ಯುರೋಪ್ ಮಾರುಕಟ್ಟೆಗಾಗಿ ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಹ್ಯುಂಡೈ ಕಂಪನಿಯು ಜಗತ್ತಿನ ಎಂಟನೇ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ ಯುರೋಪಿನ್ ಮಾರುಕಟ್ಟೆಗಳಿಗಾಗಿ ಹಲವಾರು ಹೊಸ ಎಸ್‌ಯುವಿ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಭಾರತದಲ್ಲೂ ವಿವಿಧ ಮಾದರಿಯ ಕಾರು ಮಾದರಿಗಳ ಮಾರಾಟದೊಂದಿಗೆ ಎರಡನೇ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೂ ಹಲವು ಹೊಸ ಕಾರು ಮಾದರಿಗಳನ್ನು ಪರಿಚಯಿಸುವ ಯೋಜನೆಯಲ್ಲಿದ್ದು, ಇದೀಗ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿರುವ ಕೊನಾ ಎನ್ ಲೈನ್ ಆವೃತ್ತಿಯನ್ನು ಅನಾವರಣಗೊಳಿಸಿದೆ.

ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಕೊನಾ ಕಾರು ಹ್ಯುಂಡೈ ನಿರ್ಮಾಣ ಪ್ರಮುಖ ಕಾರು ಮಾದರಿಗಳಲ್ಲಿ ಒಂದಾಗಿದ್ದು, ಕೊನಾ ಕಾರು ಈಗಾಗಲೇ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಮಾರಾಟವಾಗುತ್ತಿದೆ. ಇದೀಗ ಅನಾವರಣಗೊಳಿಸಿರುವ ಕಾರು ಮಾದರಿಯು ಪರ್ಫಾಮೆನ್ಸ್ ಆವೃತ್ತಿಯಾಗಿದೆ.

ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಕೊನಾ ಎನ್ ಲೈನ್ ಮಾದರಿಯು ಐಷಾರಾಮಿ ಫೀಚರ್ಸ್‌ಗಳೊಂದಿಗೆ 2.0-ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 8-ಸ್ಪೀಡ್ ಡಿಸಿಟಿ ಆಟೋ ಗೇರ್‌ಬಾಕ್ಸ್‌ನೊಂದಿಗೆ 275-ಬಿಎಚ್‌ಪಿ ಮತ್ತು 353-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಹಾಗೆಯೇ ಹೊಸ ಕಾರಿನಲ್ಲಿ ಆಲ್-ವೀಲ್ಹ್ ಡ್ರೈವ್ ಜೋಡಣೆ ಮಾಡಿರುವುದರಿಂದ ಹೊಸ ಕಾರು ಬಿಎಂಡಬ್ಲ್ಯು ಎಕ್ಸ್1 ಎಸ್‌ಯುವಿ ಕಾರಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಅತಿ ಹೆಚ್ಚು ಪರ್ಫಾಮೆನ್ಸ್ ನೀಡಬಲ್ಲ ಎಸ್‌ಯುವಿ ಮಾದರಿಯಾಗಿದ್ದು, 19-ಇಂಚಿನ ಎನ್-ಬ್ರಾಂಡ್ ಚಕ್ರಗಳು ಆಕರ್ಷಕವಾಗಿವೆ.

ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಇದೇ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ಐ30 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲೂ ಕಾಣಬಹುದಾಗಿದ್ದು, ಭಾರತದಲ್ಲಿರುವ ಬಿಡುಗಡೆಗಾಗಿ ಉದ್ದೇಶಿಸಿರುವ ಐ30 ಮಾದರಿಯು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಹೊಂದಲಿದೆ.

ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಆದರೆ ವಿದೇಶಿ ಮಾರುಕಟ್ಟೆಯಲ್ಲಿರುವ ಬಹುತೇಕ ಕಾರು ಮಾದರಿಗಳು ದುಬಾರಿ ಬೆಲೆಯೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುತೇಕ ಕಾರು ಮಾದರಿಗಳು ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಅಭಿವೃದ್ದಿಗೊಳಿಸಲಾಗುತ್ತದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಇದರಿಂದ ಕಾರು ಕಂಪನಿಗಳು ಸಾಮಾನ್ಯವಾಗಿ ಭಾರತದಲ್ಲಿ ಅದೇ ಕಾರುಗಳನ್ನು ಬಿಡುಗಡೆ ಮಾಡುವಾಗ ಬೆಲೆ ಗಮನದಲ್ಲಿಟ್ಟುಕೊಂಡು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಮಾಡುತ್ತವೆ.

ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಇದೀಗ ಬಿಡುಗಡೆಯಾಗುತ್ತಿರುವ ಕೊನಾ ಎನ್ ಲೈನ್ ಕಾರು ಕೂಡಾ ಮಧ್ಯಮ ಗಾತ್ರದ ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಸ್ಥಾನಪಡೆದುಕೊಳ್ಳಲಿದ್ದು, 2020ರ ಕೊನೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ರೂ. 35 ಲಕ್ಷದಿಂದ ರೂ.40 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಲಿದೆ.

MOST READ: ಲಾಕ್‌ಡೌನ್ ವಿನಾಯ್ತಿ ನಂತರ ಮೊದಲ ಬಾರಿಗೆ ನೆಕ್ಸಾನ್ ಇವಿ ವಿತರಣೆ ಪುನಾರಂಭಿಸಿದ ಟಾಟಾ

ಕೊನಾ ಎನ್ ಲೈನ್ ಹೊಸ ಆವೃತ್ತಿ ಪರಿಚಯಿಸಲಿದೆ ಹ್ಯುಂಡೈ

ಆದರೆ ಈ ಕಾರು ಸದ್ಯ ಯುರೋಪ್ ಮಾರುಕಟ್ಟೆಗಳಿಗಾಗಿ ಮಾತ್ರವೇ ಅಭಿವೃದ್ದಿಗೊಳಿಸಿದ್ದು, ಕೊನಾ ಎಲೆಕ್ಟ್ರಿಕ್ ಕಾರು ಮಾದರಿ ಮಾತ್ರವೇ ಭಾರತದಲ್ಲಿ ಖರೀದಿಗೆ ಲಭ್ಯವಿರಲಿದೆ. ಆದರೆ ಕೊನಾ ಬದಲಾಗಿ ಹ್ಯುಂಡೈ ಕಂಪನಿಯು ಭಾರತದಲ್ಲಿ ಪಾಲಿಸೆಡ್ ಎಸ್‌ಯುವಿ ಸೇರಿದಂತೆ ಎಂಪಿವಿ ಕಾರುಗಳನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

Article Published On: Friday, May 29, 2020, 19:23 [IST]
English summary
Hyundai Kona N line launch soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+