ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಹ್ಯುಂಡೈ ಕಂಪನಿಯು ತನ್ನ ಪ್ರಸ್ತುತ ತಲೆಮಾರಿನ ಕೊನೆ ಮಾದರಿಯಾಗಿ ಬಿಎಸ್-6 ಐ20 ಕಾರನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದೀಗ ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿಯು ಬಹಿರಂಗವಾಗಿದೆ.

ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಬಿಎಸ್-6 ಐ20 ಕಾರಿನ ಟಾಪ್ ಸ್ಪೆಕ್ ಅಸ್ಟಾ(ಒ) ರೂಪಾಂತರದ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.8.31 ಲಕ್ಷಗಳಾಗಿದೆ. ಈ ಹೊಸ ಐ20 ಕಾರು ಸಾಕಷ್ಟು ಸ್ಪೋರ್ಟಿಯರ್ ಮತ್ತು ಸ್ಟೈಲಿಶ್ ಲುಕ್ ಅನ್ನು ಹೊಂದಿದೆ. ಐ20 ಹ್ಯುಂಡೈ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಐ20 ಕಾರು ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಬಿಎಸ್-6 ಐ20 ಕಾರು ಪ್ರತಿ ಲೀಟರಿಗೆ 18 ಕಿ.ಮೀ ಮೈಲೇಜ್ ಅನ್ನು ಅನ್ನು ನೀಡುತ್ತದೆ.

ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಬಿಎಸ್-6 ಐ20 ಕಾರಿನ ಮುಂಭಾಗದಲ್ಲಿ ಹೊಸ ಹನಿಕೊಂಬ್ ಗ್ರಿಲ್ ಅನ್ನು ಹೊಂದಿದೆ. ಇನ್ನು ಈ ಕಾರಿನ ಇಂಟಿರಿಯರ್‍ನಲ್ಲಿ ಮಲ್ಟಿಫಂಕ್ಷನ್ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಹೊಸ ಹ್ಯುಂಡೈ ಐ20 ಕಾರಿನಲ್ಲಿ ಆಡಿಯೊ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ಫುಲ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಗೆ ಸಜ್ಜಾದ ಹೊಸ ಹ್ಯುಂಡೈ ಐ20 ಕಾರು

ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಈ ಕಾರಿನಲ್ಲಿ 7 ಇಂಚಿನ ಇನ್ಪೋಟೇನ್‍ಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಈ ಕಾರಿನ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈನ ಕನೆಕ್ಟಿವಿಟಿ ಸೂಟ್ ಮತ್ತು ಇತರ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಬಿಎಸ್-6 ಹ್ಯುಂಡೈ ಐ20 ಕಾರಿನಲ್ಲಿ ಎಲ್‍ಇಡಿ ಹೆಡ್‍ಲೈಟ್, ಹೊಸ 16 ಡೈಮೆಂಡ್ ಕಟ್ ಅಲಾಯ್ ವ್ಹೀಲ್‍‍ಗಳು, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍‍ಗಳೊಂದಿಗೆ ಸ್ಲಿಕ್ ಒಆರ್‍‍ವಿಎಂಗಳು ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಕೂಡ ಆಳವಡಿಸಲಾಗಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಬಿಎಸ್-6 ಐ20 ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6000 ಆರ್‌ಪಿಎಂನಲ್ಲಿ 82 ಬಿಹೆಚ್‌ಪಿ ಮತ್ತು 4000 ಆರ್‌ಪಿಎಂನಲ್ಲಿ 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಲಭವಿದ್ದ ಸಿವಿಟಿ ಆಯ್ಕೆಯ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ.

ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಬಿಎಸ್-6 ಹ್ಯುಂಡೈ ಐ20 ಕಾರು ಐದು ಬಣ್ಣಗಳಲ್ಲಿ ಲಭ್ಯವಿದೆ. ಇದರಲ್ಲಿ ನಾಲ್ಕು ಸಿಂಗಲ್ ಟೋನ್ ಬಣ್ಣಗಳಾದರೆ ಒಂದು ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ನೀಡಿದೆ. ಇದರಲ್ಲಿ ಪೋಲಾರ್ ವೈಟ್, ಟೈಫೂನ್ ಸಿಲ್ವರ್, ಸ್ಟಾರ್‌ಡಸ್ಟ್ ಗ್ರೇ, ಫೈರಿ ರೆಡ್ ಮತ್ತು ಪೋಲರ್‌ವೈಟ್ / ಬ್ಲ್ಯಾಕ್ ಬಣ್ಣಗಳಾಗಿದೆ.

MOST READ: ಅನಾವರಣವಾಯ್ತು ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು

ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಬಿಎಸ್-6 ಐ20 ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದಲ್ಲದೆ ಹ್ಯುಂಡೈ ಕಂಪನಿಯು ಹೊಸ ತಲೆಮಾರಿನ ಐ20 ಕಾರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಈಗಾಗಲೇ ಹಲವು ಬಾರಿ ಈ ಕಾರು ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಬಿಎಸ್-6 ಹ್ಯುಂಡೈ ಐ20 ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಬಿಎಸ್-6 ಹ್ಯುಂಡೈ ಐ20 ಕಾರು ಮಾರುತಿ ಸುಜುಕಿ ಕಂಪನಿಯ ಬಲೆನೊ, ಫೋರ್ಡ್ ಫ್ರೀ‍‍ಸ್ಟೈಲ್, ಟಾಟಾ ಆಲ್ಟ್ರೋಜ್ ಹಾಗೂ ಹೋಂಡಾ ಜಾಜ್‍ ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Monday, May 18, 2020, 12:29 [IST]
English summary
BS6 Hyundai i20 fuel economy revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+