ಮೊಟ್ಟ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆಗೊಳಿಸಿದ ಹ್ಯುಂಡೈ

ಖ್ಯಾತ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ತನ್ನ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ಬಸ್ಸಿಗೆ ಕಂಟ್ರಿ ಎಲೆಕ್ಟ್ರಿಕ್ ಎಂಬ ಹೆಸರನ್ನಿಟ್ಟಿದೆ. ಹ್ಯುಂಡೈ ಈ ಮಿನಿ ಬಸ್ ಅನ್ನು ಡೀಸೆಲ್ ಎಂಜಿನ್ ಬಸ್‌ಗಳಿಗಿಂತ ಹೆಚ್ಚು ಆರ್ಥಿಕ ಹಾಗೂ ಪರಿಸರ ಸ್ನೇಹಿಯಾಗಿ ಬಿಡುಗಡೆಗೊಳಿಸಿದೆ.

ಮೊಟ್ಟ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆಗೊಳಿಸಿದ ಹ್ಯುಂಡೈ

ಹ್ಯುಂಡೈ ಕಂಟ್ರಿ ಎಲೆಕ್ಟ್ರಿಕ್ ಬಸ್ 15ರಿಂದ 33 ಸೀಟುಗಳನ್ನು ಹೊಂದಿದೆ. ಈ ಮಿನಿ ಬಸ್ 7,710 ಎಂಎಂ ಉದ್ದವನ್ನು ಹೊಂದಿದೆ. ಈ ಮಿನಿ ಎಲೆಕ್ಟ್ರಿಕ್ ಬಸ್ಸಿನಲ್ಲಿ 128 ಕಿ.ವ್ಯಾನಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು ಈ ಮಿನಿ ಎಲೆಕ್ಟ್ರಿಕ್ ಬಸ್ಸಿಗೆ ಪವರ್ ನೀಡುತ್ತದೆ.

ಮೊಟ್ಟ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆಗೊಳಿಸಿದ ಹ್ಯುಂಡೈ

ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಕಂಟ್ರಿ ಎಲೆಕ್ಟ್ರಿಕ್ ಮಿನಿ ಬಸ್ 250 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಬ್ಯಾಟರಿಯನ್ನು ಸ್ಟ್ಯಾಂಡರ್ಡ್ ಕಾಂಬೊ 1 ಡಿಸಿ ಸಿಸ್ಟಂನಿಂದ ಕೇವಲ 72 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮೊಟ್ಟ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆಗೊಳಿಸಿದ ಹ್ಯುಂಡೈ

ಹ್ಯುಂಡೈ ಕಂಟ್ರಿ ಎಲೆಕ್ಟ್ರಿಕ್ ಬಸ್ಸಿನಲ್ಲಿರುವ ಬ್ಯಾಟರಿಯನ್ನು ಮನೆಗಳ ಔಟ್ ಲೆಟ್ ಗಳಲ್ಲಿರುವ 220-ವೋಲ್ಟ್ ನಿಂದಲೂ ಚಾರ್ಜ್ ಮಾಡಬಹುದು. ಆದರೆ ಈ ರೀತಿಯಾಗಿ ಚಾರ್ಜ್ ಮಾಡಲುಸುಮಾರು 17 ಗಂಟೆ ಬೇಕಾಗುತ್ತದೆ. ಹ್ಯುಂಡೈ ಈ ಬಸ್ಸಿನ ಜೊತೆಗೆ 220 ವೋಲ್ಟ್ ನ ಹೋಮ್ ಚಾರ್ಜರ್ ಅನ್ನು ಪರ್ಯಾಯವಾಗಿ ನೀಡುತ್ತದೆ.

ಮೊಟ್ಟ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆಗೊಳಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಸದ್ಯಕ್ಕೆ ಈ ಬಸ್ ಅನ್ನು ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಗೊಳಿಸಿದೆ. ಹೊಸ ಎಲೆಕ್ಟ್ರಿಕ್ ಮಿನಿ ಬಸ್ ಡೀಸೆಲ್ ಬಸ್‌ಗಳಿಗಿಂತ 30%ನಷ್ಟು ಹೆಚ್ಚಿನ ವೇಗವನ್ನು ಹೊಂದಿದೆ ಎಂದು ಹ್ಯುಂಡೈ ಕಂಪನಿ ಹೇಳಿಕೊಂಡಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮೊಟ್ಟ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆಗೊಳಿಸಿದ ಹ್ಯುಂಡೈ

ಈ ಬಸ್ಸಿನಲ್ಲಿ ಎಸಿ, ಏರ್-ಓವರ್-ಹೈಡ್ರಾಲಿಕ್ಸ್ ಬ್ರೇಕ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ಹ್ಯುಂಡೈ ಕಂಪನಿಯು ಈ ಬಸ್ ಅನ್ನು ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಿದೆ. ಇವುಗಳ ಜೊತೆಗೆ ಕಂಪನಿಯು ಈ ಬಸ್ಸಿನ ಡೋರ್ ಗಳ ಬಳಿ ಹಲವು ರೀತಿಯ ಸೆನ್ಸಾರ್ ಗಳನ್ನು ಅಳವಡಿಸಿದೆ.

ಮೊಟ್ಟ ಮೊದಲ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆಗೊಳಿಸಿದ ಹ್ಯುಂಡೈ

ಪ್ರಯಾಣಿಕರು ಈ ಬಸ್‌ನಿಂದ ಇಳಿಯುವಾಗ ಅಥವಾ ಹತ್ತುವಾಗ, ಈ ಸೆನ್ಸಾರ್ ಗಳು ಡೋರ್ ಗಳನ್ನು ಮುಚ್ಚವುದಿಲ್ಲ. ಬದಲಿಗೆ ಪ್ರಯಾಣಿಕರು ಸುಲಭವಾಗಿ ಹತ್ತಲು ಹಾಗೂ ಇಳಿಯಲು ಅವಕಾಶ ನೀಡುತ್ತವೆ. ಒಂದು ವೇಳೆ ಪ್ರಯಾಣಿಕರು ಡೋರ್ ಗಳ ನಡುವೆ ಸಿಲುಕಿದರೆ, ಸೆನ್ಸಾರ್ ಗಳು ತಕ್ಷಣವೇ ಅಲಾರಂ ಮಾಡಿ ಡೋರ್ ಗಳನ್ನು ತೆರೆಯುತ್ತವೆ.

Article Published On: Tuesday, June 30, 2020, 17:41 [IST]
English summary
Hyundai introduces its first electric minibus. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+