ಬಿಎಸ್-6 ಎಂಜಿನ್ ಪ್ರೇರಿತ ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಡಿಸೇಲ್ ವರ್ಷನ್ ಬಿಡುಗಡೆ
ಗ್ರಾಂಡ್ ಐ10 ನಿಯೊಸ್ ಆವೃತ್ತಿಯನ್ನು ಈ ಹಿಂದೆ ಬಿಎಸ್-6 ಪೆಟ್ರೋಲ್ ಎಂಜಿನ್‌ನೊಂದಿಗೆ ಪರಿಚಯಸಿದ್ದ ಹ್ಯುಂಡೈ ಸಂಸ್ಥೆಯು ಇದೀಗ ಡೀಸೆಲ್ ಮಾದರಿಯನ್ನು ಸಹ ಹೊಸ ಎಮಿಷನ್ ನಿಯಮ ಅನುಗುಣವಾಗಿ ಬಿಡುಗಡೆಗೊಳಿಸಿದೆ.

ಗ್ರಾಂಡ್ ಐ10 ನಿಯೊಸ್ ಡಿಸೇಲ್ ಆವೃತ್ತಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಈ ಹಿಂದಿನ 1.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನೇ ಹೊಸ ಎಮಿಷನ್ ನಿಯಮದಂತೆ ಉನ್ನತೀಕರಿಸಿದೆ. ಜೊತೆಗೆ ಹೊಸ ಎಂಜಿನ್ ಬೆಲೆಯಲ್ಲಿ ಈ ಹಿಂದಿನ ಬೆಲೆಗಳನ್ನೇ ಮುಂದುವರಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.75 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 8.04 ಲಕ್ಷ ಬೆಲೆ ಹೊಂದಿದೆ.

ಮ್ಯಾಗ್ನಾ ಮ್ಯಾನುವಲ್, ಸ್ಪೋರ್ಟ್ಜ್ ಆಟೋಮ್ಯಾಟಿಕ್ ಮತ್ತು ಆಸ್ಟಾ ಮ್ಯಾನುವಲ್ ಆವೃತ್ತಿಯು ಖರೀದಿಗೆ ಲಭ್ಯವಿದ್ದು, ಉನ್ನತೀಕರಿಸಿರುವ 1.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 75-ಬಿಎಚ್‌ಪಿ ಮತ್ತು 190-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇದಲ್ಲದೆ ಹೊಸ ಎಂಜಿನ್ ಪಡೆದುಕೊಂಡಿರುವ ಗ್ರಾಂಡ್ ಐ10 ನಿಯೋಸ್ ಡಿಸೇಲ್ ಆವೃತ್ತಿಯು ಪ್ರತಿ ಲೀಟರ್‌ಗೆ 26.20 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಇದರ ಹೊರತಾಗಿ ಹೊಸ ಕಾರಿನ ಫೀಚರ್ಸ್‌ಗಳು ಪೆಟ್ರೋಲ್ ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದ್ದು, ಪೆಟ್ರೋಲ್ ಮತ್ತು ಪೆಟ್ರೋಲ್ ಟರ್ಬೋ ಆವೃತ್ತಿಗಳು ಸಹ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿವೆ. ಇನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೋಲ್ ಆವೃತ್ತಿಯು ಸಹ ಕಳೆದ ವಾರವಷ್ಟೇ ಬಿಡುಗಡೆಗೊಂಡಿದ್ದು, ಸ್ಪೋಟ್ಜ್ ಆವೃತ್ತಿಯಲ್ಲಿ ಹೊಸ ಟರ್ಬೋ ಆವೃತ್ತಿಯನ್ನು ಪರಿಚಯಿಸಲಾಗಿದೆ.

ಸಾಮಾನ್ಯ ಪೆಟ್ರೋಲ್ ಆವೃತ್ತಿಗಿಂತಲೂ ಕಡಿಮೆ ಎಂಜಿನ್ ಸಾಮಾರ್ಥ್ಯ ಹೊಂದಿದ್ದರೂ ಪರ್ಫಾಮೆನ್ಸ್ ಪ್ರಿಯರಿಗಾಗಿ ಹೆಚ್ಚಿನ ಮಟ್ಟದ ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ ಉತ್ಪಾದಿಸಲಿದ್ದು, ಹೊಸ ಎಂಜಿನ್ ಜೊತೆಗೆ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7,68,050 ಮತ್ತು ಟಾಪ್ ಎಂಡ್ ಮಾದರಿಗೆ ರೂ.7,73,350 ಬೆಲೆ ನಿಗದಿಪಡಿಸಲಾಗಿದ್ದು, ಸಾಮಾನ್ಯ ಗ್ರಾಂಡ್ ಐ10 ನಿಯೊಸ್ ಪೆಟ್ರೋಲ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5,04,990 ರಿಂದ ಟಾಪ್ ಎಂಡ್ ಮಾದರಿಯು ರೂ.8,04,450 ಬೆಲೆ ಹೊಂದಿದೆ.

ಇದೀಗ ಬಿಡುಗಡೆಯಾಗಿರುವ 1.0-ಲೀಟರ್ ಟರ್ಬೋ ಎಂಜಿನ್ ಮಾದರಿಯು ಗ್ರಾಂಡ್ ಐ10 ನಿಯೊಸ್ ಪೆಟ್ರೋಲ್ ಮಾದರಿಯಲ್ಲೇ ಹೈ ಎಂಡ್ ಆವೃತ್ತಿಯಾಗಿ ಮಾರಾಟವಾಗಲಿದ್ದು, ಸಾಮಾನ್ಯ ಗ್ರಾಂಡ್ ಐ10 ಮತ್ತು ಎಲೈಟ್ ಐ20 ನಡುವಿನ ಸ್ಥಾನ ಗಿಟ್ಟಿಸಿಕೊಂಡಿರುವ ಗ್ರಾಂಡ್ ಐ10 ನಿಯೋಸ್ ಆವೃತ್ತಿಯು ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ವಿಶೇಷ ಎನ್ನಿಸಲಿದೆ.

ಸ್ಪೋರ್ಟ್ಜ್ ಮತ್ತು ಸ್ಪೋರ್ಟ್ಜ್ ಡ್ಯುಯಲ್ ಟೋನ್ ಆವೃತ್ತಿಯಲ್ಲಿ ಪರಿಚಯಿಸಲಾಗಿರುವ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಹೈ ಎಂಡ್ ಮಾದರಿಯು 7-ಸ್ಪೀಡ್ ಮ್ಯಾನುವಲ್ ಡ್ಯುಯಲ್ ಕ್ಲಚ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

ಗ್ರಾಂಡ್ ಐ10 ನಿಯೋಸ್ ಕಾರು ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ಟಾ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹಳೆಯ ಗ್ರಾಂಡ್ ಐ10 ಆವೃತ್ತಿಗಿಂತಲೂ ಹೆಚ್ಚು ಸ್ಪೋರ್ಟಿ ಲುಕ್‌ನೊಂದಿಗೆ ಮುಂಭಾಗದ ಗ್ರಿಲ್ ಡಿಸೈನ್ ಹೊಸ ಕಾರಿಗೆ ಹೆಚ್ಚಿನ ಮಟ್ಟದ ಪ್ರೀಮಿಯಂ ಲುಕ್ ಹೊಂದಿದೆ.


Click it and Unblock the Notifications