಸ್ಟ(ಒ) ಸಿವಿಟಿ ಸ್ಥಗಿತಗೊಳಿಸಿತ್ತು. ಇದೀಗ ಹ್ಯುಂಡೈ ಎಲೈಟ್ ಐ೨೦ ಮಾದರಿಯ ಎಲ್ಲಾ ಡೀಸೆಲ್ ಆವೃತ್ತಿಗಳನ್ನು ಸ್ಥಗಿತಗೊಳಿಸಲಾಗಿದೆ.

ಸ್ಥಗಿತವಾಯ್ತು ಹ್ಯುಂಡೈ ಎಲೈಟ್ ಐ20 ಡೀಸೆಲ್ ಆವೃತ್ತಿ

ಒಟ್ಟಾರೆಯಾಗಿ 12 ರೂಪಾಂತರಗಳಲ್ಲಿರುವ ಹ್ಯುಂಡೈ ಐ20 ಆವೃತ್ತಿಗಳಲ್ಲಿ 4 ಆವೃತ್ತಿಗಳನ್ನು ಮಾತ್ರ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಉಳಿದ ರೂಪಾಂತರಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಸ್ಥಗಿತವಾಯ್ತು ಹ್ಯುಂಡೈ ಎಲೈಟ್ ಐ20 ಡೀಸೆಲ್ ಆವೃತ್ತಿ

ಬಿಡುಗಡೆಯಾಗಲಿರುವ ಹೊಸ ತಲೆಮಾರಿನ ಐ20 ಕಾರಿನಲ್ಲಿ ಸನ್‍ರೂಫ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಇದರಲ್ಲಿ ಹೊಸ ಐ20 ಕಾರು ಹೊಸದಾಗಿ ಫ್ರಂಟ್ ಬಂಪರ್, ಮೆಶ್ ಗ್ರಿಲ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌, ಹೆಡ್‌ಲ್ಯಾಂಪ್ ಕ್ಲಸ್ಟರ್, ಅಲಾಯ್ ವ್ಹೀಲ್‌, ವೈಡರ್ ಒಆರ್‍‍ವಿಎಂ ಮತ್ತು ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ.

ಸ್ಥಗಿತವಾಯ್ತು ಹ್ಯುಂಡೈ ಎಲೈಟ್ ಐ20 ಡೀಸೆಲ್ ಆವೃತ್ತಿ

ಹೊಸ ಐ20 ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರಲೆಸ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಮತ್ತು ಹ್ಯುಂಡೈನ ಬ್ಲೂಲಿಂಕ್ ಕನಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿರಲಿದೆ.

ಸ್ಥಗಿತವಾಯ್ತು ಹ್ಯುಂಡೈ ಎಲೈಟ್ ಐ20 ಡೀಸೆಲ್ ಆವೃತ್ತಿ

ಹೊಸ ಹ್ಯುಂಡೈ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಪ್ರಸ್ತುತ ಕಾರಿನಲ್ಲಿರುವ 1.4 ಲೀಟರ್ ಡೀಸೆಲ್ ಯು‍‍ನಿ‍ಟ್ ಎಂಜಿನ್ ಅನ್ನು ಬದಲಾಯಿಸಲಾಗುತ್ತದೆ. ಹೊಸ ಡೀಸೆಲ್ ಎಂಜಿನ್ ಕಿಯಾ ಸೆಲ್ಟೋಸ್‍ನ ಎಂಜಿನ್ ಮಾದರಿಯಲ್ಲಿರಲಿದೆ. ಸೆಲ್ಟೋಸ್ ಕಾರಿನ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಥಗಿತವಾಯ್ತು ಹ್ಯುಂಡೈ ಎಲೈಟ್ ಐ20 ಡೀಸೆಲ್ ಆವೃತ್ತಿ

ಪ್ರಸ್ತುತ ತಲೆಮಾರಿನ ಐ20 ಮೂರು ಪೆಟ್ರೋಲ್ ಮಾದರಿ ಮತ್ತು ಒಂದು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಗಳು 1.2 ಲೀಟರ್ ಎಂಜಿನ್ ಅನ್ನು ಹೊಂದಿದೆ ಮತ್ತು ಡೀಸೆಲ್ ಮಾದರಿಯು 1.4 ಲೀಟರ್ ಎಂಜಿನ್ ಅನ್ನು ಹೊಂದಿದೆ. ಪ್ರಸ್ತುತ ಹ್ಯುಂಡೈ ಐ20 ಕಾರು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.7.74 ಲಕ್ಷದಿಂದ 9.93 ಲಕ್ಷ ಬೆಲೆಯನ್ನು ಹೊಂದಿದೆ.

ಸ್ಥಗಿತವಾಯ್ತು ಹ್ಯುಂಡೈ ಎಲೈಟ್ ಐ20 ಡೀಸೆಲ್ ಆವೃತ್ತಿ

ಹ್ಯುಂಡೈ ಐ20 ಕಾರ್ ಅನ್ನು ಮೊದಲ ಬಾರಿಗೆ ಪ್ಯಾರಿಸ್ ಮೋಟಾರ್ ಶೋದಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಜಾಗತಿಕವಾಗಿ ಮೂರು ಮತ್ತು ಐದು ಡೋರ್ ಆವೃತ್ತಿಗಳಲ್ಲಿ ಲಭ್ಯವಿದೆ. ಎರಡನೇ ತಲೆಮಾರಿನ ಐ20 ಕಾರನ್ನು 2014ರಲ್ಲ ಬಿಡುಗಡೆಗೊಳಿಸಲಾಗಿತ್ತು ಮತ್ತು 2015ರಲ್ಲಿ ಇಂಡಿಯಾ ಕಾರ್ ಆಫ್ ದಿ ಇಯರ್ ಅನ್ನು ಗೆದ್ದುಕೊಂಡಿತ್ತು.

ಸ್ಥಗಿತವಾಯ್ತು ಹ್ಯುಂಡೈ ಎಲೈಟ್ ಐ20 ಡೀಸೆಲ್ ಆವೃತ್ತಿ

ಎರಡನೇ ತಲೆಮಾರಿನ ಐ20 ಮಾದರಿಗಳು ಹ್ಯುಂಡೈನ 'ಫ್ಲೂಯಿಡಿಕ್ ಸ್ಕಲ್ಪ್ಚರ್ 2.0' ವಿನ್ಯಾಸವನ್ನು ಹೊಂದಿದೆ. ಹೊಸ ಐ20 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಬಲೆನೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Thursday, March 19, 2020, 12:29 [IST]
English summary
Hyundai Elite i20 Diesel Discontinued In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+